ರೈತರ ಜಮೀನು ಮುಳುಗಡೆ: ಕೆರೆ ಗೇಟ್ ತೆಗೆದು ರೈತರಿಗೆ ಧ್ವನಿಯಾದ ತುಮಕೂರು ಗ್ರಾಮಾಂತರ ಶಾಸಕ ಡಿ ಸಿ ಗೌರೀಶಂಕರ್.

ರೈತರ ಜಮೀನು ಮುಳುಗಡೆ: ಕೆರೆ ಗೇಟ್ ತೆಗೆದು ರೈತರಿಗೆ ಧ್ವನಿಯಾದ ತುಮಕೂರು ಗ್ರಾಮಾಂತರ ಶಾಸಕ ಡಿ ಸಿ ಗೌರೀಶಂಕರ್.

 

ತುಮಕೂರು_ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬುಗುಡನಹಳ್ಳಿ ಹಿನ್ನೀರಿನಿಂದ ಸಮಸ್ಯೆಗೆ ಸಿಲುಕಿದ್ದ ರೈತಾಪಿ ವರ್ಗದವರಿಗೆ ಶಾಸಕರಾದ ಡಿ ಸಿ ಗೌರೀಶಂಕರ್ ಧ್ವನಿಯಾಗಿ ನಿಂತು 40 ವರ್ಷದ ಇತಿಹಾಸದಲ್ಲಿ ಬುಗುಡನಹಳ್ಳಿ ಕೆರೆಯ ಗೇಟ್ ತೆರೆಯದೇ ರೈತರನ್ನು ವಂಚಿಸಿದ್ದ  ವ್ಯವಸ್ಥೆಯ ನಡೆಯನ್ನು ಖಂಡಿಸಿ ತಾವೇ ಸ್ವತಃ ಕೆರೆ ಗೇಟ್ ತೆಗೆದು ಭ್ರಷ್ಟ ವ್ಯವಸ್ತೆಗೆ ಸೆಡ್ಡು ಹೊಡೆದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

 

ಬುಗುಡನಹಳ್ಳಿ ಕೆರೆ ತುಂಬಿ ಹಿನ್ನೀರಿಗೆ ಒಳಪಟ್ಟಿದ್ದ 300 ಎಕರೆಗೂ ಹೆಚ್ಚು ಅಡಿಕೆ,ತೆಂಗು ಜಮೀನಿನ ಬೆಳೆ ಹಾನಿಯಾಗಿತ್ತು 70 ಕ್ಕೂ ಹೆಚ್ಚು ಮನೆಗೆ ನೀರು ನುಗ್ಗಿ ಅಕ್ಕಪಕ್ಕದ ಗ್ರಾಮಗಳಾದ ನರಸಾಪುರ ಇನ್ನೂ ಹಲವಾರು ಹಳ್ಳಿಗಳ ರೈತರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಶಾಸಕರೇ ಆ.1 ರಂದು ಖುದ್ದು ಸ್ಥಳಕ್ಕೆ ಅಧಿಕಾರಿಗಳ ಸಮೇತ ಭೇಟಿ ನೀಡಿ ಸಭೆ ಕರೆದು ತ್ವರಿತವಾಗಿ ಕೆರೆಯಿಂದ ನೀರೆತ್ತುವಂತೆ ಆದೇಶ ನೀಡಿದ್ದರು.ಶಾಸಕರ ಆದೇಶಕ್ಕೆ ಅಧಿಕಾರಿಗಳು ಸ್ಪಂದಿಸದೆ ಬೇಜವಾಬ್ದಾರಿ ತೋರಿದ ಕಾರಣ ಆ.3 ರ ಬುಧವಾರ ಶಾಸಕ ಡಿ ಸಿ ಗೌರೀಶಂಕರ್ ಅವರೇ ಖುದ್ದು ಸ್ತಳಕ್ಕೆ ಭೇಟಿ ನೀಡಿ ಗೇಟ್ ತೆಗೆದು ದಶಕಗಳ ಸಮಸ್ಯೆಗೆ ಇತಿಶ್ರೀ ಹಾಡಿದ್ದಾರೆ.

 

 

ಈ ವೇಳೆ ಬೆಳಗುಂಬ ಜಿಲ್ಲಾ ಪಂಚಾಯ್ತಿ ಉಸ್ತುವಾರಿ ಹಾಗೂ ಜೆಡಿಎಸ್ ಯುವ ಮುಖಂಡ ನರಸಾಪುರ ಹರೀಶ, ಗ್ರಾಮಪಂಚಾಯ್ತಿ ಸದಸ್ಯರಾದ ಚಂದ್ರಪ್ಪ, ಶಿವಕುಮಾರ್,ಮಾಜಿ ಎಪಿಎಂಸಿ ಅಧ್ಯಕ್ಷ ಬೋವಿಪಾಳ್ಯ ಉಮೇಶ್, ಜೆಡಿಎಸ್ ಮುಖಂಡ ಶ್ರೀನಾಥ್, ಮಾಜಿ ಗ್ರಾಮಪಂಚಾಯ್ತಿ ಸದಸ್ಯ ತೋಪೇಗೌಡ ,ಕೃಷ್ಣಮೂರ್ತಿ,ಲಕ್ಷ್ಮಯ್ಯ,ಶಿವಕುಮಾರ್,ಯತೀಶ್ ,ನವೀನ್ ಕುಮಾರ್,ಉಮಾಶಂಕರ್,ಹಾಗೂ ನರಸಾಪುರ,ಬುಗುಡನಹಳ್ಳಿ ಗ್ರಾಮಸ್ತರು ಉಪಸ್ತಿತರಿದ್ದರು.

 

ವರದಿ_ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!