ಕೊರೊನಾ ಎರಡನೆಯ ಅಲೆಯ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಬೆಳಗಾವಿ ಜಿಲ್ಲೆಯ ಗಡಿಯಲ್ಲಿ ಬಿಗಿ ಬಂದೋ ಬಸ್ತ ಏರ್ಪಡಿಸಲಾಗಿದೆ.ಕಾಗವಾಡ-ಮೀರಜ್,ಅಥಣಿ-ಜತ್ತ ಮತ್ತು ನಿಪ್ಪಾಣಿ ಹಾಗೂ ಕೊಲ್ಹಾಪುರ ನಡುವೆ ಚೆಕ್ ಪೋಸ್ಟಗಳನ್ನು ನಿರ್ಮಿಸಲಾಗಿದ್ದು ಮಹಾರಾಷ್ಟ್ರ ದಿಂದ ಕರ್ನಾಟಕ ಗಡಿ ಪ್ರವೇಶಿಸುವ ಪ್ರಯಾಣಿಕರು ಕಡ್ಡಾಯವಾಗಿ 72 ಗಂಟೆಗಳ ಅವಧಿಯೊಳಗಿನ ಕೊರೊನಾ ಟೆಸ್ಟ್ ವರದಿ ತರುವಂತೆ ನಿಯಮಾವಳಿಗಳನ್ನು ಅನುಸರಿಸಲಾಗುತ್ತಿದೆ.ಈಗಾಗಲೇ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ರೂಪಾಂತರಿ ಕೊರೊನಾ ವೈರಸ್ ಕಂಡುಬಂದಿರುವದರಿಂದ ಲಾಕ್ ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಂಪರ್ಕಿಸುವ ಮಹಾರಾಷ್ಟ್ರದ ಗಡಿಯಲ್ಲಿ ಚೆಕ್ ಪೋಸ್ಟ ನಿರ್ಮಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.ಈಗಾಗಲೇ ಚಿಕ್ಕೋಡಿ ಅಥಣಿ ಮತ್ತು ಕಾಗವಾಡ ತಾಲೂಕಿನಲ್ಲಿ ಚೆಕ್ ಪೋಸ್ಟ್ ನಿರ್ಮಿಸಿದ್ದು ತಾಲೂಕು ಆಡಳಿತದೊಂದಿಗೆ ಪೋಲಿಸ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಕರ್ತವ್ಯ ನಿರತರಾಗಿದ್ದಾರೆ.