ನವಂಬರ್ 4 ರಿಂದ 6ರ ವರೆಗೆ ಅಟವಿ ಸುಕ್ಷೇತ್ರದಲ್ಲಿ ಕೃಷಿ ಮೇಳ ,ಧರ್ಮ ಘೋಷ್ಠಿ ಆಯೋಜನೆ.

ನವಂಬರ್ 4 ರಿಂದ 6ರ ವರೆಗೆ ಅಟವಿ ಸುಕ್ಷೇತ್ರದಲ್ಲಿ ಕೃಷಿ ಮೇಳ ,ಧರ್ಮ ಘೋಷ್ಠಿ ಆಯೋಜನೆ.

 

ತುಮಕೂರು_ತಾಲೂಕಿನ ಚಿಕ್ಕತೊಟ್ಟುಕೆರೆಯಲ್ಲಿರುವ ಶ್ರೀ ಅಟವೀ ಜಂಗಮ ಸುಕ್ಷೇತ್ರದಲ್ಲಿ ನವೆಂಬರ್ 04ರಿಂದ 06ರವರೆಗೆ ಧಾರ್ಮಿಕ ಕ್ಷೇತ್ರದಲ್ಲಿ ಕೃಷಿ ಮೇಳ ಮತ್ತು ವಸ್ತು ಪ್ರದರ್ಶನ , ಧರ್ಮ ಗೋಷ್ಠಿ,ಮಹಿಳಾ ಗೋಷ್ಠಿ, 108 ಗೋಮಂಟಪಗಳಲ್ಲಿ 1108 ದಂಪತಿಗಳಿಂದ ಗೋಪೂಜೆ ಹಾಗೂ ಲಕ್ಷದ್ವೀಪೋತ್ಸವ ಆಯೋಜಿಸಲಾಗಿದೆ ಎಂದು ಕೊರಟಗೆರೆ ಕ್ಷೇತ್ರದ ಶಾಸಕರಾದ ಜಿ.ಪರಮೇಶ್ವರ್ ರವರು ತಿಳಿಸಿದ್ದಾರೆ.

 

ಅಟವಿ ಸುಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಾಸಕರು ಹಾಗೂ ಅಟವಿ ಜಂಗಮ ಸುಕ್ಷೇತ್ರದ ಪೀಠಧ್ಯಕ್ಷರಾದ ಶಿವಲಿಂಗ ಸ್ವಾಮಿಗಳು ಸುದ್ದಿಗೋಷ್ಠಿ ನಡೆಸುವ ಮೂಲಕ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು .

 

ನವೆಂಬರ್ 4ರಂದು ಕೃಷಿಮೇಳ ಮತ್ತು ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಅವರು ಈ ದಿವ್ಯ ಸಾನಿಧ್ಯವನ್ನು ಶಿವಲಿಂಗ ಮಹಾಸ್ವಾಮಿಗಳು ಹಾಗೂ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.

 

 

ಕೃಷಿಮೇಳ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಸನ್ಮಾನ್ಯ ಶ್ರೀ ಬಿ.ಸಿ ಪಾಟೀಲ್‌ ರವರು ಉದ್ಘಾಟನೆಯನ್ನು ಮಾಡಲಿದ್ದಾರೆ. ಕೃಷಿ ಮಳಿಗೆಗಳ ಉದ್ಘಾಟನೆಯನ್ನು ಸನ್ಮಾನ್ಯ ಗೃಹ ಸಚಿವರಾದ ಶ್ರೀ ಅರಗ ಜ್ಞಾನೇಂದ್ರ ರವರು ಮಾಡಲಿದ್ದಾರೆ. ವಿಶೇಷವಾಗಿ 2001 ನೇ ಇಸವಿಯಲ್ಲಿ ಶ್ರೀ ಕ್ಷೇತ್ರವನ್ನು ಹೆಚ್ಚು ಪ್ರಚಾರ ಗೊಳಿಸಿ ಸೇವೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದಂತಹ ಸನ್ಮಾನ್ಯ ಶ್ರೀ ಡಾ|| ಜಿ.ಎಸ್. ಬಸವರಾಜು ಮತ್ತು ಅಂದಿನ ಬೆಳ್ಳಾವಿ ಆಶೀರ್ವದಿಸಿ ಗೌರವಿಸಲಾಗುವುದು. ಶಾಸಕರಾದ ಆರ್. ನಾರಾಯಣ್ ರವರಿಗೆ ಪೂಜ್ಯರಿಂದ ಆಶೀರ್ವದಿಸಿ ಗೌರವಿಸಲಾಗುವುದು ಎಂದರು.

 

ಆ ದಿನ ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ವಿವಿಧ ಕ್ಷೇತ್ರಗಳ ಅಧ್ಯಕ್ಷರು, ಹಾಗೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಆಗಮಿಸಲಿದ್ದಾರೆ.

 

8ರಂದು ಶನಿವಾರದ ಕಾರ್ಯಕ್ರಮದಲ್ಲಿ ಶ್ರೀಮನ್ ಮಹಾರಾಜ್ ನಿ//ಜಗದ್ಗುರು ಅನ್ನದಾನೀಶ್ವರ ಮಹಾಸ್ವಾಮಿಗಳು, ಮುಂಡರಗಿ ಹಾಗೂ ಶ್ರೀ ಮ.ನಿ.ಪ್ರ. ಕುಮಾರ ಮಹಾಸ್ವಾಮಿಗಳು ದುಂಡಸಿ ಇವರ ನೇತೃತ್ವದಲ್ಲಿ ಹಲವು ಹರಗುರು ಚರಮೂರ್ತಿಗಳು ಧರ್ಮ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು

 

5ರ ಶನಿವಾರ 2:30 ಕ್ಕೆ ಶ್ರೀಮನ್ ಮಹಾರಾಜ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು. ಶ್ರೀ ಸುತ್ತೂರು ಮಠ, ಮೈಸೂರು ಇವರ ದಿವ್ಯ ಸಾನಿಧ್ಯದಲ್ಲಿ ಮಹಿಳಾ ಗೋಷ್ಟಿಯನ್ನು ಮಾನ್ಯ ಮುಜರಾಯಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆಯವರು ಉದ್ಘಾಟಿಸಲಿದ್ದಾರೆ ಎಂದರು.

 

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಕನ್ನಿಕಾ ಪರಮೇಶ್ವರ್ ರವರು ವಹಿಸಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಬಿ.ಸಿ ನಾಗೇಶ್ ರವರು ಹಾಗೂ ಮಾನ್ಯ ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ ಮಾಧುಸ್ವಾಮಿಯವರು ಮತ್ತು ಮಾಜಿ ಸಚಿವರಾದ ಶ್ರೀಮತಿ ರಾಣಿ ಸತೀಶ್ ರವರು ಮತ್ತು ಮಾಜಿ ಸಚಿವರಾದ ಶ್ರೀ ಎಂ.ಬಿ ಪಾಟೀಲ್ ರವರು ಮತ್ತು ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ವರ್ ರವರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಸದಸ್ಯರುಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

 

ನಮ್ಮ ಭಾರತ ದೇಶವು ಭಕ್ತಿ ಭಾವ ವಿಶ್ವಾಸದಿಂದ ಬಾಳಿ ಬದುಕಿದ್ದಾರೆ. ನಮ್ಮ ದೇಶವು ಓಂ ಕಾರದಿಂದ ಹುಟ್ಟಿದ್ದು ಬ್ರಹ್ಮಾಂಡವು ಪರಶಿವನ ಪಂಚ ಮುಖಗಳಿಂದ ಸದ್ಯೋಜ್ಯಾತ ವಾಮ, ದೇವ ಅಘೋರ, ತತ್ರುಷ, ಈಶಾನ್ಯಗಳೆಂಬ ಪಂಚ ಗಣಾಧೀಶರು, ನಂದಾ, ಭದ್ರ, ಸುರಭಿ, ಸುಶೀಲ, ಸುಮನಗಳೆಂಬ ಪಂಚ ಕನೈಯರಾದ ಗೋ ಮಾತೆಗಳನ್ನು ಭೂ ಲೋಕಕ್ಕೆ ಕಳುಹಿಸುತ್ತಾರೆ, ಈ ಪಂಚ ಗೋಮಾತೆಯರು ಕೃತಯುಗ, ತ್ರೇತ್ರಾಯುಗ, ದ್ವಾಪರ ಯುಗ, ಕಲಿಯುಗದಲ್ಲಿ ಅವತರಿಸಿ,ತಮ್ಮ ಲೀಲೆಯನ್ನು ತೋರಿಸಿದ್ದಾರೆ. `ಗೋಮಾತೆಯರಿಂದ ಈ ಜಗತ್ತನ ವ್ಯವಹಾರಗಳು ಸೃಷ್ಟಿಯಾಗುತ್ತಿವೆ ಎಂದರು.

 

ಈ ಗೋಮಾತೆಯರು ಕೃಷಿ, ಅಸಿ, ಮಸಿಯೆಂಬ ತತ್ವವನ್ನು ಜಗತ್ತಿಗೆ ತೋರಿಸುವುದರ ಮೂಲಕ ಗೋಮಾತೆಯರ ಸೇವೆ ಮಾಡಿದರೆ, 33 ಕೋಟಿ ದೇವತೆಗಳ ಸೇವೆ ಮಾಡಿದಷ್ಟು ಫಲ ದೊರೆಯುವುದು.ಲೋಕೋದ್ದಾರಕ್ಕಾಗಿ ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕಿನ ಕೋರಾ ಹೋಬಳಿಯ ಚಿಕ್ಕತೊಟ್ಟಿಲುಕೆರೆ ಗ್ರಾಮದ ಅಟವೀ ಸ್ವಾಮಿ ಮಠದ ಮಠಾಧ್ಯಕ್ಷರಾದ ಶ್ರೀ ಮ.ನಿ.ಪ್ರಸ್ವ ಅಟವೀ ಶಿವಲಿಂಗ ಮಹಾಸ್ವಾಮಿಗಳವರ ಸತ್ಯ ಸಂಕಲ್ಪದಂತೆ, ಹಾಗೂ ಅವರ ಅಪ್ಪಣೆಯ ಮೇರೆಗೆ ಕಾರ್ತಿಕಮಾಸದಲ್ಲಿ ಮೂರು ದಿನಗಳಂದು ಕೃಷಿಮೇಳ, 1108 ದಂಪತಿಗಳಿಂದ ಗೋಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 6ರಂದು ಭಾನುವಾರ ಬೆಳಿಗ್ಗೆ 10 ಕ್ಕೆ ಗೋಪೂಜೆ ದಂಪತಿಗಳಿಂದ ನಡೆಯುವುದು.

 

ಇದೇ ಸಂದರ್ಭದಲ್ಲಿ ಪರಮತಪಸ್ವೀ ಲಿಂಗೈಕ್ಯ ಶ್ರೀಮ.ನಿ.ಪ್ರ.ಸ್ವ, ಅಟವೀ ಮಹಾ ಶಿವಯೋಗಿಗಳವರ 122 ನೇ ಪುಣ್ಯ ಸ್ಮರಣೆ ಕಾರ್ತಿಕ ದೀಪೋತ್ಸವದ ರೊಟ್ಟಿ ಜಾತ್ರೆ, ಅಕ್ಕಿ ಪೂಜೆ, ವಿಶೇಷ ಕಾರ್ಯಕ್ರಮವು ಜರುಗುವುದು. ಈ ಎಲ್ಲಾ ಕಾರ್ಯಕ್ರಮವು ಸಮಸ್ತ ಭಕ್ತ ಮಹಾಶಯರಯ ಗೋಮಾತೆ ಸೇವೆ ಮಾಡಲು ಆಗಮಿಸಬೇಕು ಎಂದು ಮನವಿ ಮಾಡಿದರು.

 

 

ಇನ್ನು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮುರುಳಿದರ ಹಾಲಪ್ಪ, ಟಿ.ಬಿ ಶೇಖರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!