ಬೆಸ್ಕಾಂ ಇಲಾಖೆ ಸಿಬ್ಬಂದಿ ಇಲಾಖೆ ಕಛೇರಿಯ ನಿವಾಸದಲ್ಲಿ ನೇಣಿಗೆ ಶರಣು.
ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಬೆಸ್ಕಾಂ ಇಲಾಖೆ ಕಛೇರಿಯ ನಿವಾಸದಲ್ಲಿ ಘಟನೆ ನಡೆದಿದೆ.ಕೊರಟಗೆರೆ ತಾಲ್ಲೂಕಿನ ಬೆಸ್ಕಾಂ ಕಛೇರಿಯಲ್ಲಿ ಲೈನ್ ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ನಾಗಭೂಷಣ(48) ನೇಣಿಗೆ ಶರಣಾದ ದುರ್ದೈವಿ.
ತಾಲ್ಲೂಕಿನ ಮಲಪನಹಳ್ಳಿ ಗ್ರಾಮದ ವಾಸಿಯಾದ ನಾಗಭೂಷಣ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇಂದು ಕೆಲಸಕ್ಕೆ ರಜಾಮಾಡಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.ಇಬ್ಬರು ಮಡದಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಿದ್ದರು ಎನ್ನಲಾಗಿದೆ.
ಮೊದಲನೇಯ ಪತ್ನಿ ರಾಮಕ್ಕ ಮಲಪನಹಳ್ಳಿ ಗ್ರಾಮದ ನಿವಾಸದಲ್ಲಿ ಬೇರೆ ವಾಸವಾಗಿದ್ದರು ರಾಮಕ್ಕನಿಗೆ ಮಕ್ಕಳು ಇರಲಿಲ್ಲ.ಸದ್ಯಕ್ಕೆ ಎರಡನೇಯ ಪತ್ನಿ ಜ್ಯೋತಿ ಜೋತೆ ಕೊರಟಗೆರೆ ಬೆಸ್ಕಾಂ ಇಲಾಖೆ ನಿವಾಸದಲ್ಲಿ ವಾಸವಿದ್ದರು. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣುಬಿಗಿದು ಕೊಂಡಿದ್ದಾನೆ.
ತನ್ನ ಎರಡನೇಯ ಮಡದಿಯ ಮೊದಲನೇಯ ಮಗಳಿಗೆ ಹೆರಿಗೆಗೆ ಎಂದು ಗೌರಿಬಿದನೂರಿಗೆ ತನ್ನ ಮಡದಿಯನ್ನು ಕಳುಹಿಸಿ ನಂತರ ಯಾರು ಇಲ್ಲದ ಸಮಯದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪಿಎಸ್ಐ ಪ್ರದೀಪ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.