ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸಾಮಾಜಿಕ ಜಾಲತಾಣ ಸಹ ಸಂಚಾಲಕಿ ಶಕುಂತಲಾ ನಟರಾಜ್ ಹೆಸರು ಫೈನಲ್…..???

ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸಾಮಾಜಿಕ ಜಾಲತಾಣ ಸಹ ಸಂಚಾಲಕಿ ಶಕುಂತಲಾ ನಟರಾಜ್ ಹೆಸರು ಫೈನಲ್…..???

 

 

ತುಮಕೂರು -ಮುಂದಿನ ಎರಡು ತಿಂಗಳಲ್ಲಿ ರಾಜ್ಯದ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಆಶ್ಚರ್ಯ ಬೆಳವಣಿಗೆಯಲ್ಲಿ ತುಮಕೂರು ಜಿಲ್ಲೆ ಗುಬ್ಬಿ ವಿಧಾನ ಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಸಾಮಾಜಿಕ ಜಾಲತಾಣದ ಸಹ ಸಂಚಾಲಕಿ ಆದ ಶಕುಂತಲಾ ನಟರಾಜ್ ಹೆಸರು ಮುನ್ನಡೆಗೆ ಬಂದಿದ್ದು ಬಹುತೇಕ ಹೈಕಮಾಂಡ್ ಹಾಗೂ ರಾಜ್ಯದ ನಾಯಕರು ಶಕುಂತಲಾ ನಟರಾಜ್ ಹೆಸರು ಅಂತಿಮ ಗೊಳಿಸಲಿದ್ದಾರೆ ಎನ್ನುವ ಮಾತು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.

 

 

 

ಇನ್ನು ಶಕುಂತಲಾ ನಟರಾಜ್ ಬಿಜೆಪಿ ಪಕ್ಷದಲ್ಲಿ ಓರ್ವ ನಿಷ್ಠಾವಂತ ಕಾರ್ಯಕರ್ತೆಯಾಗಿ ಸಾಮಾಜಿಕ ಜಾಲತಾಣದ ಜವಾಬ್ದಾರಿಯನ್ನ ಹೊತ್ತಿಕೊಂಡು ಪಕ್ಷ ನಿಷ್ಠೆಯನ್ನ ಪಾಲಿಸಿಕೊಂಡು ಬಂದಿದ್ದು ಅವರ ಪಕ್ಷನಿಷ್ಠೆಗೆ ಈ ಬಾರಿಯ ಟಿಕೆಟ್ ಸಿಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ.

 

 

 

ಇನ್ನು ಮಹಿಳಾ ಮುಖಂಡರಲ್ಲಿ ಶಕುಂತಲಾ ನಟರಾಜ್ ಬಿಜೆಪಿ ಪಾಳಯದಲ್ಲಿ ಹಿಂದೂ ಫೈರ್ ಬ್ರಾಂಡ್ ಎಂದು ಪ್ರಸಿದ್ಧಿಯಾಗಿದ್ದು ತಮ್ಮ ಕಟು ಮಾತುಗಳ ಮೂಲಕ ವಿರೋಧ ಪಕ್ಷಗಳಿಗೆ ನೇರ ಟಕ್ಕರ್ ಕೊಡುತ್ತಾ ಪಕ್ಷದ ಬೆನ್ನೆಲುಬಾಗಿ ನಿಂತಿದ್ದು ಗಮನಾರ್ಹ ಸಂಗತಿ.

 

 

 

 

ಗುಬ್ಬಿ ವಿಧಾನ ಸಭಾ ಕ್ಷೇತ್ರದಲ್ಲಿ ಬೆಟ್ಟಸ್ವಾಮಿ ಹಾಗೂ ದಿಲೀಪ್ ರವರ ನಡುವೆ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಯುತ್ತಿತ್ತು ಈಗ ಆಶ್ಚರ್ಯ ಬೆಳವಣಿಗೆಯಲ್ಲಿ ಶಕುಂತಲಾ ನಟರಾಜ್ ಹೆಸರು ಕೇಳಿ ಬಂದಿರುವುದು ಬಿಜೆಪಿ ಪಾಳಯದಲ್ಲಿ ಸಾಕಷ್ಟು ಚರ್ಚೆಗೆ ಎಡೆಮಾಡಿದ್ದು.

 

 

 

 

ಈ ಬಾರಿ ಬಿಜೆಪಿ ಪಕ್ಷದಿಂದ ತುಮಕೂರು ಜಿಲ್ಲೆಯಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಬೇಕು ಎನ್ನುವ ಕೂಗು ಸಹ ಕೇಳಿ ಬಂದಿತ್ತು ಅದರ ಬೆನ್ನಲ್ಲೇ ಶಕುಂತಲಾ ನಟರಾಜ್ ಹೆಸರು ಬಹುತೇಕ ಅಂತಿಮವಾಗಿದೆ ಎನ್ನುವ ಮಾತು ಪಕ್ಷದ ಆಂತರಿಕ ವಲಯದಲ್ಲಿ ಕೇಳಿ ಬರುತ್ತಿದೆ.

 

 

 

ಅದೇನೇ ಇರಲಿ ಓರ್ವ ಸಾಮಾನ್ಯ ಕಾರ್ಯಕರ್ತೆಯ ನಿಷ್ಠೆಯನ್ನ ಮೆಚ್ಚಿ ಟಿಕೆಟ್ ಗೆ ಹೆಸರು ಕೇಳಿ ಬಂದಿದ್ದು ಬಿಜೆಪಿ ಪಕ್ಷದ ಇತರೆ ನಾಯಕರಿಗೂ ಸಹ ಸಂತಸ ಎಡೆ ಮಾಡುವುದರ ಜೊತೆಗೆ ಇತರ ಟಿಕೆಟ್ ಆಕಾಂಕ್ಷಿಗಳಿಗೂ ಸಹ ಗೊಂದಲ ತಂದು ಒಡ್ಡಿದೆ ಎಂದರೆ ತಪ್ಪಾಗಲಾರದು.

 

 

 

 

ಇನ್ನು ಶಕುಂತಲಾ ನಟರಾಜ್ ಮೂಲತಃ ಗುಬ್ಬಿ ತಾಲೂಕಿನ ಜಿ ಹೊಸಳ್ಳಿ ಗ್ರಾಮದವರಾಗಿದ್ದು ಇದುವರೆಗೂ ಬಿಜೆಪಿ ಪಕ್ಷದಲ್ಲಿ ಸಾಮಾಜಿಕ ಜಾಲತಾಣದ ಜವಾಬ್ದಾರಿಯನ್ನ ನಿಭಾಯಿಸುವುದರ ಜೊತೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಫಾಲೋರ್ಗಳನ್ನು ಸಹ ಹೊಂದಿರುವ ಶಕುಂತಲಾ ನಟರಾಜ್ ಹೆಸರು ಅಚ್ಚರಿಯಾಗಿ ಕೇಳಿ ಬಂದಿದ್ದು ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣದಲ್ಲೂ ಸಹ ಶಕುಂತಲಾ ನಟರಾಜ್ ರವರಿಗೆ ಟಿಕೆಟ್ ನೀಡಬೇಕು ಎನ್ನುವ ಮಾತು ಪ್ರಬಲವಾಗಿ ಕೇಳಿ ಬರುತ್ತಿರುವುದರಿಂದ ಮುಂದೆ ಯಾವ ರೀತಿ ಬೆಳವಣಿಗೆಗೆ ಕಾರಣವಾಗಲಿದೆ ಎನ್ನುವುದು ಕಾದು ನೋಡಬೇಕಿದೆ.

 

 

 

ವರದಿ -ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!