ಕರ್ನಾಟಕದಲ್ಲಿ ಗಂಟು ಮೂಟೆ ಕಟ್ಟೋ ಪರಿಸ್ಥಿತಿಗೆ ಕಾಂಗ್ರೆಸ್ ಬಂದಿದೆ_ಸಚಿವ ಆರ್.ಅಶೋಕ್.
ತುಮಕೂರು _ಗುಜರಾತ್ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಗಂಟು ಮೂಟೆ ಕಟ್ಟುವ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷ ಬಂದಿದೆ ಎಂದು ಸಚಿವ ಆರ್ ಅಶೋಕ್ ತಿಳಿಸಿದರು.
ತುಮಕೂರಿನಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ದ ವತಿಇಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದು ಟಿಕೆಯನ್ನು ಸಹ ಇಬ್ಬರು ನಾಯಕರು ವ್ಯತಿರಿಕ್ತವಾಗಿ ಹೇಳುತ್ತಿದ್ದು ಇನ್ನು ನಮ್ಮ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದ್ದು ಬಹಳ ಸಮಸ್ಯೆ ಆಗಿದೆ ಅದರ ಜೊತೆಯಲ್ಲಿ ಕೆಂಪೇಗೌಡರ ಪುತ್ತಳಿ ಅನಾವರಣ ಮಾಡಿರುವುದು ಸಹ ಹೊಟ್ಟೆ ಉರಿ ಶುರುವಾಗಿದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಕಾಂಗ್ರೆಸ್ ಪಕ್ಷದ ನಾಯಕರಿಗೆ ತಿಳಿದಿದೆ ಎಂದರು.
ಇನ್ನು ಗುಜರಾತ್ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಗಂಟು ಮೂಟೆ ಕಟ್ಟುವ ಪರಿಸ್ಥಿತಿಗೆ ಬಂದಿದ್ದು ಇನ್ನು ಅವರು ರಾಜ್ಯಕ್ಕೆ ಯಾವ ಕೊಡುಗೆ ನೀಡಿದ್ದಾರೆ ಸಿದ್ದರಾಮಯ್ಯನವರ ಆಡಳಿತ ಅವಧಿಯಲ್ಲಿ ಟಿಪ್ಪು ಭಾಗ್ಯ ನೀಡಿದ್ದು ಇನ್ನೂ ಟಿಪ್ಪು ಜಯಂತಿ ಆಚರಣೆ ವೇಳೆ ಕೊಲೆಗಳು ಆಗಿದ್ದು ಅವರ ಭಾಗ್ಯನ ಎಂದು ವಿರೋಧ ಪಕ್ಷಕ್ಕೆ ನೇರವಾಗಿ ತಿವಿದರು.
ಇನ್ನು ಪಿ ಎಫ್ ಐ ನ 1500ಕ್ಕೂ ಹೆಚ್ಚು ಕಾರ್ಯಕರ್ತರನ್ನ ಅವರು ಬೀದಿಗೆ ಬಿಟ್ಟಿದ್ದು ಅವರನ್ನು ನಮ್ಮ ಸರ್ಕಾರ ಬ್ಯಾನ್ ಮಾಡಿದೆ ಆದರೆ ಕಾಂಗ್ರೆಸ್ ಸರ್ಕಾರ ಅವರೆಲ್ಲರನ್ನ ಗಲಾಟೆ ಮಾಡಲೆಂದೆ ಲೈಸೆನ್ಸ್ ಕೊಟ್ಟು ನಿಲ್ಲಿಸಿದೆ ಅದರ ಜೊತೆಗೆ ಸಿದ್ದರಾಮಯ್ಯನವರು ಎಲ್ಲರೊಂದಿಗೆ ಇಲ್ಲ ಅಲ್ಪಸಂಖ್ಯಾತರೊಂದಿಗೆ ಅದರಲ್ಲೂ ಮುಸ್ಲಿಮರೊಂದಿಗೆ ಎಂದರೆ ಬಹಳ ಪ್ರೀತಿ, ಓಲೈಕೆ ಅದೇಕೋ ಗೊತ್ತಿಲ್ಲ ಟಿಪ್ಪು ಎಂದರೆ ಬಹಳ ಪ್ರೀತಿ ಇದೆ ಎಂದರು.
ಹಾಗಾಗಿ ಟಿಪ್ಪು ಅನ್ನೋ ಕಾಂಗ್ರೆಸ್ ಪಕ್ಷದ ರಾಜ್ಯಕ್ಕೆ ಬೇಡ ಎನ್ನುವುದನ್ನು ರಾಜ್ಯದ ಜನತೆ ತೀರ್ಮಾನ ಮಾಡಿದ್ದು ಹೇಗೆ ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷ ವಿರೋಧಪಕ್ಷದ ಸ್ಥಾನವು ಪಡೆದುಕೊಳ್ಳುವುದಕ್ಕೆ ಯೋಗ್ಯತೆ ಇಲ್ಲದಂತಾಗಿದೆ ಅದೇ ರೀತಿ ರಾಜ್ಯದಲ್ಲೂ ಸಹ ಕಾಂಗ್ರೆಸ್ ಪಕ್ಷ ಶೇಕಡ 20ರಷ್ಟು ಸಹ ಸ್ಥಾನ ಗೆಲ್ಲದೆ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷ ತೊಳೆದು ಹೋಗಲಿದೆ ಎಂದರು.
ಇನ್ನು ಗುಜರಾತ್ ನಲ್ಲಿ ಅಮ್ ಆದ್ಮಿ ಪಾರ್ಟಿ ಹೇಗೆ ಸರ್ಫ್ ಹಾಗೂ ನಿರ್ಮಾ ಪುಡಿ ಹಾಕಿ ಕಾಂಗ್ರೆಸ್ನನ್ನು ತೊಳೆದು ಹಾಕಿದ್ದಾರೋ ಅದೇ ರೀತಿ ರಾಜ್ಯದಲ್ಲೂ ಸಹ ಅಮ್ಮಾದ್ಮಿ ಪಕ್ಷವೇ ಕಾಂಗ್ರೆಸ್ ಪಕ್ಷವನ್ನ ತೊಳೆಯಲಿದೆ ಎಂದರು.
ಇನ್ನು ಗುಜರಾತ್ ಮಾಡೆಲ್ ಗುಜರಾತ್ ಮಾಡೆಲ್ ಹಾಗೆ ಇದೆ ಇನ್ನು ಕರ್ನಾಟಕ ಮಾಡಲ್ ಹಾಗೆ ಇದೆ ಇನ್ನು ರಾಜ್ಯದಲ್ಲಿ ಚುನಾವಣಾ ಪೂರ್ವ ಕಾರ್ಯಗಳು ಪಕ್ಷದಿಂದ ನಡೆಯುತ್ತಿದ್ದು ಇದೇ ತಿಂಗಳಿನಿಂದ ಪ್ರತಿ 15 ದಿನಕ್ಕೊಮ್ಮೆ ಪ್ರಧಾನಿ ನರೇಂದ್ರ ಮೋದಿ ರವರು ರಾಜ್ಯಕ್ಕೆ ಭೇಟಿ ನೀಡಲಿದ್ದು ಇದರೊಂದಿಗೆ ತಿಂಗಳಿಗೆ ನಾಲ್ಕು ಬಾರಿ ಅಮಿತ್ ಶಾ ರವರು ಸಹ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಆ ಸಂದರ್ಭದಲ್ಲಿ ರಾಜ್ಯದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವ ರೀತಿಯ ಸ್ಟ್ರಾಟಜೀ ಮಾಡಬೇಕು ಎಂದು ತೀರ್ಮಾನ ವನ್ನು ರಾಷ್ಟ್ರ ಹಾಗೂ ರಾಜ್ಯದ ನಾಯಕರು ಕೈಗೊಳ್ಳಲಿದ್ದಾರೆ ಎಂದರು.
ಹಾಗಾಗಿ ಕಾಂಗ್ರೆಸ್ ನಾಯಕರು ಆರೋಪಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಇನ್ನು ಅವರ ಆಡಳಿತ ಅವಧಿಯಲ್ಲಿ ಏನೆಲ್ಲ ನಡೆದಿದೆ ಎಂದು ರಾಜ್ಯದ ಹಾಗೂ ರಾಷ್ಟ್ರದ ಜನತೆಗೆ ಗೊತ್ತಿದೆ ಎಂದರು.
ವರದಿ_ ಮಾರುತಿ ಪ್ರಸಾದ್ ತುಮಕೂರು