ರಸ್ತೆ ಅಗಲೀಕರಣ ಹೆಸರಿನಲ್ಲಿ ದಲಿತರ ಜಮೀನು ಕಬಳಿಸಲು ಮುಂದಾದ್ರ ಪಾಲಿಕೆ ಅಧಿಕಾರಿಗಳು…?

ರಸ್ತೆ ಅಗಲೀಕರಣ ಹೆಸರಿನಲ್ಲಿ ದಲಿತರ ಜಮೀನು ಕಬಳಿಸಲು ಮುಂದಾದ್ರ ಪಾಲಿಕೆ ಅಧಿಕಾರಿಗಳು…?

 

 

ತುಮಕೂರು_ರಸ್ತೆ ಅಗಲೀಕರಣ ನೆಪದಲ್ಲಿ ದಲಿತರ ಜಮೀನನ್ನ ಕಬಳಿಸಲು ಪಾಲಿಕೆ ಅಧಿಕಾರಿಗಳು ಹುನ್ನಾರ ನಡೆಸಿದ್ದಾರೆ ಎಂದು ದಲಿತ ಕುಟುಂಬಗಳು ಪಾಲಿಕೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ.

 

ತುಮಕೂರಿನ ಗಂಗಸಂದ್ರ ಗ್ರಾಮದಲ್ಲಿ ಪಾಲಿಕೆ ವತಿಇಂದ ಮೇಳೆಕೋಟೆಯಿಂದ ಗಂಗಸಂದ್ರವರೆಗೂ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದು ರಸ್ತೆ ಅಗಲೀಕರಣ ಹೆಸರಿನಲ್ಲಿ ದಲಿತರ ಕುಟುಂಬಗಳ ಮೇಲೆ ಪಾಲಿಕೆ ಅಧಿಕಾರಿಗಳು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ದಲಿತ ಕುಟುಂಬಗಳು ರಸ್ತೆಯನ್ನು ಸರ್ವೇ ಮಾಡಲು ಬಂದ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದ್ದು ಅಧಿಕಾರಿಗಳು ಸಾರ್ವಜನಿಕರ ವಿರೋಧದ ನಡುವೆ ಸರ್ವೇ ಮಾಡದೆ ಹಿಂತಿರುಗಿದ ವಿಲಕ್ಷಣ ಘಟನೆ ನಡೆದಿದ್ದು.

 

 

 

ಘಟನೆಯ ವಿವರ

ಕಳೆದ ಒಂದು ವರ್ಷದಿಂದ ಮೇಳಕೋಟೆಯಿಂದ ಗಂಗಸಂದ್ರವರೆಗೂ ರಸ್ತೆ ಅಗಲೀಕರಣಕ್ಕೆ, ಪಾಲಿಕೆ ಮುಂದಾಗಿದ್ದು ಕಳೆದ ಕೆಲ ತಿಂಗಳುಗಳ ಹಿಂದೆ ಮೇಳಕೋಟೆ ಗ್ರಾಮದಲ್ಲಿ ರಸ್ತೆಯನ್ನು ಒತ್ತುವರಿ ಮಾಡಿ ಕೊಂಡಿದ್ದ ಹಲವು ಕಟ್ಟಡಗಳನ್ನ ತೆರವುಗೊಳಿಸಿ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದರು ಆದರೆ ಕೊನೆ ಕ್ಷಣದಲ್ಲಿ ರಸ್ತೆ ಆಗಲಿ ಕರಣ ಕಾಮಗಾರಿಯನ್ನ ಕೈಬಿಟ್ಟಿದ್ದರು.

 

 

ಇದರ ಮುಂದುವರಿದ ಭಾಗವಾಗಿ ಗಂಗಸಂದ್ರ ಗ್ರಾಮದಲ್ಲಿ ಹಲವು ದಲಿತ ಕುಟುಂಬಗಳು ಹಲವಾರು ವರ್ಷಗಳಿಂದ ವಾಸವಿದ್ದು ಯಾವುದೇ ಒತ್ತುವರಿ ಇಲ್ಲದೆ ಇದ್ದರೂ ಸಹ ಪಾಲಿಕೆ ಅಧಿಕಾರಿಗಳು ರಸ್ತೆ ಅಗಲೀಕರಣದ ನೆಪವಡ್ಡಿ ಕೇವಲ ದಲಿತರ ಕುಟುಂಬಗಳು ಇರುವ ಭಾಗದಲ್ಲಿರುವ ಜಮೀನು ಹಾಗೂ ಕಟ್ಟಡಗಳನ್ನ ಹೊಡೆಯಲು ಮುಂದಾಗಿದ್ದು ಸವರ್ಣೀಯ ಕುಟುಂಬಗಳ ಕಟ್ಟಡಗಳ ಒತ್ತುವರಿಯನ್ನು ತೆರವುಗೊಳಿಸದೆ ದಲಿತರ ಜಮೀನು ಹಾಗೂ ನಿವೇಶನಗಳನ್ನ ಬಳಸಿ ರಸ್ತೆಯನ್ನು ನಿರ್ಮಿಸಲು ಮುಂದಾಗಿರುವ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದಲಿತ ಕುಟುಂಬಗಳು ಸರ್ವೆ ಮಾಡಲು ಬಂದಿದ್ದ ಪಾಲಿಕೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ವಾಪಸ್ ಕಳುಹಿಸಿರುವ ಘಟನೆ ನಡೆದಿದೆ. ಇನ್ನು ಸಾರ್ವಜನಿಕರ ತೀವ್ರ ವಿರೋಧಕ್ಕೆ ಉತ್ತರಿಸಿರುವ ಪಾಲಿಕೆಯ ಅಧಿಕಾರಿಗಳು ಕೆಲ ಸ್ಥಳೀಯರು ಖಾತೆಗಾಗಿ ಅರ್ಜಿ ಸಲ್ಲಿಸಿದ್ದು ಅದರ ಸರ್ವೆಗೆ ಬಂದಿರುವ ನೆಪವನ್ನ ಒಡ್ಡಿ ತೀವ್ರ ಪೇಚಿಗೆ ಸಿಲುಕಿದ ಘಟನೆಯು ಸಹ ವರದಿಯಾಗಿದೆ.

 

 

ಇನ್ನು 40 ಅಡಿ ಅಗಲದ ರಸ್ತೆಯನ್ನು ನಿರ್ಮಾಣ ಮಾಡಲು ಮುಂದಾಗಿರುವ ಪಾಲಿಕೆ ಅಧಿಕಾರಿಗಳು ಕೇವಲ ಒಂದು ಬದಿಯಲ್ಲಿ ಇರುವ ದಲಿತರ ನಿವೇಶನ ಹಾಗೂ ದಲಿತ ಕುಟುಂಬಗಳ ಜಾಗವನ್ನು ಟಾರ್ಗೆಟ್ ಮಾಡಿ ಅವುಗಳನ್ನ ಬಳಸಿಕೊಂಡು ರಸ್ತೆಯನ್ನು ನಿರ್ಮಾಣ ಮಾಡಲು ಮುಂದಾಗಿರುವ ಅಧಿಕಾರಿಗಳ ನಡೆಗೆ ಸಾರ್ವಜನಿಕರ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇನ್ನು ಈಗಾಗಲೇ ಕೆಲ ದಲಿತ ಕುಟುಂಬಗಳು ಸುಮಾರು 9 ಕುಂಟೆ ಜಾಗವನ್ನು ರಸ್ತೆಗಾಗಿ ಬಿಟ್ಟಿದ್ದರು ಸಹ ಪುನಃ ಅದೇ ಜಾಗದಲ್ಲಿ ಮತ್ತಷ್ಟು ಜಾಗವನ್ನು ಪಾಲಿಕೆ ಅಧಿಕಾರಿಗಳು ಹುನ್ನಾರ ನಡೆಸಿ ರಸ್ತೆಯನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಅಧಿಕಾರಿಗಳು ದಲಿತರ ರಕ್ಷಣೆಗೆ ಮುಂದಾಗುತ್ತಿಲ್ಲ ಕೂಡಲೇ ಕಾನೂನು ಬದ್ಧವಾಗಿ ಸಂಪೂರ್ಣ ರಸ್ತೆಯನ್ನು ಸರ್ವೇ ಮಾಡಿ ರಸ್ತೆಯ ಎರಡು ಬದಿಯಲ್ಲಿ ಇರುವ ಒತ್ತುವರಿ ಜಾಗವನ್ನು ಪಾಲಿಕೆ ಅಧಿಕಾರಿಗಳು ಗುರುತಿಸಬೇಕು ಎಂದು ಪಟ್ಟು ಹಿಡಿದ ಸಾರ್ವಜನಿಕರು ಕೊನೆಗೆ ಯಾವುದೇ ಸರ್ವೆ ಮಾಡದಂತೆ ಆಗಮಿಸಿದ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡು ವಾಪಸ್ ಕಳುಹಿಸಿದ್ದಾರೆ.

 

 

 

ದಲಿತ ಸಂಘಟನೆಗಳ ಆಕ್ರೋಶ.

ಇನ್ನು ದಲಿತರ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿರುವ ಪಾಲಿಕೆಯ ಅಧಿಕಾರಿಗಳ ನಡೆಗೆ ಹಲವು ದಲಿತ ಸಂಘಟನೆಗಳು ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಪಾಲಿಕೆ ಅಧಿಕಾರಿಗಳು ತಮ್ಮ ನಡೆಯನ್ನು ಸರಿ ಪಡಿಸಿಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಪಾಲಿಕೆಯ ಕಚೇರಿಯ ಮುಂದೆ ಉಗ್ರಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆಯನ್ನು ಸಹ ರವಾನಿಸಿದ್ದಾರೆ.

 

 

ಇದೇ ಸಂದರ್ಭದಲ್ಲಿ ಗ್ರಾಮಸ್ಥರಾದ ಸೀನಪ್ಪ, ಹನುಮಂತ ರಾಯಪ್ಪ ,ಕೃಷ್ಣಪ್ಪ, ರಂಗ ಹನುಮಯ್ಯ, ಸುರೇಶ್, ಕೃಷ್ಣಪ್ಪ, ಗಿರೀಶ್, ರಾಜೇಶ್ ಸೇರಿದಂತೆ ಹಲವು ದಲಿತ ಸಂಘಟನೆಗಳ ದಲಿತ ಸಂಘಟನೆಯ ಮುಖಂಡರು ಸ್ಥಳದಲ್ಲಿ ಹಾಜರಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!