ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿ ಮಾಡಲು ಪಣ ತೊಟ್ಟ -ಶಾಸಕ ಡಿ. ಸಿ ಗೌರಿಶಂಕರ್.

ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿ ಮಾಡಲು ಪಣ ತೊಟ್ಟ -ಶಾಸಕ ಡಿ. ಸಿ ಗೌರಿಶಂಕರ್.

 

 

 

 

 

ತುಮಕೂರು ಗ್ರಾಮಾಂತರದ ಬೆಳಗುಂಬ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ ತಪ್ಪಲಿನಲ್ಲಿರುವ ಮಾರನಾಯಕನ ಪಾಳ್ಯ ಗ್ರಾಮದ ಶ್ರೀ ವಿರೂಪಾಕ್ಷ ಸ್ವಾಮಿ ಶ್ರೀ ಆದಿತ್ಯಾದಿ ನವಗ್ರಹ ದೇವತೆ ಪುನರ್ ಪ್ರತಿಷ್ಠಾಪನಾ ಮತ್ತು ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಆಗಮಿಸಿದ ಜನಪ್ರಿಯ ಶಾಸಕರಾದ ಡಿಸಿ ಗೌರಿಶಂಕರ್ ಅವರನ್ನು ಭಕ್ತಾಧಿಗಳು ಹಾಗೂ ಗ್ರಾಮಸ್ಥರುಗಳು ಹೂ ಮಳೆ ಸುರಿಸುವ ಮೂಲಕ ಹೆಣ್ಣು ಮಕ್ಕಳುಗಳು ಕಳಸ ಒತ್ತು ತುಂಬು ಹೃದಯದಿಂದ ಅದ್ದೂರಿಯಾಗಿ ಸ್ವಾಗತಿಸಿದರು.

 

 

 

 

 

 

ದೇವರ ದರ್ಶನ ಪಡೆದ ಶಾಸಕ ಡಿ.ಸಿ ಗೌರಿಶಂಕರ್ ಅವರು ಸರ್ವರಿಗೂ ಒಳಿತಾಗಲೆಂದು ಪ್ರಾರ್ಥಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಸ್ವತಹ ಶಾಸಕರೇ ಊಟ ಬಡಿಸಿ, ನಡೆದಾಡುವ ದೇವರು ತ್ರಿವಿಧ ದಾಸೋಹಿ ಪದ್ಮಭೂಷಣ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಪಾದಗಳಿಗೆ ನಮಸ್ಕರಿಸಿ, ಆಶೀರ್ವಾದವನ್ನು ಬೇಡುತ್ತಾ ಮಾತನಾಡಿದ ಶಾಸಕರು ನಾನು ಶಾಸಕನಾದ ಮೇಲೆ ಮಾರನಾಯಕನ ಪಾಳ್ಯ ಗ್ರಾಮಕ್ಕೆ ಸುಮಾರು 30 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಸಿಸಿ ಚರಂಡಿ ಕಾಮಗಾರಿಗಳನ್ನು ಮಾಡಿಸಿದ್ದು, ಮುಂದಿನ ದಿನಗಳಲ್ಲಿ ಈ ಗ್ರಾಮವನ್ನು ದತ್ತು ಪಡೆದು ಮಾದರಿ ಗ್ರಾಮವನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.

 

 

 

 

 

 

 

ಈ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಮಾನ್ಯ ಜನಪ್ರಿಯ ಶಾಸಕರಾದ ಡಿ.ಸಿ ಗೌರಿಶಂಕರ್ ರವರ ಕುಟುಂಬದ ವತಿಯಿಂದ 3,00,000 (ಮೂರು ಲಕ್ಷ) ಹಾಗೂ ಕಾರ್ಯಕ್ರಮದ ಅನ್ನ ದಾಸೋಹಕ್ಕೆ 2,00,000 ರೂಗಳನ್ನು ಮತ್ತು ಸರ್ಕಾರದ ವತಿಯಿಂದ 5,00,000 ಲಕ್ಷ ರೂಗಳನ್ನು, ಒಟ್ಟು ಈ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಸುಮಾರು 10,00,000 (ಹತ್ತು ಲಕ್ಷ ರೂಗಳನ್ನು ನೀಡುವ ಮೂಲಕ ದೇವಾಲಯ ಅಭಿವೃದ್ಧಿಗೆ ಸಹಾಯ ಮಾಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!