ತುಮಕೂರಿನ ಅಂತರಸನಹಳ್ಳಿ ಮಾರುಕಟ್ಟೆ ಬಳಿ ಸರಣಿ ಅಪಘಾತ

ಅಂತರಸನಹಳ್ಳಿ ಮಾರುಕಟ್ಟೆ ಬಳಿ ಸರಣಿ ಅಪಘಾತ

 

ತುಮಕೂರು ನಗರದ ಅಂತರಸನಹಳ್ಳಿ ಮಾರುಕಟ್ಟೆ ಬಳಿ ಶುಕ್ರವಾರ ಸಂಜೆ 5 ಗಂಟೆ ಸಮಯದಲ್ಲಿ ಕಾರ್ ಗೆ ನಡುವೆ ಸರಣಿ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೆ ಕಾರ್ ಚಾಲಕರು ಮತ್ತು ಪ್ರಯಾಣಿಕರು ಪಾರಾದ ಘಟನೆ ನಡೆದಿದೆ.

 

ಅಂತರಸನಹಳ್ಳಿ ಎಪಿಎಂಸಿ ಮಾರುಕಟ್ಟೆಯ ಬಳಿ ಸ್ಕಾರ್ಪಿಯೋ ವಾಹನದ ಚಾಲಕನ ಅಜಾಗರೂಕತೆಯಿಂದ ಆಗಿ ಮುಂದೆ ಚಲಿಸುತ್ತಿದ್ದ ಬುಲೆರೋ ವಾಹನಕ್ಕೆ ಗುದ್ದಿದ ಪರಿಣಾಮ ಬುಲೆರೋ ವಾಹನ ಹೋಗಿ ಅದರ ಮುಂದಿನ ಇನ್ನೂ ನೊಂದಣಿಯಾಗದ ಹೊಸ ಮಾರುತಿ ಬಲೆನೊ ಕಾರ್ ಗೆ ಗುದ್ದಿ ಸರಣಿ ಅಪಘಾತ ಸಂಭವಿಸಿದೆ.

 

ಅಪಘಾತ ನಡೆದ ಕೂಡಲೇ ಸಾರ್ವಜನಿಕರು ಧಾವಿಸಿ ವಾಹನಗಳನ್ನು ರಸ್ತೆ ಬದಿಗೆ ತಂದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇನ್ನು ಅಪಘಾತದಲ್ಲಿ ಸ್ಕಾರ್ಪಿಯೋ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ರೇಡಿಯೇಟರ್ ಮತ್ತು ಎಂಜಿನ್ ಸಂಪೂರ್ಣ ಹಾಳಾಗಿದೆ, ಹಾಗೆಯೇ ಬುಲೆರೋ ಹಾಗೂ ಮಾರುತಿ ಬಲೆನೊ ಕಾರ್ ನ ಬಲಭಾಗ ಸಂಪೂರ್ಣ ಜಖಂಗೊಂಡಿದೆ.ತುಮಕೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

 

 

ವರದಿ_ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!