ಮುಂಬರುವ ಚುನಾವಣೆಯಲ್ಲಿ ಆಶೀರ್ವದಿಸಿ ಎಂದು ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದ ಡಾಕ್ಟರ್ ಜಿ ಪರಮೇಶ್ವರ್
ಕೊರಟಗೆರೆ_ಕ್ಷೇತ್ರದ ಅಭಿವೃದ್ಧಿ ನನ್ನ ಮಂತ್ರ ಅಭಿವೃದ್ಧಿ ನನ್ನ ಆಸೆ ಈ ಮೂಲಕ ಕೊರಟಗೆರೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿರುವುದಾಗಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರಾದ ಡಾಕ್ಟರ್ ಜಿ ಪರಮೇಶ್ವರ್ ಅವರು ತಮ್ಮ ಮನದಾಳದ ಮಾತನ್ನ ವ್ಯಕ್ತಪಡಿಸಿದ್ದಾರೆ.
ಕೊರಟಗೆರೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು ಕಳೆದ ಹತ್ತು ವರ್ಷದ ಹಿಂದೆ ನಾನು ಕ್ಷೇತ್ರಕ್ಕೆ ಬಂದಾಗ ರಸ್ತೆ ಅಗಲೀಕರಣಕ್ಕೆ ಕೈ ಹಾಕಿದಾಗ ನನ್ನ ಮೇಲೆ ಸಾಕಷ್ಟು ಟೀಕೆ ಟಿಪ್ಪಣಿ ವ್ಯಕ್ತವಾದವು ಆದರೂ ಸಹ ಕಠಿಣ ನಿರ್ಧಾರವನ್ನು ತೆಗೆದುಕೊಂಡು ರಸ್ತೆಯನ್ನು ಅಗಲೀಕರಣ ಮಾಡಿ ಸುಮಾರು 10 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದ್ದೇವೆ, ಇನ್ನು ಕೊರಟಗೆರೆ ಪಟ್ಟಣದಲ್ಲಿ ಸಾಕಷ್ಟು ರಸ್ತೆ ಹಾಗೂ ಉತ್ತಮ ಚರಂಡಿ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗ 11 ಕೋಟಿ ವೆಚ್ಚದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತವೆ ಇನ್ನು ಒಂದೇ ಬಾರಿ 11 ಕೋಟಿ ರೂಗಳ ಕೆಲಸ ಆಗಿರಲಿಲ್ಲ ಹಿಂದೆಂದೂ ಸಹ ಇಷ್ಟು ಬೃಹತ್ ಮೊತ್ತದ ಅಭಿವೃದ್ಧಿ ಕೆಲಸಗಳು ಈ ಹಿಂದೆ ನಡೆದಿರಲಿಲ್ಲ ಇನ್ನು ಇಷ್ಟು ಬೃಹತ್ ಮೊತ್ತ ಈ ಹಿಂದೆ ಯಾವುದೇ ಅವಧಿಯಲ್ಲಿ ಬಂದಿದ್ದರು ಸಹ ನಾನು ಕ್ಷಮೆ ಕೇಳಲು ಸಿದ್ಧ ಎಂದು ಬಹಿರಂಗವಾಗಿ ವೇದಿಕೆಯಲ್ಲಿ ಸವಾಲು ಹಾಕಿದ್ದಾರೆ.
ಇನ್ನು ಕೊರಟಗೆರೆ ತಾಲೂಕನ್ನ ಮಾದರಿ ತಾಲೂಕಾಗಿ ಮಾಡುವುದು ನನ್ನ ಬಹುದಿನಗಳ ಆಸೆ, ಹಾಗಾಗಿ ಮುಂದಿನ ಆರು ತಿಂಗಳಲ್ಲಿ ಚುನಾವಣೆ ಸಮೀಪಿಸುತ್ತಿದ್ದು ಮತ್ತೊಮ್ಮೆ ನನಗೆ ಆಶೀರ್ವದಿಸಿ ಕೊರಟಗೆರೆ ತಾಲೂಕಿನ ಜನರು ಮುಂಬರುವ ಚುನಾವಣೆಯಲ್ಲಿ ತಮ್ಮನ್ನ ಗೆಲ್ಲಿಸಿ ಎಂದು ವೇದಿಕೆಯಲ್ಲಿ ತಮ್ಮ ಮನದಾಳದ ಮಾತನ್ನು ಹೊರ ಹಾಕಿದ್ದಾರೆ.
ಇನ್ನು 2013ರ ಚುನಾವಣೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ತನಗೆ ನಿಮ್ಮಿಂದ ಮತ ನೀಡಲು ಈ ರೀತಿಯಾಗಿ ಬಹಿರಂಗವಾಗಿ ವೇದಿಕೆ ಕಾರ್ಯಕ್ರಮದಲ್ಲಿ ಕೇಳಿರಲಿಲ್ಲ ಒಂದು ವೇಳೆ ಕೇಳಿದ್ದರೆ ಕಳೆದ ಬಾರಿಯ ಚುನಾವಣೆಯಲ್ಲಿ ತಾನು ಗೆಲ್ಲುತ್ತಿದ್ದೇನೋ ….??ಗೊತ್ತಿರ್ಲಿಲ್ಲ…??? ಎಂದಿರುವ ಅವರು ಈ ಬಾರಿ ಧೈರ್ಯವಾಗಿ ತಮ್ಮ ಮುಂದೆ ನಿಂತಿದ್ದು ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಲು ಆಶೀರ್ವದಿಸಬೇಕು ಎಂದು ಕೊರಟಗೆರೆ ತಾಲೂಕಿನ ಜನತೆಯಲ್ಲಿ ಮನವಿ ಮಾಡಿದ್ದಾರೆ.
ವರದಿ_ ಮಾರುತಿ ಪ್ರಸಾದ್ ತುಮಕೂರು