ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಕರ್ನಾಟಕ ಕ್ವಾರಿ ಹಾಗೂ ಕ್ರಷರ್ ಮಾಲೀಕರ ಸಂಘ

ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಕರ್ನಾಟಕ ಕ್ವಾರಿ ಹಾಗೂ ಕ್ರಷರ್ ಮಾಲೀಕರ ಸಂಘ.

 

ತುಮಕೂರು_  ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್‍ಸ್ ಮಾಲೀಕರ ಸಂಘದ ವತಿಯಿಂದ ಗಣಿ ಮತ್ತು ಭೂ ವಿಜ್ನಾನ ಇಲಾಖೆಯ ನಿಯಮಗಳಲ್ಲಿರುವ ನ್ಯೂನ್ಯತೆಗಳು ಹಾಗೂ ಅದನ್ನು ಸರಿಪಡಿಸುವ ಬಗ್ಗೆ ರಾಜ್ಯದ ಎಲ್ಲಾ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸಹ ಯಾರೂ ಮುಂದೆ ಬರದ ಕಾರಣ ಕ್ವಾರಿ ಮತ್ತು ಸ್ಟೋನ್ ಕ್ರಷರ್‍ಸ್‌ಗಳ ಮಾಲೀಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಆ ಮೂಲಕ  ಕ್ವಾರಿ ಮಾಲೀಕರುಗಳನ್ನು ಸರ್ಕಾರ ನೇರವಾಗಿ ಟಾರ್ಗೆಟ್ ಮಾಡುವ ಮೂಲಕ ಹೆಚ್ಚಿನ ರಾಜಧನ ಹಾಗೂ ಹೆಚ್ಚಿನ ಮೊತ್ತದ ದಂಡ  ವಿಧಿಸುವ ಮೂಲಕ ಮರಣಶಾಸನವನ್ನು ಬರೆಯಲು ಹೊರಟಿದ್ದು, ಅದರ ವಿರುದ್ಧವಾಗಿ ಇಂದಿನಿಂದ ಅನಿರ್ಧಷ್ಟಾವದಿ ಕಾಲ ಕ್ರಷರ್‌ಗಳನ್ನು ಬಂದ್ ಮಾಡಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಾ ತಮ್ಮ ಆಕ್ರೋಷವನ್ನು ಹೊರ ಹಾಕಿದರು.

 

 

 

 

ಈ ಸಂಬಂಧ ತುಮಕೂರು ನಗರದಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿದ ಕರ್ನಾಟಕ ರಾಜ್ಯ ಕ್ವಾರಿ ಮತ್ತು ಸ್ಟೋನ್ ಕ್ರಷರ್‍ಸ್‌ನ ಉಪಾಧ್ಯಕ್ಷರಾದ ಸಿ.ಎಸ್.ಭಾಸ್ಕರ್ ಸರ್ಕಾರದ ವಿರುದ್ಧ ತಮ್ಮ ಅಸಮಾಧನವನ್ನು ವ್ಯಕ್ತಪಡಿಸಿದರು.

 

 

 

 

ಸರ್ಕಾರ ತಮ್ಮ ಮನವಿಗೆ ಸ್ಪಂದಿಸುವ ಸಲುವಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿಯೂ ಸಹ ಸರ್ಕಾರದ ಗಮನ ಸೆಳೆಯುವುದರೊಂದಿಗೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗುವುದೆಂದು ತಿಳಿಸಿದರು. ಅದುವರೆವಿಗೂ ಸಾರ್ವಜನಿಕರಿಗೆ ಹಾಗೂ ಕಟ್ಟಡ ಮಾಲೀಕರುಗಳಿಗೆ ತೊಂದರೆಗಳು ಎದುರಾಗಲಿದೆ ಅದಕ್ಕೆ ಕ್ಷಮೆಯನ್ನು ಯಾಚಿಸುತ್ತಾ, ತಮ್ಮ ನಿಲುವನ್ನು ಸರ್ಕಾರ ಗಮನಹರಿಸಿ, ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

 

 

 

 

 

ಈ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರ ಗಮನಕ್ಕೆ ತಂದು ಮನವಿಯನ್ನು ಸಹ ಸಲ್ಲಿಸಿದ್ದವು ಆದರೆ ನಮ್ಮ ಮನವಿಗೆ ಸ್ಪಂದಿಸದೆ ಹೆಚ್ಚಿನ ಮತದ ದಂಡವನ್ನ ವಿಧಿಸುವ ಮೂಲಕ ಸರ್ಕಾರ ಏಕ ಪಕ್ಷಿಯ ನಿರ್ಧಾರ ತೆಗೆದುಕೊಂಡಿದೆ ಹಾಗಾಗಿ ಕೂಡಲೇ ಸರ್ಕಾರ ಹೊರಡಿಸಿರುವ ಆದೇಶವನ್ನು ಪುನಹ ಪರಿಶೀಲಿಸಬೇಕು ಈಗಾಗಲೇ ಹಲವು ಕ್ರಷರ್ ಮಾಲೀಕರು ಬೃಹತ್ ಮತದಂಡವನ್ನು ಕಟ್ಟಿ ಹೈರಾಣ ಆಗಿದ್ದು ಇನ್ನೂ ಹಲವರು ದಂಡ ಕಟ್ಟಲು ನೋಟಿಸ್ ಸಹ ನೀಡಿದ್ದಾರೆ ಇದರಿಂದ ಕ್ರಷರ್ ಮಾಲೀಕರಿಗೆ ತೀವ್ರ ತೊಂದರೆ ಉಂಟಾಗಲಿದೆ ಎಂದು ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ.

 

 

 

ಇನ್ನು ಈ ವಿಚಾರವಾಗಿ ತುಮಕೂರು ಜಿಲ್ಲಾ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಸಂಘದ ನಿರ್ದೇಶಕರಾದ ಕುಲಕರ್ಣಿ, ಅನೀಫ್, ಬಾಲಾಜಿ, ನಬು ಸೇರಿದಂತೆ ಇತರರು ಉಪಸ್ಥಿತರಿದ್ದರು.

 

 

ವರದಿ_ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!