ತುಮಕೂರು ಜಿಲ್ಲಾ ಆಸ್ಪತ್ರೆಯ ಕೋಟ್ಯಂತರ ರೂಪಾಯಿ ಹಣ ಗುಳಂ ಮಾಡಿದರಾ ಜಿಲ್ಲಾ ಶಸ್ತ್ರಚಿಕಿತ್ಸಕರು!
ತುಮಕೂರು_ರಾಜ್ಯದಲ್ಲೇ ಉತ್ತಮ ಚಿಕಿತ್ಸಾ ಸೌಲಭ್ಯ ಪಡೆದಿರುವ ಆಸ್ಪತ್ರೆಗಳಲ್ಲಿ ಒಂದಾದ ತುಮಕೂರು ಜಿಲ್ಲಾ ಆಸ್ಪತ್ರೆ ಹಲವು ಮೂಲಭೂತ ಸೌಕರ್ಯಗಳ ಕಣಜವಾಗಿದ್ದು ನಿತ್ಯ ಸಾವಿರಾರು ಜನ ಸೌಲಭ್ಯ ಪಡೆಯುತ್ತಿದ್ದಾರೆ.
ಇಂತಹ ಅತ್ಯಮೂಲ್ಯ ಹಾಗೂ ಉತ್ತಮ ಆಸ್ಪತ್ರೆಯೆಂದು ಬಿರುದನ್ನು ಪಡೆದಿರುವ ತುಮಕೂರು ಜಿಲ್ಲಾ ಆಸ್ಪತ್ರೆಯ ಮುಖ್ಯಸ್ಥರು ಆದ ಡಾಕ್ಟರ್ ಟಿ ಏ ವೀರಭದ್ರಯ್ಯ ರವರು ಸರ್ಕಾರಕ್ಕೆ ಸಂದಾಯವಾಗಬೇಕಾಗಿದ್ದ ಹಣವನ್ನ ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ಆಸ್ಪತ್ರೆ ಸಿಬ್ಬಂದಿಗಳೇ ಮಾತನಾಡಿಕೊಳ್ಳುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇನ್ನು ,2018ನೇ ಸಾಲಿನಿಂದ 2022 ಇಲ್ಲಿಯವರೆಗೂ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎನ್ನುವ ಬಗ್ಗೆ ಸ್ವತಹ ಆಸ್ಪತ್ರೆ ಸಿಬ್ಬಂದಿಗಳ ಮತ್ತು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದು ಕಂಡುಬಂದಿದ್ದು ರೋಗಿಗಳಿಂದ ಜಿಲ್ಲಾಸ್ಪತ್ರೆಗೆ ಸಂದಾಯವಾದ ಹಣ, ಶಸ್ತ್ರಚಿಕಿತ್ಸಕರ ಖಾತೆಗೆ ಸಂದಾಯವಾದ ಮೊತ್ತ ಹಾಗೂ ಸರ್ಕಾರದ ಖಾತೆಗೆ ಹಣವನ್ನು ಜಮಾ ಮಾಡದೆ ದುರುಪಯೋಗಪಡಿಸಿ ಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾಹಕರು ನಿವೃತ್ತಿ ಅಂಚಿನಲ್ಲಿದ್ದು ಹಣ ದುರುಪಯೋಗದ ಗಂಭೀರ ಆರೋಪ ಕೇಳಿ ಬಂದಿದ್ದು ಇದಕ್ಕೆ ಯಾವ ರೀತಿ ಉತ್ತರ ನೀಡಲಿದ್ದಾರೆ ಎನ್ನುವುದು ಕಾದು ನೋಡಬೇಕಿದೆ.
ಇನ್ನು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೆಪ ಮಾತ್ರಕ್ಕೆ ಚೆನ್ನಾಗಿ ಕಂಡರೂ ಸಹ ಒಳಹೊಕಿದಾಗ ಪ್ರತಿ ಹಂತದಲ್ಲೂ ಹಣವಿಲ್ಲದೆ ಯಾವ ಕೆಲಸವು ನಡೆಯುವುದಿಲ್ಲ ಎನ್ನುವುದು ಹಲವಾರು ಪ್ರಕರಣಗಳಿಂದ ಹೊರಬಂದಿದ್ದು ಇದರ ಬೆನ್ನಲ್ಲೇ ಆಸ್ಪತ್ರೆಯ ಮುಖ್ಯಸ್ಥರ ಮೇಲೆ ಗಂಭೀರ ಆರೋಪ ಕೇಳಿ ಬಂದಿದ್ದು ಮುಂದೆ ಯಾವ ರೀತಿ ಯಾವ ಹಂತ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ……?