ಪಂಚರತ್ನ ಯಾತ್ರೆ ವೇಳೆ ಗಮನ ಸೆಳೆದ ಸ್ಕೂಲ್ ಬ್ಯಾಗ್ ಹಾರ.

ಪಂಚರತ್ನ ಯಾತ್ರೆ ವೇಳೆ ಗಮನ ಸೆಳೆದ ಸ್ಕೂಲ್ ಬ್ಯಾಗ್ ಹಾರ.

 

 

ತುಮಕೂರು_ಜೆಡಿಎಸ್ ಪಕ್ಷದ ವತಿಯಿಂದ ರಾಜ್ಯದ್ಯಂತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ಕಾರ್ಯಕ್ರಮಗಳ ಒಳಗೊಂಡ ಯೋಚನೆಗಳನ್ನು ರಾಜ್ಯದ ಜನತೆಗೆ ತಲುಪಿಸುವ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಮಹತ್ವಕಾಂಕ್ಷೆ ಯೋಜನೆಯದ ಪಂಚರತ್ನ ಯಾತ್ರೆ ಅದ್ದೂರಿಯಾಗಿ ನಡೆಯುತ್ತಿದ್ದು.

 

 

ಇಂದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಪಂಚರತ್ನ ಯಾತ್ರೆ ಸಾಗುತ್ತಿದೆ. ಇನ್ನು ನೆಚ್ಚಿನ ನಾಯಕನಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ಪಂಚ ರತ್ನ ಯಾತ್ರೆ ಸಾಗುವ ಎಲ್ಲಾ ಕ್ಷೇತ್ರದಲ್ಲೂ ವಿಭಿನ್ನ ಹಾರಗಳನ್ನ ನೆಚ್ಚಿನ ನಾಯಕನಿಗೆ ಹಾಕುವ ಮೂಲಕ ಪಕ್ಷದ ಕಾರ್ಯಕರ್ತರು ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿರುವುದು ಒಂದೆಡೆಯಾದರೆ.

 

 

 

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಂಚಿಗಾನ ಹಳ್ಳಿಯ ಗ್ರಾಮದ ಗ್ರಾಮಸ್ಥರು ಮುಖ್ಯಮಂತ್ರಿ ಕುಮಾರಸ್ವಾಮಿ ರವರಿಗೆ ಶಾಲಾ ವಿದ್ಯಾರ್ಥಿಗಳು ಬಳಸುವ ಸ್ಕೂಲ್ ಬ್ಯಾಗ್ ಹಾರ ವನ್ನು ಕಂಚಿಗಾನಹಳ್ಳಿ ಗ್ರಾಮಸ್ಥರು ಹಾಗೂ ಜೆಡಿಎಸ್ ಕಾರ್ಯಕರ್ತರು ಬಡವರ ಮಕ್ಕಳಿಗೂ ಕಾನ್ವೆಂಟ್ ಶಿಕ್ಷಣ ಬೇಕ್ರಯ ಎನ್ನುವ ಘೋಷ ವಾಕ್ಯದೊಂದಿಗೆ ಸ್ಕೂಲ್ ಬ್ಯಾಗ್ ಹಾರ ತಯಾರಿಸಿ ಗ್ರಾಮೀಣ ಭಾಗದ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಒತ್ತಾಯವನ್ನ ಹಾರದ ಮೂಲಕ ಕುಮಾರಸ್ವಾಮಿ ಅವರ ಗಮನವನ್ನು ಸೆಳಯಲು ವಿನೂತನ ಪ್ರಯತ್ನ ಮಾಡುವ ಮೂಲಕ ರಾಜ್ಯದ ಗಮನವನ್ನು ಸಿರಾ ತಾಲೂಕಿನ ಕಂಚಿಗಾನಹಳ್ಳಿ ಗ್ರಾಮಸ್ಥರು ಮಾಡಿದ್ದಾರೆ.

 

 

 

ವರದಿ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!