ಬೈಕ್ ಗಳ ನಡುವೆ ಡಿಕ್ಕಿ ಓರ್ವ ಸ್ಥಳದಲ್ಲೇ ಸಾವು.

ಬೈಕ್ ಗಳ ನಡುವೆ ಡಿಕ್ಕಿ ಓರ್ವ ಸ್ಥಳದಲ್ಲೇ ಸಾವು.

 

 

ಊರ್ಡಿಗೆರೆ :ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ 7:30 ರ ಸಮಯದಲ್ಲಿ ಊರ್ಡಿಗೆರೆ ಪೆಟ್ರೋಲ್ ಬಂಕ್ ಹತ್ತಿರ ನಡೆದಿದೆ.

 

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ನಜೀರ್ (40) ಎನ್ನಲಾಗಿದ್ದು ಊರ್ಡಿಗೆರೆ ಯಲ್ಲಿ ಬೈಕ್ ಮ್ಯಾಕನಿಕ್ ವೃತ್ತಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಬೆಂಗಳೂರಿನಿಂದ ಆಂಧ್ರದ ಅಗಳಿಗೆ ರಾಯಲ್ ಎನ್ ಫೀಲ್ಡ್ ಬೈಕ್   ನಲ್ಲಿ ಹೋಗುತ್ತಿದ್ದಾಗ ಕೊರಟಗೆರೆ ಕಡೆಯಿಂದ ಬಂದ ಸ್ಪಲೇಂಡರ್ ಬೈಕ್ ಡಿಕ್ಕಿ ಹೊಡೆದು ಪರಿಣಾಮ ಈ ದುರ್ಘಟನೆ ನಡೆದಿದೆ.

 

ಊರ್ಡಿಗೆರೆ ಓಟ್ ಪೋಸ್ಟ್ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಈ ಬಗ್ಗೆ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!