ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರುವುದು ಎಎಪಿ ಪಕ್ಷದ ಗುರಿ_ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಎಎಪಿ ಪಕ್ಷದ ಮುಖಂಡ ಭಾಸ್ಕರ್ ರಾವ್ .

ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರುವುದು ಎಎಪಿ ಪಕ್ಷದ ಗುರಿ_ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಎಎಪಿ ಪಕ್ಷದ ಮುಖಂಡ ಭಾಸ್ಕರ್ ರಾವ್ .

 

 

ತುಮಕೂರು_ ಕರ್ನಾಟಕ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಶುರುವಾಗಲು ಎಲ್ಲರೂ ಅಮ್ ಆದ್ಮಿ ಪಕ್ಷಕ್ಕೆ ಸಹಕಾರ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ್ ರಾವ್ ತಿಳಿಸಿದ್ದಾರೆ.

 

 

ತುಮಕೂರಿನಲ್ಲಿ AAP ಪಕ್ಷದ  ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ  ಪತ್ರಕರ್ತರೊಂದಿಗೆ ಮಾತನಾಡಿದ ಅವರು ಆಮ್ ಆದ್ಮಿ ಪಕ್ಷದ ಅಜೆಂಡಾ ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರುವುದು ನಮ್ಮ ಪಕ್ಷದ ಗುರಿಯಾಗಿದೆ ಈ ಮೂಲಕ ಉತ್ತಮ ಶಿಕ್ಷಣ, ಸಾರಿಗೆ ,ವೈದ್ಯಕೀಯ ಸೇರಿದಂತೆ ಹಲವು ಬದಲಾವಣೆಗಳನ್ನು ರಾಜ್ಯದಲ್ಲಿ ತರಲು ನಮ್ಮ ಪಕ್ಷ ಮುಂದಾಗಲಿದೆ ಎಂದು ತಿಳಿಸಿದ ಅವರು ರಾಜ್ಯದಲ್ಲಿ ಯಾವುದೇ ಸಂಪನ್ಮೂಲ ಕೊರತೆ ಇಲ್ಲ ರಾಜ್ಯದಲ್ಲಿ ಸಾಕಷ್ಟು ಆದಾಯ ಸರ್ಕಾರಕ್ಕೆ ಬರುತ್ತಿದ್ದು ಈ ಮೂಲಕ ರಾಜ್ಯದಲ್ಲಿ ಬದಲಾವಣೆ ತರುವುದು ನಮ್ಮ ಪಕ್ಷದ ಗುರಿ ಹಾಗಾಗಿ ರಾಜ್ಯದ ಜನತೆ ತಮ್ಮ ಪಕ್ಷಕ್ಕೆ ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ .

 

ಆದರೆ ಇಂದು ಜನರ ಬದುಕಿನಲ್ಲಿ ಹಲವು ವಿಚಾರಗಳಲ್ಲಿ ಒಡಕು ಮೂಡಿಸುತ್ತಿದ್ದು ಎಲ್ಲಾ ವಿಚಾರದಲ್ಲೂ ಜಾತಿ ಹಾಗೂ ಧರ್ಮಗಳ ನಡುವೆ ನಿರ್ಬಂಧ ತರುತ್ತಿದ್ದಾರೆ ಎಂದು ಅವರು ಹಾಗಾದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ರಾಜ್ಯದ ಏನು ಎಂಬುದು ಜನತೆಗೆ ಸರ್ಕಾರದ ಅಜೆಂಡಾ ಏನು ಎನ್ನುವುದು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

 

 

 

ಇತ್ತೀಚಿನ ದಿನದಲ್ಲಿ ಹಿಜಾಬ್, ಹಲಾಲ್, ವ್ಯಾಪಾರ ಸೇರಿದಂತೆ ಪ್ರತಿನಿತ್ಯ ಒಂದಲ್ಲ ಒಂದು ಗೊಂದಲಗಳನ್ನು ಸೃಷ್ಟಿ ಮಾಡುತ್ತಾರೆ ಎಲ್ಲದರಲ್ಲೂ ನಿರ್ಬಂಧ ಹೇರುವುದು ಸರಿಯಲ್ಲ ಹಾಗಾಗಿ ಕೂಡಲೇ ಸರ್ಕಾರ ಹಾಗೂ ಬಿಜೆಪಿ ಪಕ್ಷದ ಅಜೆಂಡಾ ಏನು ಎಂಬುದನ್ನು ರಾಜ್ಯದ ಜನತೆಯ ಮುಂದೆ ಇಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 

 

ಇನ್ನು ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಇಂಥ ನಿರ್ಬಂಧ ಹಾಗೂ ಗೊಂದಲಗಳು ಸೃಷ್ಟಿ ಆಗಿರಲಿಲ್ಲ ಆದರೆ ಇತ್ತೀಚಿನ ದಿನದಲ್ಲಿ ಹಲವು ಗೊಂದಲಗಳನ್ನು ಸೃಷ್ಟಿ ಮಾಡುತ್ತಿದ್ದಾರೆ ಈ ಮೂಲಕ ರಾಜ್ಯದ ಜನತೆ ಹಾಗೂ ಧರ್ಮಗಳ ನಡುವೆ ಒಡಕು ಮೂಡಿಸುತ್ತಿದ್ದಾರೆ ಎಂದರು.

 

 

ಹಾಗಾಗಿ ಇಂತಹ ಗೊಂದಲಗಳಿಗೆ ಹಾಗೂ ವಿವಾದಗಳಿಗೆ ಎಎಪಿ ಪಕ್ಷದ ಮನ್ನಣೆ ನೀಡುವುದಿಲ್ಲ ಎಎಪಿ ಪಕ್ಷದ ಯಾವ ಮಹಾ ನಾಯಕರಾಗಲಿ, ರಾಜ್ಯ ನಾಯಕರಾಗಲಿ ಯಾರು ಕೂಡ ಧರ್ಮ ಹಾಗೂ ಜಾತಿಗಳ ಬಗ್ಗೆ ಗೊಂದಲ ಸೃಷ್ಟಿ ಮಾಡಲು ಮುಂದಾಗುವುದಿಲ್ಲ ಎಂದಿದ್ದಾರೆ.

 

 

 

ದೇಶದಲ್ಲಿ ಇರುವ ನಾವೆಲ್ಲರೂ ಮುಖ್ಯವಾಗಿ ಭಾರತೀಯರು ಹಾಆಗಿ ನಮ್ಮ ಪಕ್ಷ ಅಭಿವೃದ್ಧಿ ಕಡೆ ಗಮನ ಹರಿಸುತ್ತದೆ ಹಾಗಾಗಿ ನಾವೆಲ್ಲರೂ ಅಭಿವೃದ್ಧಿಯ ಪರವಾಗಿ ಮಾತನಾಡ ಬೇಕು ಹಾಗೂ ಬದಲಾವಣೆಯನ್ನು ತರಬೇಕಾಗಿದೆ ಎಂದರು.

 

 

ಇನ್ನು ದೇವಸ್ಥಾನಗಳಲ್ಲಿ ಸಾಮರಸ್ಯ ಸಹೋದರತ್ವ ಕಾಪಾಡುವುದು ಮುಖ್ಯ ಅಂದು ದೇವಸ್ಥಾನಗಳಲ್ಲಿ ಸಾಮಾಜಿಕ ಚಟುವಟಿಕೆಗಳ ಕೇಂದ್ರ ಬಿಂದುವಾಗಿತ್ತು ಇವತ್ತು ಸರ್ಕಾರದ ವಶದಲ್ಲಿದೆ ನಮಗೆ ಅವಕಾಶ ಸಿಕ್ಕರೆ ಇದೆಲ್ಲದರ ಮುಕ್ತ ಮಾಡುತ್ತೇವೆ ಎಂದರು.

 

 

ಇಂದಿನ ದಿನಗಳಲ್ಲಿ ಹಲವು ಗೊಂದಲಗಳಿಂದ ಜನಸಾಮಾನ್ಯರ ಮನಸ್ಸಿನಲ್ಲಿ ಹಿಂದೂ-ಮುಸ್ಲಿಂ ಸರ್ಕಾರ ಇದೆಯಾ ಎನ್ನುವ ಮನೋಭಾವನೆ ರಾಜ್ಯದ ಜನತೆಯ ಮನಸ್ಸಿನಲ್ಲಿ ಮೂಡಿದ್ದು ಇಂದಿನ ರಾಜ್ಯ ಸರ್ಕಾರ ಭ್ರಷ್ಟಾಚಾರ ದಿಂದ ತುಂಬಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

 

 

ಮುಂದಿನ ದಿನದಲ್ಲಿ ನಮ್ಮ ಪಕ್ಷ ರಾಜ್ಯದ ಎಲ್ಲಾ ಸ್ವಾಮೀಜಿಗಳನ್ನು ಬೇಟಿ ಮಾಡಿ ಆಶೀರ್ವಾದ ಪಡೆಯಲಿದ್ದೇವೆ ಹಾಗೂ ರಾಜ್ಯದ ಎಲ್ಲಾ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಸಿಖ್ ಧರ್ಮ ಗುರುಗಳನ್ನು ಭೇಟಿ ಮಾಡಲಿದ್ದೇವೆ ಎಂದರು.

 

 

ಇನ್ನು ಮುಂಬರುವ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ತಾವು ಸ್ಪರ್ಧೆ ಮಾಡುತ್ತಿರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಇನ್ನೂ ಚುನಾವಣೆಗೆ ಸಾಕಷ್ಟು ಕಾಲಾವಕಾಶ ಇದೆ ನಮ್ಮ ಪಕ್ಷದ ನಾಯಕರು ಇದ್ದಾರೆ ಅವರ ತೀರ್ಮಾನದಂತೆ ನೋಡೋಣ ಎಂದು ನಯವಾಗಿಯೇ ನುಣುಚಿಕೊಂಡಿದ್ದಾರೆ.

 

ವರದಿ_ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!