ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಮಸ್ತ್ ಡ್ಯಾನ್ಸ್.
ತುಮಕೂರು_ಕರ್ನಾಟಕ ರಾಜ್ಯ ಗ್ರಾಮ ಇಲಾಖೆ ಕೇಂದ್ರ ಸಂಘ ತುಮಕೂರು ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, 2023ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮತ್ತು ಕಂದಾಯ ಇಲಾಖೆಯ ಸಮಗ್ರ ಸುಧಾರಣೆಗಾಗಿ ವಿಚರಣ ಸಂಕೀರ್ಣವನ್ನು ತುಮಕೂರಿನ ಗಾಜಿನ ಮನೆಯಲ್ಲಿ ಆಯೋಜಿಸಲಾಗಿತ್ತು.
ಇನ್ನು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಹಾಗೂ ಕನ್ನಡ ಪ್ರೇಮ ಮೆರೆದ ಕಂದಾಯ ಇಲಾಖೆಯ ನೌಕರರು ಡಾ. ರಾಜಕುಮಾರ್ ರವರ ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಎನ್ನುವ ಕನ್ನಡ ಹಾಡಿಗೆ ತುಮಕೂರು, ಗುಬ್ಬಿ ಹಾಗೂ ಹೆಬ್ಬೂರು ಹೋಬಳಿಯ ಕಂದಾಯ ಇಲಾಖೆಯ ಮಹಿಳಾ ನೌಕರರು ಕನ್ನಡ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಇದಕ್ಕೆ ಸಾಲದೆಂಬಂತೆ ಸ್ಥಳದಲ್ಲೇ ಇದ್ದ ಗಂಡು ಹೈಕಳು ಸಹ ತಾವು ಸಹ ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಕನ್ನಡ ಗೀತೆಗೆ ನೃತ್ಯ ಹಾಕಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ವರದಿ _ಮಾರುತಿ ಪ್ರಸಾದ್ ತುಮಕೂರು