ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಎರಡನೇ ಅಲೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದು ರಾಜ್ಯದಲ್ಲಿ ಅತಿ ಹೆಚ್ಚು ಸಾವುನೋವು ದಾಖಲಾಗುವ ಮೂಲಕ ಸಾರ್ವಜನಿಕರಲ್ಲಿ ಭಯ ಮೂಡಿಸಿದೆ, ಇನ್ನಾದರೂ ರಾಜ್ಯ ಸರ್ಕಾರ ಮೂರನೇ ಅಲಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಮ್ಮ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ತುಮಕೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿರವರು ರಾಜ್ಯ ಸರ್ಕಾರ ಎರಡನೇ ಅಲಗೆ ಸರಿಯಾದ ಸಿದ್ಧತೆ ಮಾಡಿಕೊಳ್ಳದೆ ಇರುವುದು ಹೆಚ್ಚು ಸಾವುನೋವು ಸಂಭವಿಸಲು ಕಾರಣ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕರೋನಾ ಬಂದಾಗಿನಿಂದ ಸಾರ್ವಜನಿಕರ ಬದುಕು ಕಷ್ಟಕರವಾಗಿದೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದ ಜನರ ನೆರವಿಗೆ ಸರಿಯಾಗಿ ಸ್ಪಂದಿಸಲಿಲ್ಲ , ರಾಜ್ಯದಲ್ಲಿ ವೈದ್ಯಕೀಯ ವ್ಯವಸ್ಥೆ ಹಾಗೂ ಆಕ್ಸಿಜನ್ ಬೆಡ್ ಹಾಗೂ ವೆಂಟಿಲೇಟರ್ ವ್ಯವಸ್ಥೆಯಿಲ್ಲದೆ ರಾಜ್ಯಾದ್ಯಂತ ಕರೋನ ಸೋಂಕಿತರು ತಮ್ಮ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುವಂತ ಸ್ಥಿತಿಗೆ ರಾಜ್ಯಸರ್ಕಾರ ತಂದು ನಿಲ್ಲಿಸಿತ್ತು ಅದರ ಪರಿಣಾಮವೇ ಇಂದು ಹೆಚ್ಚು ಸಾವುನೋವು ಸಂಭವಿಸಲು ಕಾರಣವಾಗಿದೆ.
ಲಾಕ್ಡೌನ್ ನಿಂದ ಸಂಕಷ್ಟಕ್ಕೀಡಾದ ರಾಜ್ಯದ ಜನರ ನೆರವಿಗೆ ಸರಿಯಾದ ರೀತಿಯಲ್ಲಿ ನೆರವಿಗೆ ಮುಂದಾಗಲಿಲ್ಲ ಇದರ ಮೂಲಕ ರಾಜ್ಯದ ಜನರ ನಿರೀಕ್ಷೆ ಸುಳ್ಳಾಗಿದ್ದು ಸಹಾಯ ಕೇಳಿದ ಸಾರ್ವಜನಿಕರಿಗೆ ಇಲ್ಲಸಲ್ಲದ ಸಬೂಬುಗಳನ್ನು ಹೇಳಿ ರಾಜ್ಯ ಸರ್ಕಾರ ಬೇಜವಾಬ್ದಾರಿತನವನ್ನು ತೋರಿಸಿದೆ.
ಇನ್ನಾದರೂ ಕರೋನ ಮೂರನೇ ಅಲಗೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು ಇನ್ನು ವಿಜ್ಞಾನಿಗಳು ಹಾಗೂ ಕೋವಿದ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಮೂರನೇ ಅಲೆಯಲ್ಲಿ ಮತ್ತಷ್ಟು ಹೆಚ್ಚಿನ ಸಾವು ನೋವು ಸಂಭವಿಸಲಿದ್ದು ಮುಖ್ಯವಾಗಿ ನಮ್ಮ ಮುಂದಿನ ಪೀಳಿಗೆಯ ಮಕ್ಕಳು ಹಾಗೂ ನಮ್ಮ ಭವಿಷ್ಯದ ರೂವಾರಿಗಳಾದ ಮಕ್ಕಳ ಭವಿಷ್ಯ ಹಾಗೂ ಜೀವಕ್ಕೆ ಯಾವುದೇ ರೀತಿ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ರಾಜ್ಯದಲ್ಲಿ ಅಗತ್ಯವಾಗಿರುವ ಆಕ್ಸಿಜನ್ ಬೆಡ್, ಪಿಡಿಯಾಟ್ರಿಕ್ ಡಾಕ್ಟರ್ಸ್, ಪಿಡಿಯಾಟ್ರಿಕ್ ವೆಂಟಿಲೇಟರ್ ಸೇರಿದಂತೆ ಹಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಮೂರನೇ ಅಲೆಗೆ ತಡೆಗೆ ಸಜ್ಜಾಗಬೇಕು ಇದರ ಮೂಲಕ ಸಾರ್ವಜನಿಕರ ನೆರವಿಗೆ ಮುಂದಾಗಬೇಕು ಎಂದರು.