ಪೋಷಕರಿಂದ ದೂರವಿದ್ದ ಮಗು ಹೆತ್ತವರ ಮಡಿಲು ಸೇರಲು ಹರಸಾಹಸ .
ತುಮಕೂರು_ಒಂದುವರೆ ವರ್ಷದ ಮಗುವೊಂದು ಪೋಷಕರ ಮಡಿಲು ಸೇರಲು ಕಾತುರದಿಂದ ಕಾಯುತ್ತಿದ್ದು ಕಾರಣಾಂತರದಿಂದ ಮಗು ಮಕ್ಕಳ ಸಾಂತ್ವನ ಕೇಂದ್ರ ತಲುಪಿರುವ ಘಟನೆ ವರದಿಯಾಗಿದೆ.
ಪ್ರಕರಣದ ಹಿನ್ನೆಲೆ
ಪಾವಗಡ ಮೂಲದ ಮಣಿ ಹಾಗೂ ಕುಣಿಗಲ್ ತಾಲೂಕಿನ ಬಿಳಗುಂದ ಗ್ರಾಮದ ಶ್ರುತಿ ಎಂಬ ದಂಪತಿಯ ಒಂದುವರೆ ವರ್ಷದ ಮಗುವನ್ನು ಮಣಿ ತನ್ನ ಪತ್ನಿಯ ಆರೋಗ್ಯ ಸರಿಯಿಲ್ಲದ ಕಾರಣ ಮಗುವನ್ನು ನೆರೆಯ ಆಂಧ್ರಪ್ರದೇಶದ ಸ್ನೇಹಿತರ ಮನೆಯಲ್ಲಿ ಬಿಟ್ಟಿದ್ದರು. ಆದರೆ ಸ್ಥಳೀಯರು ಅನುಮಾನಗೊಂಡು ಅನಂತಪುರದ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನಗೊಂಡು ಮಗುವನ್ನು ತುಮಕೂರಿನ ಸಾಂತ್ವನ ಕೇಂದ್ರಕ್ಕೆ ತಂದು ಬಿಟ್ಟಿರುವ ಪ್ರಕರಣ ವರದಿಯಾಗಿದ್ದು ಸದ್ಯ ಮಗು ತುಮಕೂರಿನ ಮಕ್ಕಳ ಸ್ವೀಕಾರ ಕೇಂದ್ರದ ಲ್ಲಿದ್ದು ಪೋಷಕರ ಮಡಿಲು ಸೇರಲು ಪರದಾಡುತ್ತಿದೆ.
ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೋಷಕರಾದ ಮಣಿ ಹಾಗೂ ಶೃತಿ ರವರು ಆರೋಗ್ಯ ಸರಿಯಿಲ್ಲದ ಕಾರಣ ಅನಂತಪುರದ ಸ್ನೇಹಿತರ ಮನೆಯಲ್ಲಿ ಬಿಟ್ಟಿದ್ದು ಕೆಲವರು ಸುಖ ಸುಮ್ಮನೆ ಅನುಮಾನಗೊಂಡು ದೂರು ನೀಡಿದ್ದಾರೆ ಆದರೆ ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳಿಗೆ ಒದಗಿಸಿ ತನ್ನ ಮಗುವನ್ನ ತನ್ನ ಮನೆಗೆ ಕರೆದುಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಮಕ್ಕಳ ಸ್ವೀಕಾರ ಕೇಂದ್ರದ ಅಧಿಕಾರಿಗಳು ನೆರೆಯ ಆಂಧ್ರಪ್ರದೇಶದ ಮಕ್ಕಳ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಅನುಮಾನ ಬಂದ ಹಿನ್ನೆಲೆಯಲ್ಲಿ ತಮ್ಮನ ಸಂಪರ್ಕ ಮಾಡಿ ಮಗುವನ್ನ ತಮಗೆ ನೀಡಿದ್ದು ಪೋಷಕರು ಇದಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳು ಹಾಗೂ ಸ್ಪಷ್ಟೀಕರಣ ನೀಡಿದರೆ ಮಗುವನ್ನು ಪೋಷಕರಿಗೆ ನೀಡುವಲ್ಲಿ ನಾವು ಸಿದ್ದರಿರುವದಾಗಿ ತಿಳಿಸಿದ್ದು ಸೋಮವಾರದ ನಂತರ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಅದೇನೇ ಇರಲಿ ಹೆತ್ತ ತಂದೆ-ತಾಯಿಯ ಆರೈಕೆಯಲ್ಲಿ ಇರಬೇಕಾದ ಮಗು ಬಾಲ ಮಂದಿರದಲ್ಲಿ ದಿನ ಕಳೆಯುವ ಪರಿಸ್ಥಿತಿ ಬಂದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.