BREAKING NEWS : ಮೇ 10 ಕ್ಕೆ ಚುನಾವಣೆ ಮೇ 13 ರಿಸಲ್ಟ್ ಕರ್ನಾಟಕದಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿ : ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್

BREAKING NEWS : ಮೇ 10 ಕ್ಕೆ ಚುನಾವಣೆ ಮೇ 13 ರಿಸಲ್ಟ್ ಕರ್ನಾಟಕದಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿ : ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್

 

 

 

ನವದೆಹಲಿ : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 10 ಕ್ಕೇ ಚುನಾವಣೆ ನಡೆಯಲಿದ್ದು ಕರ್ನಾಟಕದಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಹೇಳಿದ್ದಾರೆ.

 

 

 

 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ.24 ರಂದ 15 ನೇ ವಿಧಾನಸಭೆ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಮೇ.23 ರೊಳಗೆ ಹೊಸ ಸರ್ಕಾರ ರಚನೆಯಾಗಬೇಕು. ಕರ್ನಾಟಕದಲ್ಲಿ ಒಟ್ಟು 5,21,73,579 ಮತದಾರರು ಇದ್ದಾರೆ, ಕರ್ನಾಟಕದಲ್ಲಿ ಪುರುಷ ಮತದಾರರು 2,62,42,561, ಮಹಿಳಾ ಮತದಾರರು 2,59,26,319, ತೃತೀಯ ಲಿಂಗಿ ಮತದಾರರು 4,699 ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

 

ಒಟ್ಟು 58,282 ಮತಗಟ್ಟೆಗಳ ಸ್ಥಾಪನೆ ಮಾಡಲಾಗುವುದು, ಒದೊಂದು ಮತಗಟ್ಟೆಗೆ 883 ಮತದಾರರು. ನಗರ ಪ್ರದೇಶಧಲ್ಲಿ 24,063 ಮತಗಟ್ಟೆಗಳ ಸ್ಥಾಪನೆ, ಗ್ರಾಮೀಣ ಪ್ರದೇಶಗಳಲ್ಲಿ 34,219 ಮತಗಟ್ಟೆಗಳ ಸ್ಥಾಪನೆ 224 ಕ್ಷೇತ್ರಗಳಲ್ಲಿ ತಲಾ ಒಂದು ಯುವ ಮತಗಟ್ಟೆಗಳ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

 

 

 

 

80 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಈ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಅವಕಾಶ ನೀಡಲಾಗಿದೆ ಎಂದರು.

 

 

 

ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯಕ್ತ ಸುನೀಲ್ ಅರೋರಾ ಅವರು ವೇಳಾಪಟ್ಟಿ ಪ್ರಕಟಿಸಿದರು.

 

ಮೊದಲ ಹಂತದ ಚುನಾವಣಾ ಪ್ರಕ್ರಿಯೆ ವಿವರ ಹೀಗಿದೆ

 

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: 20 ಏಪ್ರಿಲ್‌

 

ನಾಮಪತ್ರ ಪರಿಶೀಲನೆ ಕೊನೆಯ ದಿನ: 23 ಏಪ್ರಿಲ್‌

 

ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನ: ಏಪ್ರಿಲ್‌

 

ಮತದಾನ ನಡೆಯುವ ದಿನಾಂಕ: 10 ಮೇ

 

ಮೇ 13 ಕ್ಕೆ ಫಲಿತಾಂಶ

 

 

224 ವಿಧಾನಸಭಾ ಕ್ಷೇತ್ರಗಳಿದ್ದು, ಪರಿಶಿಷ್ಟ ಜಾತಿಗೆ 36 ಮತ್ತು ಪರಿಶಿಷ್ಟ ಪಂಗಡಕ್ಕೆ 15 ಕ್ಷೇತ್ರಗಳನ್ನು ಮೀಸಲಿಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 5,21,76,579 ಕೋಟಿ ಮತದಾರರಿದ್ದಾರೆ. ಕರ್ನಾಟಕದಲ್ಲಿ ಒಟ್ಟು ಮತದಾರರ ಸಂಖ್ಯೆ 5,21,73,599 ಇದೆ. ಈ ಪೈಕಿ ಪುರುಷ ಮತದಾರರ ಸಂಖ್ಯೆ – 2,62,42,561 ಹಾಗೂ ಮಹಿಳಾ ಮತದಾರರ ಸಂಖ್ಯೆ 2,59,26,319 ಇದೆ. ರಾಜ್ಯದಲ್ಲಿ ಅಂದಾಜು 4,699 ತೃತೀಯ ಲಿಂಗಿಗಳಿದ್ದು, ಮೊದಲ ಬಾರಿ ಮತದಾನ ಮಾಡುವವರ ಸಂಖ್ಯೆ (18+) – 9,17,241ಇದೆ ಒಟ್ಟು ಮತಗಟ್ಟೆಗಳು -58,282 ಇವೆ ಈ ಪೈಕಿ ನಗರ ಪ್ರದೇಶದಲ್ಲಿ 24,063 ಇವೆ. ಮಹಿಳೆಯರಿಂದ ನಿರ್ವಹಣೆ ಮಾಡುವ ಮತಗಟ್ಟೆಗಳ ಸಂಖ್ಯೆ 1320 ಹಾಗೂ ಗ್ರಾಮೀಣ ಭಾಗದಲ್ಲಿ ಇರುವ ಮತಗಟ್ಟೆಗಳು 34,219 ಹಾಗೂ ಮಾದರಿ ಮತಗಟ್ಟೆಗಳ ಸಂಖ್ಯೆ 240 ಇವೆ ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!