ಗೌರಿಶಂಕರ್ ವಿಧಾನಸಭಾ ಚುನಾವಣೆಗೆ ನಿಲ್ಲಲು ಗ್ರೀನ್ ಸಿಗ್ನಲ್ ನೀಡಿದ ಸುಪ್ರೀಂ
ತುಮಕೂರು : ಇತ್ತೀಚಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಡಿ.ಸಿ.ಗೌರಿಶಂಕರ್ ರವರು ಕಳೆದ 2018ರ ಚುನಾವಣೆಯಲ್ಲಿ ನಕಲಿ ಬಾಂಡ್ ವಿತರಿಸಿ ಜನರಿಗೆ ಮೋಸ ಮಾಡಿದ್ದಾರೆ ಹಾಗಾಗಿ ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಸುದೀರ್ಘವಾದ ವಾದ ಮಂಡನೆಯಾಗಿ ತೀರ್ಪನ್ನು ಒಂದೇ ಸಾಲಿನಲ್ಲಿ ನೀಡಿದ್ದರು, ಅದನ್ನು ಪ್ರಶ್ನಿಸಿ ಗೌರಿಶಂಕರ್ ರವರು ಸುಪ್ರೀಂ ಕೋರ್ಟ್ ಕದವನ್ನು ತಟ್ಟಿದ್ದರು. ಅಲ್ಲಿ ಅವರ ಅಪೀಲು ಒಪ್ಪಿಗೆಯಾಗಿ ಚುನಾವಣೆಗೆ ಸ್ಪರ್ಧಿಸಲು ಯಾವುದೇ ರೀತಿಯಾದ ಅಡ್ಡಿಯಿಲ್ಲ, ಸ್ಪರ್ಧಿಸಬಹುದಾಗಿದೆ ಸದ್ಯಕ್ಕೆ ಕೇಸ್‌ನ್ನು ತಡೆ ಹಿಡಿಯಲಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದ್ದು.
ಚುನಾವಣೆಯ ಹೊಸ್ತಿಲಲ್ಲಿ ತುಮಕೂರು ಗ್ರಾಮಾಂತರ ಶಾಸಕ ಡಿಸಿ ಗೌರಿಶಂಕರ್ ಸೇರಿದಂತೆ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹಾಗೂ ಮತದಾರರಿಗೆ ಕೊಂಚ ಆತಂಕ ಎದುರಾಗಿತ್ತು .
ಸುಪ್ರೀಂ ಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆ ತುಮಕೂರಿನಲ್ಲಿ ಶಾಸಕ ಡಿ.ಸಿ ಗೌರಿಶಂಕರವರ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮ ಆಚರಿಸಿದ್ದಾರೆ ಇನ್ನು ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಜೆಡಿಎಸ್ ಮುಖಂಡರಾದ ಹಿರೇಹಳ್ಳಿ ಮಹೇಶ್, ಹಾಲ್ನೂರು ಅನಂತ್ ಸೇರಿದಂತೆ ಹಲವು ಮುಖಂಡರು ಸಂತಸ ವ್ಯಕ್ತಪಡಿಸಿದ್ದು ಸುಪ್ರೀಂ ಕೋರ್ಟ್ ತೀರ್ಪನ್ನ ಸ್ವಾಗತಿಸಿದ್ದು ಇನ್ನು ನಮ್ಮ ಕ್ಷೇತ್ರದ ಜನಪ್ರಿಯ ಶಾಸಕರಾದ ಡಿಸಿ ಗೌರಿಶಂಕರ್ ಅವರ ಗೆಲುವಿಗಾಗಿ ಇಂದಿನಿಂದ ಹಗಲಿರುಳು ಶ್ರಮ ಹಾಕಿ ಅವರನ್ನು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಲು ಈಗಿನಿಂದಲೇ ಮತ್ತಷ್ಟು ಕೆಲಸ ನಿರ್ವಹಿಸಲು ಮುಂದಾಗುತ್ತೇವೆ ಎಂದರು.