ತುಮಕೂರು ನಗರ ಕಾಂಗ್ರೆಸ್ ನಲ್ಲಿ ಬಂಡಾಯ ಹಿನ್ನಲೆ – ಡಾ ಜಿ ಪರಮೇಶ್ವರ್ ಪ್ರತಿಕ್ರಿಯ.

ತುಮಕೂರು ನಗರ ಕಾಂಗ್ರೆಸ್ ನಲ್ಲಿ ಬಂಡಾಯ ಹಿನ್ನಲೆ – ಡಾ ಜಿ ಪರಮೇಶ್ವರ್ ಪ್ರತಿಕ್ರಿಯ.

 

 

ತುಮಕೂರು – ಶಫಿ ಅಹಮದ್ ಕುಟುಂಬಕ್ಕೆ ಟಿಕೆಟ್ ತಪ್ಪಲು ನಾನು ಕಾರಣನಲ್ಲ ಎಂದು ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.

 

 

ಕೊರಟಗೆರೆ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಅವರು ಶಫಿ ಅಹಮದ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಶಫಿ ಅಹಮದ್ ರವರು ಸುಧೀರ್ಘವಾಗಿ ಕೆಲಸ ನಿರ್ವಹಿಸಿದ್ದು ಶಾಸಕರಾಗಿ ಜಿಲ್ಲಾ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ ಇನ್ನು ಅವರ ಬಗ್ಗೆ ತಮಗೆ ಅಪಾರವಾದ ಗೌರವ ಇದೆ ಎಂದ ಅವರು.

 

 

 

ಇನ್ನು ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಫಿ ಅಹಮದ್ ರವರ ಅಳಿಯ ರಫೀಕ್ ಅಹಮದ್ ಅವರು ಕೂಡ ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದಾರೆ.

 

 

ಇನ್ನು ಟಿಕೆಟ್ ಫೈನಲ್ ಮಾಡೋದು ನನ್ನೊಬ್ಬನ ನಿರ್ಧಾರ ಅಲ್ಲ ಅದು ಕಮಿಟಿಯ ನಿರ್ಧಾರ ಅವರನ್ನು ಬದಲಾಯಿಸಿ, ಇಕ್ಬಾಲ್ ಅಹಮದ್ ಅಂಥವರಿಗೆ ಟಿಕೆಟ್ ಕೊಟ್ಟಿದ್ದಾರೆ ಟಿಕೆಟ್ ನಿರ್ಧರಿಸುವುದು ಕಾಂಗ್ರೆಸ್ ರಾಷ್ಟ್ರೀಯ ಚುನಾವಣಾ ಸಮಿತಿಯ ತೀರ್ಮಾನವಾಗಿರುತ್ತದೆ ಎಂದರು.

 

 

ಇನ್ನು ಟಿಕೆಟ್ ನೀಡುವುದು ನನ್ನ ಒಬ್ಬನ ತೀರ್ಮಾನ ಆಗೋದಾದ್ರೆ ಅದರ ಸಂಪೂರ್ಣ ಹೊಣೆಯನ್ನ ತಾನು ಬರುತ್ತೇನೆ ಆದರೆ ಇದು ನಮ್ಮ ರಾಷ್ಟ್ರೀಯ ಸಮಿತಿ ಸೆಂಟ್ರಲ್ ಎಲೆಕ್ಷನ್ ಕಮಿಟಿ ಸಮಿತಿಯಲ್ಲಿ 15 ರಿಂದ 16 ಜನ ಸದಸ್ಯರು ಇರುತ್ತಾರೆ ಟಿಕೆಟ್ ನೀಡುವ ತೀರ್ಮಾನ ಮಾಡೋದು ಕಮಿಟಿ ಇನ್ನು ಟಿಕೆಟ್ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಅಭಿಪ್ರಾಯ ಏನು ಹೇಳಬೇಕೋ ಅದನ್ನ ನಾನು ಸಮಿತಿ ಮುಂದೆ ಹೇಳಿದ್ದೇನೆ ಅದನ್ನು ಅವರು ಪರಿಶೀಲನೆ ಮಾಡಿ ಅವರ ನಿರ್ಧಾರ ಪ್ರಕಟಿಸಿದ್ದಾರೆ.

 

 

 

ಇನ್ನು ಇಕ್ಬಾಲ್ ಅಹಮದ್ ಕೂಡ ಸಾಮಾನ್ಯ ಕಾರ್ಯಕರ್ತ ಅವರಿಗೆ ಯಾವ ಮಾನದಂಡ ಇಟ್ಟುಕೊಂಡು ಟಿಕೆಟ್ ಕೊಟ್ಟಿದ್ದಾರೆ ಗೊತ್ತಿಲ್ಲ ಅವರು ನನ್ನನ್ನ ವಿಶ್ವಾಸ ಘಾತುಕರು ಎಂದಿದ್ದಾರೆ ಅವರು ಹಿರಿಯರಾಗಿದ್ದರಿಂದ ಅವರು ಏನೇ ಹೇಳಿದರು ನಾನು ಸ್ವೀಕರಿಸುತ್ತೇನೆ ಎನ್ನುವ ಮೂಲಕ ಶಫಿ ಅಹಮದ್ ರವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

 

 

 

ಇನ್ನು ರಾಜಕಾರಣದ ಅನೇಕ ಸಂದರ್ಭದಲ್ಲಿ ಈ ತರಹದ ಸನ್ನಿವೇಶನಗಳು ಬರುತ್ತವೆ ನಾನು ಇಷ್ಟೇ ನಿಮಗೆ ಹೇಳೋದು ಬಯಸೋದು ತಾವು ಹಿರಿಯರಿದ್ದಿರಿ ಪಕ್ಷದ ಹಿತ ದೃಷ್ಟಿಯಿಂದ ಇಕ್ಬಾಲ್ ಅಹಮದ್ಗೆ ಬೆಂಬಲ ನೀಡಿ ನಮ್ಮ ಹೈಕಮಾಂಡ್ ಟಿಕೆಟ್ ತೀರ್ಮಾನ ಮಾಡಿದೆ ಅವರನ್ನು ಗೆಲ್ಲಿಸಿ ಕೊಡುವಂತಹ ಕೆಲಸ ಕಾರ್ಯಕರ್ತರದ್ದು ಮುಖಂಡರದ್ದು ಇದಕ್ಕೆ ಸಂಬಂಧಿಸಿದಂತೆ ತಾನು ಬೇರೆ ಟೀಕೆ ಟಿಪ್ಪಣಿ ಮಾಡೋಕೆ ಹೋಗಲ್ಲ ಎನ್ನುವ ಮೂಲಕ ಟಿಕೇಟ್ ಗೊಂದಲಕ್ಕೆ ತೆರೆ ಎಳೆಯಲು ಪರಮೇಶ್ವರ್ ಮುಂದಾಗಿದ್ದಾರೆ ಎನ್ನಲಾಗಿದೆ.

 

 

ವರದಿ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!