ಬೈಕ್ ಮತ್ತು ಲಾರಿ ಅಪಘಾತ ಬೈಕ್ ಸವಾರ ಸಾವು ಕೊರಟಗೆರೆ ಪಟ್ಟಣದಲ್ಲಿ ಘಟನೆ.

ಬೈಕ್ ಮತ್ತು ಲಾರಿ ಅಪಘಾತ ಬೈಕ್ ಸವಾರ ಸಾವು ಕೊರಟಗೆರೆ ಪಟ್ಟಣದಲ್ಲಿ ಘಟನೆ.

 

 

ಕೊರಟಗೆರೆ_ಮದುವೆಗೆಂದು ಬೈಕ್ ನಲ್ಲಿ ತೆರಳುತ್ತಿದ್ದ ಸ್ನೇಹಿತರಿಗೆ ಲಾರಿ ಗುದ್ದಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕೊರಟಗೆರೆ ಪಟ್ಟಣದಲ್ಲಿ ಶನಿವಾರ ರಾತ್ರಿ ನಡೆದಿದೆ.

 

 

ಬೆಂಗಳೂರಿನ ಪೀಣ್ಯ ಮೂಲದ ಯುವಕರು ಪಲ್ಸರ್ ಬೈಕ್(KA 02HR 4438)ನಲ್ಲಿ ಮೂವರು ಕೊರಟಗೆರೆಗೆ ಮದುವೆಗೆಂದು ಆಗಮಿಸುತ್ತಿದ್ದರು ಇದೇ ವೇಳೆ ಕೊರಟಗೆರೆ ಪಟ್ಟಣದ ಬೈಪಾಸ್ ನಲ್ಲಿ ಏಕಾಏಕಿ ಬೈಕಿಗೆ ಲಾರಿ( AP 02 4661)ಗುದ್ದಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳದಲ್ಲಿ ಇದ್ದ ಸಾರ್ವಜನಿಕರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದರು.

 

 

ಆದರೆ ಕೊನೆಗೂ ಚಿಕಿತ್ಸೆ ಫಲಿಸದೆ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟಿದ್ದು ಬೈಕ್ ನಲ್ಲಿ ಕುಳಿತಿದ್ದ ಇಬ್ಬರು ಯುವಕರು ಪ್ರಾಣಾಪಯದಿಂದ ಪಾರಾಗಿದ್ದಾರೆ.

 

 

ಇನ್ನು ಬೈಕ್ ಚಲಾಯಿಸುತ್ತಿದ್ದ ಸವಾರ ಹೆಲ್ಮೆಟ್ ಧರಿಸದ ಕಾರಣ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದು ಕೊರಟಗೆರೆ ಪಟ್ಟಣದ ಆಸ್ಪತ್ರೆಗೆ ರವಾನಿಸಲಾಗಿತ್ತು.

 

ಕೊರಟಗೆರೆ ಪಟ್ಟಣದಲ್ಲಿರುವ ಬೈಪಾಸ್ ನಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು ಸಂಬಂಧಪಟ್ಟ ಇಲಾಖೆಗಳು ಅಪಘಾತಗಳನ್ನ ತಡೆಯಲು ಮುಂದಾಗಬೇಕು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!