ಅಧಿಕಾರಿಗಳು ಕಿರುಕುಳ ,ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, unip ಟೆಂಡರ್ ಕರೆಯುವಲ್ಲಿ ಅವ್ಯವಹಾರ, ಕಾಮಗಾರಿಗಳ ನಡೆಸದೆ ಬಿಲ್ ಮಾಡಿಕೊಂಡಿರುವ ಹೀಗೆ ಅವ್ಯವಹಾರಗಳ ವಿರುದ್ಧ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಬೆಸ್ಕಾಂ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.
ಬೆಸ್ಕಾಂ ಇಲಾಖೆಯಲ್ಲಿ ಅವ್ಯವಹಾರಗಳಿಗೆ ಕಡಿವಾನ ಹಾಕಬೇಕಾಗಿದೆ. ಇಲ್ಲವಾದಲ್ಲಿ ಅನುಮತಿ ಪಡೆದ ಗುತ್ತಿಗೆದಾರರ ಪಾಲಿಗೆ ವಿಷವಾಗಿ ಇಲಾಖೆಯ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರು ಆದ ಮಲ್ಲಣ್ಣನವರ ಹಾಗೂ ಇತರೆ ಗುತ್ತಿಗೆದಾರರು ಬೆಸ್ಕಾಂ ಕಚೇರಿ ಯಲ್ಲಿ ನಡೆದ ಪ್ರತಿಭಟನೆ ನಡೆಸಿದರು.
ತುಮಕೂರು ಜಿಲ್ಲೆಯಲ್ಲಿ ಸುಮಾರು 100ರಿಂದ 150 ಕೋಟಿಯಷ್ಟು ಹಗರಣಗಳು ನಡೆದಿರುವುದಾಗಿ ಸಂಘದ ಸದಸ್ಯರು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. ಕರಡಿಗೆರೆ ಗ್ರಾಮದ ಮಹಿಳೆಗೆ ಸಂಬಂಧಪಟ್ಟಂತೆ ಅವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಒಂದು ಲಕ್ಷಕ್ಕೂ ಹೆಚ್ಚು ರೂಗಳನ್ನು ಬಿಲ್ ಮಾಡಿಕೊಂಡಿರುವ ಗುತ್ತಿಗೆದಾರರಿಗೆ ಇಲಾಖೆಯಿಂದ ಹಣವನ್ನು ಚೆಕ್ ನೀಡಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಹೀಗೆ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಸ್ಥಾವರಗಳನ್ನು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಇದರಲ್ಲಿ ನೂರರಿಂದ 150 ಕೋಟಿ ಅವ್ಯವಹಾರ ನಡೆದಿರುವ ಶಂಕೆ ಇದ್ದು ಇದರಲ್ಲಿ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗೆ ಪ್ರತಿ ಹಂತದಲ್ಲೂ ಗುತ್ತಿಗೆದಾರರಿಗೆ ಕಿರುಕುಳ ನೀಡುವಲ್ಲಿ ಬೆಸ್ಕಾಂ ಅಧಿಕಾರಿಗಳು ನಿರತರಾಗಿದ್ದು ಟೆಂಡರ್ ಕರೆಯುವರು ಅವ್ಯವಹಾರ ನಡೆಸುತ್ತಾರೆ. ವಿಚಾರಿಸಿದರೆ ಕಾರ್ಪೊರೇಟ್ ಕಂಪನಿಗಳಿಂದ ಟೆಂಡರ್ ಆಗಿದ್ದು ಇದರ ಬಗ್ಗೆ ನಮ್ಮಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ ನೀವು ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ಎಂದು ಕೈತೊಳೆದುಕೊಂಡು ತಮಗೆ ತಿಳಿದಂತೆ ವರ್ತಿಸುತ್ತಿದ್ದಾರೆ ಎಂದು ಗುತ್ತಿಗೆದಾರರು ಇಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.