2023 ಕ್ಕೆ ತುಮಕೂರಿಗೆ ನಾನೇ ಎಂ.ಎಲ್. ಎ _ಅಟಿಕಾ ಬಾಬು.
ತುಮಕೂರಿಗೆ _ಮುಂಬರುವ 2023 ಕ್ಕೆ ತುಮಕೂರು ನಗರಸಭಾ ಕ್ಷೇತ್ರಕ್ಕೆ ನಾನೇ ಎಂಎಲ್ಎ ಎಂದು ಜೆಡಿಎಸ್ ಮುಖಂಡ ಬೊಮ್ಮನಹಳ್ಳಿ ಬಾಬು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಅವರು ನಾನು ಜೆಡಿಎಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದು ಮುಂಬರುವ ಚುನಾವಣೆಯಲ್ಲಿ ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವುದು ಪಕ್ಕಾ ಎಂದಿದ್ದಾರೆ.
ಜನರ ಸೇವೆ ಮಾಡಬೇಕು ಎಂದು ನಿರ್ಧರಿಸಿದ ನನಗೆ ಜೆಡಿಎಸ್ ಮುಖಂಡರಾದ ಕುಮಾರಸ್ವಾಮಿ ರವರೆ ಆಶೀರ್ವದಿಸಿ ತುಮಕೂರು ವಿಧಾನಸಭಾ ಕ್ಷೇತ್ರಕ್ಕೆ ಕಳಿಸಿದ್ದು ಸದ್ಯಕ್ಕೆ ಕ್ಷೇತ್ರದಲ್ಲಿ ಕೆಲ ಗೊಂದಲಗಳು ಸೃಷ್ಟಿಯಾಗಿದ್ದು ಮುಂದಿನ ದಿನದಲ್ಲಿ ಎಲ್ಲವೂ ಬಗೆಹರಿಯಲಿದೆ ಮುಂಬರುವ ದಿನದಲ್ಲಿ ತುಮಕೂರು ವಿಧಾನಸಭಾ ಕ್ಷೇತ್ರಕ್ಕೆ ತಾವು ಅಭ್ಯರ್ಥಿಯಾಗುವುದು ಖಚಿತ ಎಂದಿದ್ದಾರೆ.
ಇತ್ತೀಚಿಗೆ ನಡೆದ ಪಂಚರತ್ನ ಯಾತ್ರೆಗೆ ಸಂಬಂಧಿಸಿದಂತೆ ತಾವು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದುಕೊಂಡಿದ್ದೆ ಆದರೆ ಎರಡು ಬಾರಿ ಶಾಸಕರ ಸ್ಥಾನ ಕ್ಕೆ ನಿಂತು ಸೋತಿರುವ ಅಭ್ಯರ್ಥಿ ಗೋವಿಂದರಾಜುಗೆ ಮುಜುಗರ ಆಗಬಾರದು ಎನ್ನುವ ಕಾರಣಕ್ಕಾಗಿ ತಾವು ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸಿರಲಿಲ್ಲ ಎಂದರು.
ಇನ್ನು ಕಳೆದ ಬಾರಿಯ ಪಂಚರತ್ನ ಯಾತ್ರೆಯ ವೇಳೆ ಸ್ವತಹ ಗೋವಿಂದರಾಜು ರವರೇ ತಮ್ಮ ಭಾವಚಿತ್ರವನ್ನು ಬಳಸಿಗಳನ್ನು ಪ್ಲೆಕ್ಸ್ ಗಳಲ್ಲಿ ಅಳವಡಿಸಿದ ಮೇಲೆ ನಾವು ಸಹ ಕ್ಷೇತ್ರದಲ್ಲಿ ಇದ್ದಂತೆ ಎಂದರು.
ತಾವು ತುಮಕೂರು ಕ್ಷೇತ್ರಕ್ಕೆ ಜನರ ಸೇವೆ ಮಾಡಲು ಬಯಸಿದ್ದು ಪಕ್ಷದ ಮುಖಂಡರಿಗೆ ಮುಜುಗರ ಆಗಬಾರದು ಎಂದು ಪಂಚರತ್ನ ಯಾತ್ರೆಯಿಂದ ದೂರ ಉಳಿದಿದ್ದೆ ಎಂದಿದ್ದಾರೆ.
ಮುಂಬರುವ ಚುನಾವಣೆಗೆ ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ನಿಲ್ಲುವುದು ಶತಸಿದ್ಧ ಚುನಾವಣೆ ಸಂಬಂಧ ತಮ್ಮದೇ ಆದ ಸ್ಟ್ರಾಟಜಿ ಬಳಸಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದ ಅವರು ಇನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಸಹ ತಮಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ತಮ್ಮನ ಭೇಟಿ ಮಾಡಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಯನ್ನು ಅವರು ನಯವಾಗಿ ತಿರಸ್ಕರಿಸಿದ್ದು ಜೆಡಿಎಸ್ ಪಕ್ಷದಿಂದ ತಾವು ಸ್ಪರ್ಧಿಸುವುದು ಖಚಿತ ಎಂದರು.
ನಾವು ತುಮಕೂರಿಗೆ ಆಗಮಿಸಿದ ದಿನದಂದು ಕಾಂಗ್ರೆಸ್ ಹಿರಿಯ ಮುಖಂಡರಾದ ಶಫಿ ಅಹಮದ್ ರವರ ಆಶೀರ್ವಾದ ಪಡೆದಿರುವುದಾಗಿ ತಿಳಿಸಿದವರು ಇನ್ನು ತಾವು ತುಮಕೂರಿನ ಜನತೆಯ ಮನಸ್ಸನ್ನು ಗೆಲ್ಲುವ ಸಲುವಾಗಿ ಬಂದಿದ್ದು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವುದು ಪಕ್ಕ ಎಂದಿದ್ದಾರೆ.
ವರದಿ_ಮಾರುತಿ ಪ್ರಸಾದ್ ತುಮಕೂರು