ತುಮಕೂರು ಜೈಲಿನಲ್ಲಿ ಲಂಚಾವತಾರ: ಜೈಲು ಅಧಿಕ್ಷಕಿ ವಿರುದ್ದ ದೂರು ಸಲ್ಲಿಸಿದ ಖೈದಿಗಳು

ತುಮಕೂರು ಜೈಲಿನಲ್ಲಿ ಲಂಚಾವತಾರ: ಜೈಲು ಅಧಿಕ್ಷಕಿ ವಿರುದ್ದ ದೂರು ಸಲ್ಲಿಸಿದ ಖೈದಿಗಳು

ತುಮಕೂರು -ತುಮಕೂರು ಜಿಲ್ಲಾ ಬಂಧಿಖಾನೆಯಲ್ಲಿರುವವರನ್ನು ನೋಡಲು ಬಂದವರಿಂದ ಜೈಲಿನ ಸಿಬ್ಬಂದಿ ಹಣ ಪಡೆಯುತ್ತಾರೆ ಎಂಬ ಆರೋಪ ಕೇಳಿಬಂದಿದೆ,ಈ ಮಧ್ಯೆ ಜೈಲಿನ ಸಿಬ್ಬಂದಿ‌ ಸಾರ್ವಜನಿಕರಿಂದ ಹಣ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ.

 

 

 

ಜಿಲ್ಲಾ ಕಾರಾಗೃಹದಲ್ಲಿನ ಅವ್ಯವಸ್ಥೆ ಬಗ್ಗೆ ಬಂಧೀಖಾನೆ ನಿವಾಸಿಗಳು ಜಿಲ್ಲಾಧಿಕಾರಿ, ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಎ.ಡಿ.ಜಿ.ಪಿ, ಲೋಕಾಯುಕ್ತ, ಮಾನವಹಕ್ಕುಗಳ ಆಯೋಗ ಹಾಗೂ ಗೃಹಸಚಿವರಿಗೆ ದೂರು ನೀಡಿದ್ದಾರೆ.

 

40 ಕ್ಕೂ ಹೆಚ್ಚು ಬಂಧೀಖಾನೆ ನಿವಾಸಿಗಳು ನಾಲ್ಕೈದು ಪುಟಗಳಲ್ಲಿ ಬಂಧಿಖಾನೆ ಸಮಸ್ಯೆಗಳ ವಿಸ್ಕೃತ ವಿವರಣೆಯನ್ನು ದೂರಿನಲ್ಲಿ ವಿವರಿಸಿದ್ದಾರೆ.

 

 

 

ತುಮಕೂರು ತಾಲೂಕಿನ ಊರುಕೆರೆ ಬಳಿಯಿರುವ ಜಿಲ್ಲಾಕಾರಾಗೃಹದಲ್ಲಿ  ಸಮರ್ಪಕವಾಗಿ ಊಟ ನೀಡದ ಬಗ್ಗೆ ಅಧೀಕ್ಷಕರ ವಿರುದ್ದ ಆರೋಪ ಕೇಳಿಬಂದಿದೆ ಈ ಸಂಬಂಧ ಕಳೆದ ವಾರ ವಿಚಾರಣಾಧಿನ ಖೈದಿಗಳು ಕಳಪೆ ಗುಣಮಟ್ಟದ ಆಹಾರ ಹಾಗೂ ಜೈಲಿನ ಅಕ್ರಮಗಳ ಬಗ್ಗೆ ಜೈಲಿನ ಅಧೀಕ್ಷಕಿ ಶಾಂತಶ್ರೀ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ ಜೈಲಿನಲ್ಲಿಯೇ ಪ್ರತಿಭಟನೆ ನಡೆಸಿದ್ದರು.

 

 

ದೂರಿನ ಆಧಾರದ ಮೇರೆಗೆ ಸ್ಥಳಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .

 

 

 

‘ ಇಲ್ಲಿಗೆ ಭೇಟಿ ನೀಡುವ ಎಲ್ಲಾ ಉನ್ನತ ಅಧಿಕಾರಿಗಳಿಗೆ ಮಾಸಿಕವಾಗಿ 1ಲಕ್ಷ, 2ಲಕ್ಷ ರೂ.ಗಳನ್ನು ಅಧಿಕಾರಿಗಳ ದರ್ಜೆಗೆ ತಕ್ಕಂತೆ ಲಂಚ ನೀಡುತ್ತಿದ್ದೇನೆ ಎಂದು ಅಧೀಕ್ಷಕಿ ಶಾಂತಶ್ರೀ ಉಡಾಫೆ ಉತ್ತರ ನೀಡುತ್ತಾರೆ,ನೀವುಗಳು ಯಾವುದೇ ದೂರು ನೀಡಿದರೂ ಏನನ್ನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ.ಎಲ್ಲಾ ಅಧಿಕಾರಿಗಳು ಇಲ್ಲಿಗೆ ಬರುವುದು ಮಾಮೂಲಿ ಲಂಚ ಪಡೆಯಲೇ ಹೊರತು ನಿಮ್ಮ ಯೋಗಕ್ಷೇಮ ವಿಚಾರಿಸಲು ಅಲ್ಲ.ಯಾವನಾದರೂ ದೂರು ನೀಡುವ ಸಾಹಸ ಮಾಡಿದರೇ ಬಾಲಬಿಚ್ಚಿದರೆ ಅಂತಹವರ ಮನೆ ಮಠ ಮಾರಿಸುತ್ತೇನೆ.ಹೆಂಡತಿ ಮಕ್ಕಳನ್ನು ಅಡಮಾನ ಇರಿಸುತ್ತೇನೆ ಎಂದು ಅವಾಜ್ ಹಾಕಿತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

 

 

ತುಮಕೂರು ಜೈಲಿನಲ್ಲಿ ಇಷ್ಟೆಲ್ಲಾ ಅದ್ವಾನ ನಡೆಯುತ್ತಿದ್ದರೂ ಜೈಲು ಅಧೀಕ್ಷಕಿ ಹಾಗೂ ಸಿಬ್ಬಂದಿ ವಿರುದ್ದ ಉನ್ನತಾಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!