ಜಾತ್ರೆಗೆ ತೆರಳುತ್ತಿದ್ದ ವೇಳೆ ಬೆಂಕಿ ತಗುಲಿ ಬಾಲಕಿ ಸಾವು ಜೊತೆಯಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರು ದೇವರಾಯನ ದುರ್ಗದಲ್ಲಿ ಘಟನೆ.

ಜಾತ್ರೆಗೆ ತೆರಳುತ್ತಿದ್ದ ವೇಳೆ ಬೆಂಕಿ ತಗುಲಿ ಬಾಲಕಿ ಸಾವು ಜೊತೆಯಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರು ದೇವರಾಯನ ದುರ್ಗದಲ್ಲಿ ಘಟನೆ.

 

 

ತುಮಕೂರು – ಜಾತ್ರೆಗೆಂದು ತೆರಳುತ್ತಿದ್ದ ಬಾಲಕಿಯೊಬ್ಬಳು ಬೆಟ್ಟದಲ್ಲಿ ಹತ್ತಿಕೊಂಡಿದ್ದ ಬೆಂಕಿಗೆ ಸಿಲುಕಿ ದುರಂತ ಸಾವು ಕಂಡಿರುವ ಘಟನೆ ತುಮಕೂರಿನ ದೇವರಾಯನ ದುರ್ಗದ ಬೆಟ್ಟದಲ್ಲಿ ನಡೆದಿದೆ.

 

 

 

ಇಂದು ದೇವರಾಯನ ದುರ್ಗದ ರಥೋತ್ಸವ ನಡೆಯುತ್ತಿದ್ದು ರಥೋತ್ಸವದಲ್ಲಿ ಭಾಗಿಯಾಗಲು ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯ ಮಾನಸ ಹಾಗೂ ಆಕೆಯ ಸ್ನೇಹಿತರು , ಜಾತ್ರೆಗೆ ಕಾಲುದಾರಿಯ ಮೂಲಕ ತೆರಳುತ್ತಿದ್ದ ವೇಳೆ ಬೆಟ್ಟದಲ್ಲಿ ಹೊತ್ತಿಕೊಂಡಿದ್ದ ಬೆಂಕಿಯ ಕೆನ್ನಾಲಿಗೆಗೆ ಒಂಬತ್ತನೇ ತರಗತಿಯ ಬಾಲಕಿ ಮಾನಸ ,(13) ಬೆಂಕಿಯ ಕೆನ್ನಾಲಗಿಗೆ ಸಿಲುಕಿ ಸ್ಥಳದಲ್ಲೇ ಸಾವಲಪ್ಪಿದ್ದಾಳೆ.

 

 

ಇನ್ನು ಬೆಂಕಿಯ ಹೆಚ್ಚಾಗುತ್ತಿದ್ದಂತೆ  ಬಾಲಕಿಯ ಜೊತೆಯಲ್ಲಿದ್ದ  ವೃದ್ದೆಯೊಬ್ಬರು ಬಾಲಕಿಯನ್ನು ರಕ್ಷಿಸಲು ಹೋಗಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ವೃದ್ದೆ ಪಾರಾಗಿದ್ದು ಬೆಂಕಿಯ ಕೆನ್ನಾಲಗಿಗೆ ಸಿಲುಕಿದ್ದ ಮಾನಸ 90ರಷ್ಟು ಸುಟ್ಟ ಗಾಯಗಳಿಂದ ಸ್ಥಳದಲ್ಲೇ  ಮೃತಪಟ್ಟಿದ್ದು ಜೊತೆಯಲ್ಲಿದ್ದ ಮತ್ತೆ ಕೆಲವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು ಮೃತಪಟ್ಟ ಬಾಲಕಿಯ ಶವವನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

 

 

 

ಘಟನೆಯ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಅರಣ್ಯ ಅಧಿಕಾರಿಗಳು ಕಳೆದ ರಾತ್ರಿಯೂ ಸಹ ಬೆಟ್ಟದ ತಪ್ಪಲಿನ ಕೆಲವು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಕಳೆದ ರಾತ್ರಿಯೂ ಸಹ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಮುಂದಾಗಿದ್ದರು ಆದರೆ ಅದನ್ನ ಅರಿಯದೆ ಮಾನಸ ಹಾಗೂ ಕೆಲವರು ಕಾಲುದಾರಿಯನ್ನ ಬಳಸಿ ಜಾತ್ರೆಗೆ ಎಂದು ಬರುವ ವೇಳೆ ಆಕಸ್ಮಿಕವಾಗಿ ಬೆಂಕಿಯ ಕೆನ್ನಾಲಿಗೆ ಸಿಲುಕಿ ಮೃತಪಟ್ಟಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

 

 

 

 

ಇನ್ನು ಬಾಲಕಿ ಮೃತಪಟ್ಟಿರುವ ಜಾಗದಲ್ಲಿ ಕಾಲು ದಾರಿಯು ಸಂಪೂರ್ಣ ಕಿರಿದಾಗಿದ್ದು  ಬಹುತೇಕ ಹುಲ್ಲುಗಾವಲಿನಿಂದ ಆವೃತವಾಗಿತ್ತು ಎನ್ನಲಾಗಿದೆ.ಅದೇನೇ ಇರಲಿ ಜಾತ್ರೆಗೆಂದು ತೆರಳುತ್ತಿದ್ದ ಬಾಲಕಿ ಬೆಂಕಿಯ ಕೆನಾಳಿಗೆ ಸಿಲುಕಿ ಮೃತಪಟ್ಟಿರುವುದು ದುರದೃಷ್ಟವೇ ಸರಿ.

 

 

 

ವರದಿ -ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!