ವಿದ್ಯುತ್ ಕಂಪನಿಯ ನೌಕರರನ್ನ ಕಾಯಂಗೋಳಿಸಲು ಒತ್ತಾಯಿಸಿ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟ ಅವಧಿ ಮುಷ್ಕರ.
ವಿದ್ಯುತ್ ಸರಬರಾಜು ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಖಾಯಂ ಗೊಳಿಸಲು ಶ್ರಮಜೀವಿಗಳ ವೇದಿಕೆಯಡಿಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 2022 ಸೆಪ್ಟೆಂಬರ್ 6 ರಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ.
ರಾಜ್ಯ ಸರ್ಕಾರದ ಒಡೆತನಕ್ಕೆ ಸೇರಿದ ರಾಜ್ಯದ 5 ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಜಿ.ಎ.ಪಿ.ಗಳಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು 3700 ಜನರ ಖಾಯಂತಿಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ದಿನಾಂಕ: 06-09 2022ರಂದು ಬೆಳಗ್ಗೆ 11 ಗಂಟೆಯಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಶ್ರಮಜೀವಿಗಳ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಜಿ.ವಿ.ಪಿ ಕ್ಷೇಮಾಭಿವೃದ್ಧಿ ಸಂಘದಿಂದ ಈ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟದ ರುವಾರಿ ಶ್ರೀ ಚಂದ್ರಶೇಖರ ಹಿರೇಮ ತಿಳಿಸಿರುತ್ತಾರೆ,
ರಾಜ್ಯದ್ಯಾಂತ ಸುಮಾರು 3700 ಜನ ಕಳೆದ 18 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದು, ಗ್ರಾಮ ಪಂಚಾಯಿತಿಗೆ ಒಬ್ಬರಂತೆ ನೇಮಕಗೊಂಡು ಅವರ ವ್ಯಾಪ್ತಿಯ ಸುಮಾರು 2000ಕ್ಕೂ ಮೇಲ್ಪಟ್ಟು ಗ್ರಾಹಕರಿಗೆ ವಿದ್ಯುತ್ ಬಿಲ್ ನೀಡುವುದು, ಹಣ ಪಡೆದು ಅದೇ ದಿನ ಪಾವತಿಸುವುದು ಹಾಗೂ ಅವರ ಪಂಚಾಯಿತಿ ವ್ಯಾಪ್ತಿಯ ಇಲಾಖೆಯ ಎಲ್ಲ ಕೆಲಸ ನಿಭಾಯಿಸುವುದು, ಇವರ ಜವಾಬ್ದಾರಿಯಾಗಿದ್ದು, ಇವರನ್ನು ನೇಮಕ ಮಾಡಿಕೊಳ್ಳುವಾಗ ವಿದ್ಯಾರ್ಹತೆ, ವಯೋಮಿತಿ, ರಿಸರ್ವೇಷನ್, ಮುಂತಾದವುಗಳನ್ನು ಪರೀಕ್ಷಿಸಿ ರಾಜ್ಯ ಸರ್ಕಾರಿ ನೌಕರಿಗೆ ನೇಮಕ ಮಾಡಿಕೊಳ್ಳುವಂತೆ ಮಾಡಿ ನಂತರ ಇವರ ಜೊತೆ ವ್ಯವಹಾರಿಕ ಒಪ್ಪಂದ ಮಾಡಿಕೊಂಡು ಮಾಸಿಕ 12000/ ರೂ ಮಾತ್ರ ಕಮಿಷನ್ ನೀಡುತ್ತಿದ್ದು, ಯಾವುದೇ ತುಟ್ಟಿ ಭತ್ಯೆ ನೀಡುತ್ತಿಲ್ಲ.
ಇವರನ್ನು ಖಾಯಂ ಮಾಡುವಂತೆ ಒತ್ತಾಯಿಸಿ ಕರ್ನಾಟಕದ ಉಚ್ಚ ನ್ಯಾಯಾಲಯ ತೀರ್ಪು ನೀಡಿ, ಇವರ ಸೇವೆ ವಿದ್ಯುತ್ ಇಲಾಖೆಯ ಕಿರಿಯ ಮೀಟರ್ ರೀಡರ್ ಅಥವಾ ತತ್ಸಮ ಹುದ್ದೆ ರಚಿಸಿ ಖಾಯಂ ಮಾಡಿಸುವಂತೆ ಆದೇಶಿಸಿದೆ. ರಾಜ್ಯ ಸರ್ಕಾರ ಇದನ್ನು ಅನುಷ್ಟಾನಗೊಳಿಸದೆ ವಿಭಾಗೀಯ ಪೀಠಕ್ಕೆ ಇವರ ವಿರುದ್ಧ ಮೇಲ್ಮನವಿ ಸಲ್ಲಿಸಿದೆ. ಒಂದು ಕಡೆ ರಾಜ್ಯದ ಇಂಧನ ಸಚಿವರಾದ ಶ್ರೀ ಸುನಿಲ್ ಕುಮಾರ್ ರವರು ಇವರ ಖಾಯಂತಿಗೆ ಅಧಿಕಾರಿಗಳ ಸಭೆ, ಸಂಘದ ಪದಾಧಿಕಾರಿಗಳನ್ನ ಜೊತೆ ಸಭೆ ನಡೆಸಿ ಭರವಸೆ ನೀಡುತ್ತಿದ್ದು, ಇನ್ನೊಂದು ಕಡೆ ಇವರನ್ನು ಖಾಯಂ ಮಾಡದೆ ಇರಲು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿರುವುದು ಆಶ್ಚರ್ಯ ತಂದಿದೆ. ಅಧಿಕಾರಿಗಳ ಮಾತು ಕೇಳದೆ ಇವರ ಸೇವೆಯನ್ನು ನ್ಯಾಯಾಲಯದ ಆದೇಶದಂತೆ ಖಾಯಂ ಗೊಳಿಸಲು ಒತ್ತಾಯಿಸಿ ಸೆಪ್ಟೆಂಬರ್ 6 ರಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು. ಪತ್ರಿಕಾ ಗೋಷ್ಟಿಯಲ್ಲಿ ಶ್ರಮ ಜೀವಿಗಳ ವೇದಿಕೆಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಹಿರೇಮಠ ಜಿ.ವಿ.ಪಿ. ಸಂಘದ ಅಧ್ಯಕ್ಷ ಕಾಂತರಾಜ, ಬೆಸ್ಕಾಂ ಅಧ್ಯಕ್ಷ ದಯಾನಂದ, ಕಾರ್ಯದರ್ಶಿ ರಘು, ಕೊಟ್ರೇಶ್ ಪಿ.ತೆಲಗಿ, ನಿರಂಜನ ಎಸ್. ನಾಗರಾಜ ದೇವನಹಳ್ಳಿ, ನರೇಂದ್ರ ರೆಡ್ಡಿ ಹಾಗೂ ಜೆಸ್ಕಾಂ ನಾಗರಾಜ ಹರಸೂರ, ಇತರರು ಭಾಗವಹಿಸಿದ್ದರು.