ಭಾರತ್ ಜೂಡೋ ಯಾತ್ರೆ ತುಮಕೂರು ಜಿಲ್ಲೆಗೆ ಅಕ್ಟೋಬರ್ 8ರಂದು ಎಂಟ್ರಿ_ಡಾ. ಜಿ ಪರಮೇಶ್ವರ್ ಹೇಳಿಕೆ.

ಭಾರತ್ ಜೂಡೋ ಯಾತ್ರೆ ತುಮಕೂರು ಜಿಲ್ಲೆಗೆ ಅಕ್ಟೋಬರ್ 8ರಂದು ಎಂಟ್ರಿ_ಡಾ. ಜಿ ಪರಮೇಶ್ವರ್ ಹೇಳಿಕೆ.

 

ತುಮಕೂರು_ಅಕ್ಟೋಬರ್ 8ರಂದು ರಾಹುಲ್ ಗಾಂಧಿ ರವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ, ತುಮಕೂರು ಜಿಲ್ಲೆಗೆ ಅಕ್ಟೋಬರ್ 8ರಂದು ಜಿಲ್ಲೆಗೆ ಪ್ರವೇಶ ಮಾಡಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರಾದ ಡಾ. ಜಿ ಪರಮೇಶ್ವರ್ ತಿಳಿಸಿದರು.

 

 

 

ತುಮಕೂರಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾಹಿತಿ ನೀಡಿದ ಅವರು ಜಿಲ್ಲೆಯ ಎಲ್ಲ ಮುಖಂಡರ ನೇತೃತ್ವದಲ್ಲಿ ಇಂದಿನ ಸಭೆ ನಡೆದಿದ್ದು ಭರತ್ ಜೋಡೋ ಯಾತ್ರೆಗೆ ಸಂಬಂಧಿಸಿದಂತೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಮುಖಂಡರ ಸಭೆ ನಡೆದಿದ್ದು ಯಾತ್ರೆಯಲ್ಲಿ ಭಾಗವಹಿಸುವ ಮುಖಂಡರು ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದಂತೆ ಉಪಹಾರ ,ಭದ್ರತೆ,ಪ್ರಯಾಣ, ಪ್ರಯಾಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ನಾಯಕರೊಂದಿಗೆ ಸಮಗ್ರವಾಗಿ ಚರ್ಚಿಸಿದ್ದು ಸಭೆಯಲ್ಲಿ ಜಿಲ್ಲೆಯ ಎಲ್ಲಾ ಮುಖಂಡರು ನಾಯಕರು ಭಾಗವಹಿಸಿದ್ದು ಯಾತ್ರೆ ಸಾಗುವ ಎಲ್ಲಾ ಕ್ಷೇತ್ರದಲ್ಲೂ ಅಲ್ಲಿನ ನಾಯಕರು ಜವಾಬ್ದಾರಿಯನ್ನ ತೆಗೆದುಕೊಂಡು ಕೆಲಸ ನಿರ್ವಹಿಸುವ ಬಗ್ಗೆ ನಾಯಕರಿಗೆ ತಿಳಿಸಲಾಗಿದೆ ಎಂದರು.

 

ಪ್ರತಿದಿನ 25ಸಾವಿರಕ್ಕೂ ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವರ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂದರು.

 

 

ಇನ್ನು ತುಮಕೂರು ಜಿಲ್ಲೆಯಲ್ಲಿ ಯಾತ್ರೆ ಸಾಗುವ ಸಂದರ್ಭದಲ್ಲಿ ಪ್ರಿಯಂಕಾ ಗಾಂಧಿ ರವರು ಸಹ ಭಾಗವಹಿಸಲಿದ್ದು ದಿನಾಂಕ ಇನ್ನು ಅಧಿಕೃತವಾಗಿ ತಿಳಿಸಿಲ್ಲ ಆದರೆ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಪ್ರಿಯಾಂಕ ಗಾಂಧಿರವರು ಭಾಗವಹಿಸುವ ವೇಳೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರು ರಾಜ್ಯದಿಂದ ಆಗಮಿಸಿ ಅವರೊಂದಿಗೆ ಬಾಗವಹಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರು ಸಹ ತಿಳಿಸಿದ್ದಾರೆ ಹಾಗಾಗಿ ಅದಕ್ಕೋಸ್ಕರ ತಯಾರಿ ನಡೆಯುತ್ತಿದೆ ಎಂದರು.

 

 

ಇನ್ನು ಸಭೆಯಲ್ಲಿ ಮಾಜಿ ಸಚಿವ ಟಿ ಬಿ ಜಯಚಂದ್ರ, ಕಾಂಗ್ರೆಸ್ ನಾಯಕಿ ಉಮಾಶ್ರೀ, ಪುಷ್ಪ ಅಮರನಾಥ್, ಮಾಜಿ ಸಂಸದ  ವಿ ಎಸ್ ಉಗ್ರಪ್ಪ, ಪಾವಡ ಶಾಸಕ ವೆಂಕಟರಮಣಪ್ಪ,ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್, ಎಂಎಲ್ಸಿ ಆರ್ ರಾಜೇಂದ್ರ, ಮಾಜಿ ಶಾಸಕ ಷಡಕ್ಷರಿ, ರಫೀಕ್ ಅಹಮದ್, ಬೆಮೆಲ್ ಕಾಂತರಾಜು , ವೆಂಕಟೇಶ್, ಸೇರಿದಂತೆ ಜಿಲ್ಲೆಯ ನಾಯಕರು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!