ಎಲ್ಲಾ ಸಮುದಾಯವನ್ನು ನಮ್ಮಂತೆ ಕಂಡಾಗ ಅಸ್ಪೃಶ್ಯತೆ ಆಚೆ ಹೋಗಲು ಸಾಧ್ಯ – ಸಚಿವ ಮಾಧುಸ್ವಾಮಿ
ತುಮಕೂರು – ಎಲ್ಲ ಸಮುದಾಯವನ್ನ ನಮ್ಮಂತೆ ಕಂಡಾಗ ಅಸ್ಪೃಶ್ಯತೆ ಆಚೆ ಹೋಗಲು ಸಾಧ್ಯ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮೀಸಲಾತಿ ಸಂಬಂಧ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು ಇನ್ನು ಅಸ್ಪೃಶ್ಯತೆ ಅಂಬೇಡ್ಕರ್ ಅವರ ಕಾಲಘಟ್ಟದಿಂದಲೂ ಬಂದಿದೆ ಇನ್ನು ಎಲ್ಲಾ ಸಮುದಾಯಗಳನ್ನ ನಮ್ಮಂತೆ ಕಂಡಾಗ ಅಸ್ಪೃಶ್ಯತೆ ಆಚೆ ಹೋಗಲು ಸಾಧ್ಯ ಅಸ್ಪೃಶ್ಯ ಜಾತಿಗಳಿಗೆ ಉತ್ತಮ ಸ್ಥಾನಮಾನ, ಸಾಮಾಜಿಕ ಸ್ಥಾನಮಾನ ಇದುವರೆಗೂ ಸಿಕ್ಕಿಲ್ಲ ಇದುವರೆಗೂ ನಾವು ಅವರನ್ನು ನಮ್ಮವರು ಎಂಬಂತೆ ಕಂಡಿಲ್ಲ ಇನ್ನು ನಮ್ಮ ಆತ್ಮಸಾಕ್ಷಿ ಇಂದ ಮಾತನಾಡೋಣ ಎಂದ ಅವರು .
ಇನ್ನು ನಾವುಗಳು ಏನೇ ಮಾತನಾಡಿದರೂ ಅವರನ್ನು ನೋಡೋ ದೃಷ್ಟಿ ಕೋನ ಬದಲಾಗಿಲ್ಲ ನಾವು ಅವರನ್ನು ನೋಡೋ ವ್ಯವಹಾರಿಕ ದೃಷ್ಟಿ ಕೋನ ಬದಲಾಗಿಲ್ಲ ಎಂದರು.
ಇನ್ನು ನಾವು ಅವರನ್ನು ಎಲ್ಲೂ ಸಹ ಮನುಷ್ಯರು ಎಂದು ಕಂಡಿಲ್ಲ ನಾವುಗಳು ಹೋಗುವ ಎಲ್ಲಾ ಜಾಗಗಳಿಗು ಅವರನ್ನು ಹೋಗಲು ಸಮಾನತೆ ನೀಡಿಲ್ಲ ಎಂದು ತಿಳಿಸಿದ ಅವರು ಅವರಿಗೆ ಸಾಮಾಜಿಕ ಸ್ಥಾನಮಾನ ಕೊಟ್ಟಿಲ್ಲ ಇವೆಲ್ಲವನ್ನೂ ನಾವು ಅವರಿಗೆ ನೀಡಿದಾಗ ಮಾತ್ರ ಸಮಾನತೆ ಸಾದ್ಯ ಅಲ್ಲಿವರೆಗೂ ಮೀಸಲಾತಿ ಅಗತ್ಯ ಎಂದು ತಿಳಿಸಿದ್ದಾರೆ.
ವರದಿ – ಮಾರುತಿ ಪ್ರಸಾದ್ ತುಮಕೂರು