ದೇವರಾಯನ ದುರ್ಗದ ಬೆಟ್ಟದಲ್ಲಿ ಬೆಂಕಿ ಯುವತಿ ಸಾವು ಮತ್ತಿಬ್ಬರು ಯುವತಿಯರು ಗಂಭೀರ ಗಾಯ.
ತುಮಕೂರು – ಇತಿಹಾಸ ಪ್ರಸಿದ್ಧ ದೇವರಾಯನ ದುರ್ಗದ ಜಾತ್ರೆಗೆ ಆಗಮಿಸುತ್ತಿದ್ದ ಯುವತಿಯರಿಗೆ ಆಕಸ್ಮಿಕವಾಗಿ ಬೆಟ್ಟದಲ್ಲಿನ ಬೆಂಕಿ ತಗುಲಿ ಯುವತಿ ಒಬ್ಬಳು ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ವೇಳೆ ಯುವತಿ ಒಬ್ಬಳು ಮೃತಪಟ್ಟಿದ್ದು ಯುವತಿ ಜೊತೆಗಿದ್ದ ಇಬ್ಬರು ಯುವತಿಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ದೇವರಾಯನ ದುರ್ಗದ ಜಾತ್ರೆ ನಡೆಯುತ್ತಿದ್ದು ಇಂದು ರಥೋತ್ಸವ ನಡೆಯುತ್ತಿದ್ದ ಪ್ರಯುಕ್ತ ಜಾತ್ರೆಗಾಗಿ ಆಗಮಿಸುತ್ತಿದ್ದ ಇರಕ್ಸಂದ್ರ ಕಾಲೋನಿ ಮೂಲದ ಯುವತಿ ಮಾನಸ ಬೆಂಕಿಯ ಚೆನ್ನಾಗಿ ಮೃತಪಟ್ಟಿದ್ದಾಳೆ.ಮತ್ತಿಬ್ಬರು ಯುವತಿಯರ ಹೆಸರು ತಿಳಿದು ಬಂದಿಲ್ಲ.
ಇರಕಸಂದ್ರ ಬಳಿಯ ನಾಗೇನಹಳ್ಳಿ ಗ್ರಾಮದಿಂದ ಬೆಟ್ಟಕ್ಕೆ ಹತ್ತುವ ವೇಳೆ ಆಕಸ್ಮಿಕವಾಗಿ ಬೆಟ್ಟಕ್ಕೆ ಬೆಂಕಿ ತಗುಲಿದ್ದು ಯುವತಿಯರ ಪಾಲಿಗೆ ಶಾಪವಾಗಿ ಬಂದಿದ್ದು ಮೂವರು ಯುವತಿಯರು ಬೆಂಕಿಯ ಕೆನ್ನೆಗೆ ಸಿಲುಕಿದ್ದರು ಸಂಪೂರ್ಣವಾಗಿ ಸುಟ್ಟು ಹೋಗಿದ್ದ ಈರಕಸಂದ್ರ ಕಾಲೋನಿ ಮೂಲದ ಮಾನಸ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿ ಎಳೆದರೆ ಮತ್ತಿಬ್ಬರು ಯುವತಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ನಡೆದ ಕೂಡಲೇ ಸ್ಥಳೀಯ ಪೊಲೀಸರು ಭೇಟಿ ನೀಡಿದ್ದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ವ ವಾಡ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ವರದಿ ಮಾರುತಿ ಪ್ರಸಾದ್ ತುಮಕೂರು