ಆಪರೇಷನ್ ಗೆ ದಾಖಲಾಗಿದ್ದ ಮಹಿಳೆ ದಾರುಣ ಸಾವು ವೈದ್ಯರ ನಿರ್ಲಕ್ಷ ಆರೋಪ.

ಆಪರೇಷನ್ ಗೆ ದಾಖಲಾಗಿದ್ದ ಮಹಿಳೆ ದಾರುಣ ಸಾವು ವೈದ್ಯರ ನಿರ್ಲಕ್ಷ ಆರೋಪ.

 

 

 

 

 

ತುಮಕೂರು – ಮದುವೆಯಾಗಿ 5 ವರ್ಷಗಳಿಂದ ಮಕ್ಕಳಿಲ್ಲ ಎಂದು ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ವೈದ್ಯರ ಸೂಚನೆಯಂತೆ ಆಪರೇಷನ್ ಗೆ ದಾಖಲಾಗಿದ್ದು ಆಪರೇಷನ್ ಮಾಡುವ ವೇಳೆ ಮಹಿಳೆ ಧಾರುಣ ಸಾವನಪ್ಪಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ.

 

 

 

ತುಮಕೂರು ನಗರದ ಬಟವಾಡಿಯಲ್ಲಿ ಇರುವ ಚಿನ್ಮಯ ಹಾಸ್ಪಿಟಲ್ ಮತ್ತು ಫರ್ಟಿಲಿಟಿ ಸೆಂಟರ್ನಲ್ಲಿ ವೈದ್ಯರ ಸೂಚನೆಯಂತೆ ಕಳೆದ ಎರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಮಾನಸ (30) ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಆಪರೇಷನ್ಗಾಗಿ ದಾಖಲಾಗಿದ್ದರು.

 

 

 

ಇನ್ನು ಗರ್ಭಕೋಶದಲ್ಲಿ ಗೆಡ್ಡೆ ಇದೆ ಎಂದು ತಿಳಿಸಿದ್ದ ವೈದ್ಯರು (fibroid on uterus) ಇದರ ಹಿನ್ನೆಲೆಯಲ್ಲಿ ಮಾನಸ ಆಪರೇಷನ್ಗಾಗಿ ದಾಖಲಾಗಿದ್ದ ವೇಳೆ ಆಪರೇಷನ್ ಮಾಡುವ ಸಂದರ್ಭದಲ್ಲಿ ಮಾನಸ ಸಾವನ್ನಪ್ಪಿದ್ದು ಇದರಿಂದ ರೊಚ್ಚಿಗೆದ್ದ ಮಾನಸ ಕುಟುಂಬಸ್ಥರು ಆಸ್ಪತ್ರೆ ಬಳಿ ಜಮಾಯಿಸಿ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

 

 

 

 

ಇದೇ ಸಂದರ್ಭದಲ್ಲಿ ಮಾನಸ ಕುಟುಂಬಸ್ಥರು ವೈದ್ಯರ ನಿರ್ಲಕ್ಷದಿಂದಲೇ ಮಾನಸ ಸಾವನ್ನಪ್ಪಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದು ವೈದ್ಯರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು .

 

 

 

 

ಮೃತಪಟ್ಟ ಮಹಿಳೆ ಮಾನಸ ತುಮಕೂರಿನ ಗಂಗಸಂದ್ರದ ನಿವಾಸಿಯಾಗಿದ್ದು ತುಮಕೂರು ವಿಶ್ವವಿದ್ಯಾನಿಲಯದಲ್ಲಿ (Zoology department)ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದುರು.

 

 

 

 

ಇನ್ನು ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಹೊಸ ಬಡಾವಣೆ ಪೊಲೀಸರು ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದು ತನಿಖೆ ಕೈಗೊಂಡಿದ್ದಾರೆ.

 

 

 

 

ಹೊಸ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

Leave a Reply

Your email address will not be published. Required fields are marked *

You cannot copy content of this page

error: Content is protected !!