ಕಾಲುವೆಯಲ್ಲಿ ನಾಪತ್ತೆಯಾಗಿದ್ದ ಆಟೋ ಚಾಲಕನ ಮೃತ ದೇಹ ಪತ್ತೆ ಜಿಲ್ಲಾಸ್ಪತ್ರೆಗೆ ಮೃತ ದೇಹ ಆಸ್ಪತ್ರೆಗೆ ರವಾನೆ .
ತುಮಕೂರು_ಕಳೆದ ಎರಡು ದಿನಗಳ ಹಿಂದೆ ತುಮಕೂರಿನ ಹೆಗಡೆ ಕಾಲೋನಿ ಬಳಿಯ ರಾಜಕಾಲುವೆಯಲ್ಲಿ ಆಟೋ ಚಾಲಕ ಅಮ್ಜದ್ ನೀರಿನಲ್ಲಿ ಕೊಚ್ಚಿ ಹೋಗಿದ್ದು ಅವರ ಪತ್ತೆ ಕಾರ್ಯ ಸೋಮವಾರವು ಮುಂದುವರೆದಿದ್ದು ಜೆಸಿಬಿ ಮೂಲಕ ಪಾಲಿಕೆ ವತಿಯಿಂದ ಕಾರ್ಯಆಚರಣೆ ನಡೆಯುವ ವೇಳೆ ನೀರಿನಲ್ಲಿ ಹುದುಗಿ ಹೋಗಿದ್ದ ಮೃತ ದೇಹ ಕೊಳಚೆ ನೀರಿನಲ್ಲಿ ಇದ್ದದ್ದನ್ನು ಗಮನಿಸಿದ ಎಸ್ ಡಿ ಆರ್ ಎಫ್ ತಂಡದ ಸಿಬ್ಬಂದಿಯೊಬ್ಬರು ಮೃತ ದೇಹವನ್ನು ಗಮನಿಸಿ ಪತ್ತೆ ಹಚ್ಚಿದ್ದಾರೆ.
ನಂತರ ಹಿಟಾಚಿ ಮೂಲಕ ಮೃತ ದೇಹವನ್ನು ಹೊರತೆಗೆದು ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಮೃತ ದೇಹ ಸಿಗುತ್ತಿದ್ದಂತೆ ಸ್ಥಳದಲ್ಲಿ ಸಾವಿರಾರು ಜನ ಜಮಾಹಿಸಿದ್ದು ಅವರನ್ನ ನಿಭಾಯಿಸುವ ಸಮಸ್ಯೆ ಒಂದೆಡೆಯಾದರೆ ಮೃತ ದೇಹವನ್ನು ಹೊರತೆಗೆದು ಜಿಲ್ಲಾ ಆಸ್ಪತ್ರೆಗೆ ರವಾನಿಸುವುದು ಕೂಡ ಸಾಹಸದ ಕೆಲಸವಾಗಿತ್ತು.
ನಂತರ NDRF ,SDRF ಸಿಬ್ಬಂದಿಗಳು ಮೃತ ದೇಹವನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಲಾಯಿತು.
ಇನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿದ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಮಾತನಾಡಿದ್ದು ಇನ್ನು ಮೃತಪಟ್ಟಿರುವ ವ್ಯಕ್ತಿ ಕೊಚ್ಚಿ ಹೋದ ಸ್ಥಳದಿಂದ ಸುಮಾರು ಒಂದುವರೆ ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದ್ದು ಅವರ ಪತ್ತೆ ಕಾರ್ಯವನ್ನು NDRF ,SDRF , ಮಹಾನಗರ ಪಾಲಿಕೆ,ಅಗ್ನಿ ಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಕೊನೆಗೂ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದ್ದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ NDRF ನಿಧಿಯಿಂದ ನಾಲ್ಕು ಲಕ್ಷ ರಾಜ್ಯ ಸರ್ಕಾರದಿಂದ ಒಂದು ಲಕ್ಷ ಸೇರಿ 5 ಲಕ್ಷ ರೂಪಾಯಿ ಹಾಗೂ ಪಾಲಿಕೆಯ ವತಿಯಿಂದ 50,000 ರೂಗಳ ಪರಿಹಾರವನ್ನು ಕುಟುಂಬಕ್ಕೆ ನೀಡಲಾಗುವುದು ಇನ್ನು ಮುಂದಿನ ದಿನದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸಾಮಾಜಿಕ ಭದ್ರತೆ ನೀಡುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು ಕಾರ್ಯಚರಣೆಯಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಅರ್ಪಿಸಿದರು.
ತುಮಕೂರಿನ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮಾಜಿ ಶಾಸಕ ರಫೀಕ್ ಅಹಮದ್, ಅಸಿಸ್ಟೆಂಟ್ ಕಮಿಷನರ್ ಅಜಯ್, ತಾಸಿಲ್ದಾರ್ ಮೋಹನ್ ಕುಮಾರ್, ಮೇಯರ್ ಕೃಷ್ಣಪ್ಪ,ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ಪಾಲಿಕೆ ಸದಸ್ಯರಾದ ಮಂಜುನಾಥ್ , ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಸೇರಿದಂತೆ ಹಲವು ಮುಖಂಡರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.
ವರದಿ_ಮಾರುತಿ ಪ್ರಸಾದ್ ತುಮಕೂರು.