ಜಮೀನಿಗೆ ಪರಿಹಾರ ನೀಡಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ರೈತ ಚಿಕ್ಕನಾಯಕನಹಳ್ಳಿಯಲ್ಲಿ ಘಟನೆ.
ಚಿಕ್ಕನಾಯಕನಹಳ್ಳಿ_ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ರೈತರ ಜಮೀನನ್ನ ವಶಪಡಿಸಿಕೊಂಡಿದ್ದು ಇನ್ನು ಅಧಿಕಾರಿಗಳು ವಶಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡಿಲ್ಲ ಎಂದು ಮನನೊಂದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾನೂನು ಸಚಿವರ ಕ್ಷೇತ್ರದಲ್ಲಿ ವರದಿಯಾಗಿದೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಸಾಲುಕಟ್ಟೆ ಗ್ರಾಮದಲ್ಲಿ ರೈತ ರಂಗಣ್ಣನಿಗೆ ಸೇರಿದ್ದ ಜಮೀನನ್ನ ರಸ್ತೆ ಕಾಮಗಾರಿಗಾಗಿ ಜಾಗ ಬಿಡಿಸಿಕೊಂಡಿದ್ದ ಅಧಿಕಾರಿಗಳು ಅದಕ್ಕೆ ಸರಿಯಾದ ಪರಿಹಾರ ನೀಡಿಲ್ಲ ಎಂದು ಕಾನೂನು ಸಚಿವರ ತಾಲೂಕಿನಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ವರದಿಯಾಗಿದೆ.
ಕೆಬಿ ಕ್ರಾಸ್ ನಿಂದ ಹುಳಿಯಾರ್ವರೆಗೂ ರಸ್ತೆ ಕಾಮಗಾರಿ ನಡೆಯುತ್ತಿದ್ದು ರೈತ ರಂಗಣ್ಣನ ಜಮೀನನ್ನ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು. ಇನ್ನು ಪರಿಹಾರ ನೀಡದೆ ಜಾಗವನ್ನು ಬಿಡಲ ಎಂದು ಬೇಡಿಕೊಂಡರು ಅಧಿಕಾರಿಗಳು ರೈತನ ಮೇಲೆ ದಬ್ಬಾಳಿಕೆ ನಡೆಸಿ ಜಾಗವನ್ನು ವಶಪಡಿಸಿಕೊಂಡಿದ್ದರು ಎನ್ನಲಾಗಿದೆ ಇದರಿಂದ ಮನನೊಂದ ರೈತ ರಂಗಣ್ಣ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೈತ ಮುಖಂಡ ಷಡಕ್ಷರಿ ತಿಳಿಸಿದ್ದಾರೆ .
ಈ ಬಗ್ಗೆ ಮಾಹಿತಿ ನೀಡಿರುವ ರೈತ ಮುಖಂಡ ಷಡಕ್ಷರಿ ರವರು ಕಳೆದ ಮೂರು ದಿನಗಳ ಹಿಂದೆ ರೈತ ರಂಗಣ್ಣನ ನಾಲ್ಕು ಗುಂಟೆ ಯಷ್ಟು ಜಾಗವನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು ಆದರೆ ಮೂರು ದಿನಗಳಾದರೂ ಅಧಿಕಾರಿಗಳು ರೈತನಿಗೆ ಪರಿಹಾರ ನೀಡಿರಲಿಲ್ಲ ಆದರೆ ಪರಿಹಾರ ನೀಡದೆ ವಶಪಡಿಸಿಕೊಂಡ ಜಾಗದಲ್ಲಿ ರಸ್ತೆಯನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರೈತ ರಂಗಣ್ಣನ ಆತ್ಮಹತ್ಯೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದು ಅಧಿಕಾರಿಗಳ ನಡೆಯನ್ನು ಖಂಡಿಸಿದ್ದಾರೆ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.