ಫೆಬ್ರುವರಿ ೧೫ ಕ್ಕೆ ಬೃಹತ್ ಉದ್ಯೋಗ ಮೇಳ ನೂರಕ್ಕೂ ಹೆಚ್ಚು ಕಂಪನಿಗಳು ಬಾಗಿ : ಮುರುಳೀಧರ ಹಾಲಪ್ಪ

ಫೆಬ್ರುವರಿ ೧೫ ಕ್ಕೆ ಬೃಹತ್ ಉದ್ಯೋಗ ಮೇಳ ನೂರಕ್ಕೂ ಹೆಚ್ಚು ಕಂಪನಿಗಳು ಬಾಗಿ : ಮುರುಳೀಧರ ಹಾಲಪ್ಪ

 

 

 

ಕೊರಟಗೆರೆ: ಸಿದ್ದಾರ್ಥ ಸಂಸ್ಥೆ, ರಾಷ್ಟ್ರೀಯ ವೃತ್ತಿ ಸೇವೆ  ಯೋಜನೆಯಡಿಯಲ್ಲಿ ಕೈಗಾರಿಕಾ ತರಭೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೊಗ ವಿನಿಮಯ ಕಚೇರಿ ಮತ್ತು ಕೊರಟಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಫೆ. ೧೫ ರಂದು ಉದ್ಯೋಗ ಮೇಳ ನಡೆಯಲಿದೆ ಎಂದು ಕೌಶಲ್ಯಾ ಅಭಿವೃದ್ಧಿ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪತಿಳಿಸಿದರು.

 

 

 

 

 

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಫೆ.೧೫ ರಂದು ನಡೆಯುವ ಉದ್ಯೋಗಮೇಳದ ಪೋಸ್ಟರ್ ಮತ್ತು ಕರಪತ್ರಗಳನ್ನು ಬಿಡುಗಡೆ ಮಾಡಿದರು.

 

 

 

 

ಉದ್ಯೋಗ ಮೇಳದಲ್ಲಿ ಸಮಾರು ೧೦೦ಕ್ಕೂ ಹೆಚ್ಚು ಬಹುರಾಷ್ಟಿçÃಯ ಕಂಪನಿಗಳು ಪಾಲ್ಗೊಳ್ಳಲಿದ್ದು ಪದವಿ, ಐಟಿಐ, ದಿಪ್ಲೋಮೋ ಮಾಡಿರುವಂತಹ ಎಲ್ಲಾ ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು ಎಂದರು.

 

 

 

 

ಪೀಣ್ಯ ಇಂಡಸ್ಟ್ರೀಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಡಿ.ಟಿ ವೆಂಕಟೇಶ್ ಮಾತನಾಡಿ, ಪ್ರತಿಯೊಬ್ಬರಿಗೂ ಉದ್ಯೋಗದ ಮತ್ತು ಉತ್ತಮ ಭವಿಷ್ಯದ ಕನಸು ಇರುತ್ತದೆ. ಇದಕ್ಕೆ ಪೂರಕವೆಂಬoತೆ ಉತ್ತಮ ರೀತಿಯಲ್ಲಿ ತಯಾರಿಯನ್ನು ಮಾಡಿಕೊಂಡು ಅತ್ಯುತ್ತಮ ಹುದ್ದೆಯನ್ನು ಅಲಂಕರಿಸಬಹುದಾಗದಿದ್ದು ಇದಕ್ಕೆ ಉದ್ಯೋಗ ಮೇಳಗಳು ಸಹಕಾರಿಯಾಗಲಿದ್ದು ಎಲ್ಲಾ ವಿದ್ಯಾರ್ಥಿಗಳು ತಪ್ಪದೇ ಈ ಶಿಬಿರದಲ್ಲಿ ಪಾಲ್ಗೊಳ್ಳುಂತೆ ಕರೆ ನೀಡಿದರು.

 

 

 

ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ತಿಪ್ಪೆಸ್ವಾಮಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಕುಮಾರ್, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಉಪನ್ಯಾಸಕರಾದ ಗಿರಿಧರ್, ಚೇತನ್, ಶ್ರೀಸಿದ್ಧಾರ್ಥ ಇಂಜಿನಿಯರಿoಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎಸ್ ರವಿಕಿರಣ್, ತುಮಕೂರು ಚೇಂಬರ್ ಆಫ್ ಫಾರ್ಮಸಿ ಮಾಜಿ ಅಧ್ಯಕ್ಷ ಸುಜ್ಞಾನ್ಹಿ ಹಿರೇಮಠ, ನಿರ್ದೇಶಕ ಬಸವರಾಜ ಹಿರೇಮಠ, ರವಿಶಂಕರ್, ನಿವೃತ್ತ ತಹಶೀಲ್ದಾರ್ ಎಂ.ವಿ ಹನುಮಂತಯ್ಯ, ರ‍್ತಿಕ ಟೆಕ್ನೊ ಸೊಲ್ಯೂಷನ್ನಿನ ನಿರ್ದೇಶಕ ರವಿಶಂಕರ್, ಟ್ರಿವಿಡ್ಟಾ÷್ಯನ್ಸ್ ಕಂಪನಿಯ ಯೋಜನಾಧಿಕಾರಿ ಪವನ್ ಕುಮಾರ್, ಯುಕ್ತ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ದಿಲೀಪ್, ಕಾಲೇಜಿನ ಉಪನ್ಯಾಸಕರು, ಹಳೇ ವಿದ್ಯಾರ್ಥಿಗಳು ಇದ್ದರು.

 

 

Leave a Reply

Your email address will not be published. Required fields are marked *

You cannot copy content of this page

error: Content is protected !!