ಶಾಸಕ ಗೌರಿಶಂಕರ್ ಪರ ಪ್ರಚಾರ  ಆರಂಭಿಸಿದ ಮುಖಂಡ ಪಾಲನೆತ್ರಯ್ಯ

ಶಾಸಕ ಗೌರಿಶಂಕರ್ ಪರ ಪ್ರಚಾರ  ಆರಂಭಿಸಿದ ಮುಖಂಡ ಪಾಲನೆತ್ರಯ್ಯ

 

 

ತುಮಕೂರು ಗ್ರಾಮಾಂತರ ಕ್ಷೇತ್ರ ಗೂಳೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ದೇವಮೂಲೆ ಹರಳೂರು ಗ್ರಾಮದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಚುನಾವಣಾ ಕರಪತ್ರಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗೂಳೂರು ಜಿಲ್ಲಾ ಪಂಚಾಯಿ ವ್ಯಾಪ್ತಿಯ ಜೆಡಿಎಸ್ ಮುಖಂಡರು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.

 

 

 

 

 

ಗೂಳೂರು ಜಿಲ್ಲಾ ಪಂಚಾಯತಿ ಜೆಡಿಎಸ್ ಉಸ್ತುವಾರಿ ಜಿ ಪಾಲನೇತ್ರಯ್ಯ ನೇತೃತ್ವದಲ್ಲಿ ಗೂಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಹರಳೂರಿನ ವೀರಭದ್ರ ಸ್ವಾಮಿ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಡಿಸಿ ಗೌರಿಶಂಕರ್ ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಶಾಸಕರಾಗುವ ಜೊತೆಗೆ ಸಚಿವರಾಗಬೇಕೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

 

 

 

 

ಇದೆ ವೇಳೆ ಗೂಳೂರು ಜಿಲ್ಲಾ ಪಂಚಾಯಿತಿ ಜೆಡಿಎಸ್ ಉಸ್ತುವಾರಿ ಜಿ ಪಾಲನೆತ್ರಯ ಮಾತನಾಡಿ ಡಿಸಿ ಗೌರಿಶಂಕರ್ ಅವರು ಗ್ರಾಮಾಂತರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಮೇಲೆ ಇಡೀ ಕ್ಷೇತ್ರ ಸಮಗ್ರವಾಗಿ ಅಭಿವೃದ್ಧಿ ಕಂಡಿದೆ ಕ್ಷೇತ್ರದ ಹಲವಾರು ದೇವಾಲಯಗಳನ್ನು ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ಜೀರ್ಣೋದ್ಧಾರ ಮಾಡಿಸಿದ್ದಾರೆ, ವೃಷಭಾವತಿ ನದಿ ನೀರನ್ನು ಗ್ರಾಮಾಂತರ ಕೆರೆಗಳಿಗೆ ಹರಿಸಿ ಗ್ರಾಮಾಂತರ ಭಾಗದ ರೈತರ ಭವಣೆ ನೀಗಿಸುವ ಆಧುನಿಕ ಭಗೀರಥ ರಾಗಿದ್ದಾರೆ ಎಂದು ತಿಳಿಸಿದರು.

 

 

 

 

ಶಾಸಕ ಡಿ.ಸಿ ಗೌರಿಶಂಕರ್ ಅವರ ವಿರುದ್ಧ ವಿರೋಧಿಗಳು ನಾನಾ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ ಇವೆಲ್ಲ ಶುದ್ದ ಸುಳ್ಳು ಇವರ ಮಾತುಗಳಿಗೆ ಜನತೆ ಕಿವಿ ಕೊಡಬಾರದು, ಡಿ ಸಿ ಗೌರಿಶಂಕರ್ ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಖಚಿತ, ಅವರು ಶಾಸಕರಾಗುವ ಜೊತೆಗೆ ಸಚಿವರಾಗಬೇಕೆಂಬುದು ನಮ್ಮ ಮನದಾಸೆ, ಮತ್ತೊಮ್ಮೆ ಕುಮಾರಣ್ಣನ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲು ನಿಮ್ಮೆಲ್ಲರ ಆಶೀರ್ವಾದ ಶಾಸಕ ಡಿ ಸಿ ಗೌರೀಶಂಕರ್ ಮೇಲಿರಬೇಕೆಂದು ಮನವಿ ಮಾಡಿದರು.

 

 

 

 

 

ಹರಳೂರು ಗ್ರಾಮಪಂಚಾಯ್ತಿ ಸದಸ್ಯೆ ಹಾಗೂ ಮಾಜಿ ಎ ಪಿ ಎಮ್ ಸಿ ಉಪಾಧ್ಯಕ್ಷೆ ವಿಜಯಕುಮರಿ ಮಾತನಾಡಿ ಹರಳುರಿನ ಶ್ರೀ ವೀರಭದ್ರ ಸ್ವಾಮಿ ಸನ್ನಿಧಾನದಲ್ಲಿ ಚುನಾವಣಾ ಕರಪತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಈ ಬಾರಿಯೂ ಡಿಸಿ ಗೌರಿಶಂಕರ್ ಅವರು ಅತ್ಯಧಿಕ ಮತಗಳಿಂದ ಜಯಗಳಿಸುತ್ತಾರೆ ಕರುಣಾ ಸಂದರ್ಭದಲ್ಲಿ ಬಡವರಿಗೆ ನಿರ್ಗತಿಕರಿಗೆ ಅಸಹಾಯಕರಿಗೆ ಡಿಸಿ ಗೌರಿಶಂಕರ್ ಅವರು ಆಹಾರ ಧಾನ್ಯಗಳ ಕಿಟ್ಟು ವಿತರಿಸಿ ಆಸರೆಯಾಗಿದ್ದಾರೆ ಜೊತೆಗೆ ತಮ್ಮ ಸ್ವಂತ ಹಣದಲ್ಲಿ ಆಸ್ಪತ್ರೆ ನಿರ್ಮಿಸಿ ಎಷ್ಟೋ ಬಡವರ ಜೀವ ಉಳಿಸಿದ್ದಾರೆ ಈ ಬಾರಿ ಡಿಸಿ ಗೌರಿಶಂಕರ್ ಅವರು ಶಾಸಕ ಶಾಸಕರಾಗಿ ಸಚಿವ ಸ್ಥಾನ ಅಲಂಕರಿಸುವುದು ಖಚಿತ ಇದಕ್ಕೆ ಗ್ರಾಮಾಂತರ ಕ್ಷೇತ್ರದ ಜನತೆ ಆಶೀರ್ವಾದ ಮಾಡಬೇಕು ಮನವಿ ಮಾಡಿದರು.

 

 

 

 

 

ಈ ವೇಳೆ ಜೆಡಿಎಸ್ ಮುಖಂಡರಾದ ಹರಳೂರುಸುರೇಶ್,ಬೆಳಗುಂಬವೆಂಕಟೇಶ್,ಸದಾಶಿವಯ್ಯ,ತೋಂಟಾರಾಧ್ಯ,ಗುರುಬಸವದೇವರು,ಶಿವಪ್ರಸಾದ್,ಲಾಯರ್ ಲೋಕೇಶ್,ಹರಳೂರುಪ್ರಕಾಶ್,ಮಾಜಿ ಗ್ರಾಮಪಂಚಾಯ್ತಿ ಸದಸ್ಯ ಶಂಕರಮೂರ್ತಿ,ನಾಗರಾಜು, ಮಾಜಿ ಗ್ರಾಮಪಂಚಾಯ್ತಿ ಅಧ್ಯಕ್ಷೆ ಶಾಂತಾಸುರೇಶ್ ಉಪಸ್ತಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!