ತುಮಕೂರಿನಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣ ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ _ಅರಗ ಜ್ಞಾನೇಂದ್ರ
ತುಮಕೂರು_ತುಮಕೂರಿನ ರಿಂಗ್ ರಸ್ತೆ ಬಳಿಯ ರಾಜಕಾಲುವೆಯಲ್ಲಿ ಆಟೋ ಚಾಲಕ ಕೊಚ್ಚಿ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಘಟನಾ ಬಾನುವಾರ ಸ್ಥಳಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಭೇಟಿ ನೀಡಿದರು.
ಇನ್ನು ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ರವರು ಸ್ಥಳೀಯ ಅಧಿಕಾರಿಗಳಿಂದ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇನ್ನು ನೆನ್ನೆ ಘಟನೆ ನಡೆದ ಕೂಡಲೇ ಜಿಲ್ಲಾಧಿಕಾರಿಗಳು ಸೇರಿದಂತೆ ಸ್ಥಳೀಯ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸಿದ್ದು ತಮಗೆ ಮಾಹಿತಿ ತಿಳಿದ ಕೂಡಲೇ ಎನ್ ಡಿ ಆರ್ ಎಫ್ ತಂಡಕ್ಕೆ ಮಾಹಿತಿ ತಿಳಿಸಿದ್ದು ಸುಮಾರು 20ಕ್ಕೂ ಹೆಚ್ಚು NDRF ತಂಡದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದರು.
ಇನ್ನು ಕೊಚ್ಚಿ ಹೋಗಿರುವ ವ್ಯಕ್ತಿಯ ಪತ್ತೆಗಾಗಿ ನೆನ್ನೆಯಿಂದಲೂ ಸತತ ಪ್ರಯತ್ನ ಮುಂದುವರಿಸಿದ್ದು ಇದುವರೆಗೂ ನಾಪತ್ತೆಯಾಗಿರುವ ವ್ಯಕ್ತಿ ಸಿಕ್ಕಿಲ್ಲ ಇನ್ನು ಎಲ್ಲಾ ತಂಡದಿಂದಲೂ ಹುಡುಕಾಟದ ಪ್ರಯತ್ನ ಮುಂದುವರೆದಿದ್ದು ನಾಪತ್ತೆಯಾಗಿರುವ ವ್ಯಕ್ತಿ ಪತ್ತೆಯಾಗುವವರೆಗೂ ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಇನ್ನು ನಾಪತ್ತೆಯಾಗಿರುವ ವ್ಯಕ್ತಿ ಜೀವಂತವಾಗಿರುವ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಹಾಗೂ ಅವರ ದೇಹ ಸಿಗುವವರೆಗೂ ಕಾರ್ಯಾಚರಣೆ ಮುಂದುವರೆಯಲಿದ್ದು ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಪರಿಹಾರ ನೀಡುವ ಪ್ರಯತ್ನ ಸರ್ಕಾರದಿಂದ ನಡೆಯಲಿದೆ ಎಂದರು.
ಘಟನಾ ಸ್ಥಳದಿಂದ ಸುಮಾರು ಎರಡು ಕಿಲೋ ಮೀಟರ್ ವರೆಗೂ ಎನ್ ಡಿ ಆರ್ ಎಫ್ ತಂಡ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದು ನಾಪತ್ತೆಯಾಗಿರುವ ವ್ಯಕ್ತಿ ಸ್ಥಳದಲ್ಲಿ ಫೋಟೋ ತೆಗೆಯಲು ಮುಂದಾಗಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದು ಇನ್ನೂ ಈ ಸ್ಥಳದಲ್ಲಿ ಹೆಚ್ಚಿನದಾಗಿ ಮಳೆಯ ನೀರು ಶೇಖರಣೆಗೊಂಡು ನಂತರ ರಾಜಕಾಲುವೆಗೆ ಹರಿಯುತ್ತದೆ ಎಂದಿದ್ದಾರೆ.
ಈ ರೀತಿಯ ಘಟನೆ ನಡೆದಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದ ಅವರು ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಉತ್ತಮವಾಗಿ ಕಾಮಗಾರಿಗಳು ನಡೆದಿದ್ದು ಘಟನೆ ನಡೆದಿರುವ ಸ್ಥಳ ರೈಲ್ವೆ ಇಲಾಖೆಯ ಸುಭದ್ದಿಗೆ ಸೇರಲಿದ್ದು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ದಿನದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ನಾಪತ್ತೆಯಾಗಿರುವ ವ್ಯಕ್ತಿಯ ಕುಟುಂಬಕ್ಕೆ ಸಾಂತ್ವನ ಹೇಳಿದ ಗೃಹ ಸಚಿವರು ಸರ್ಕಾರದಿಂದ ಸಿಗುವ ಪರಿಹಾರವನ್ನು ಕುಟುಂಬಕ್ಕೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬೆಳ್ಳಿ ಲೋಕೇಶ್ ಪಾಲಿಕೆಯ ವಿರೋಧ ಪಕ್ಷದ ನಾಯಕ ಜೆ ಕುಮಾರ್ ಹಾಗೂ ಪಾಲಿಕೆ ಸದಸ್ಯ ಮಂಜುನಾಥ್ ತುಮಕೂರು ನಗರದಲ್ಲಿ ಹಲವು ಭಾಗದಲ್ಲಿ ಇದೇ ರೀತಿಯ ಸಮಸ್ಯೆಗಳು ಉಂಟಾಗುತ್ತಿದ್ದು ಹೊಂದಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವರ ಬಳಿ ಮನವಿ ಮಾಡಿದ್ದರು.
ಇನ್ನು ಇದೇ ಸಂದರ್ಭದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್, ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಹುಲ್ ಕುಮಾರ್ ಶಹಪುರ್ವಾಡ, ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರದ ರೇಣುಕಾ, ಎನ್ ಡಿ ಆರ್ ಎಫ್ ತಂಡದ ಕ್ಯಾಪ್ಟನ್ , ತುಮಕೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಜೆ ಕುಮಾರ್, ಪಾಲಿಕೆ ಸದಸ್ಯರಾದ ಮಂಜುನಾಥ್, ತಾಜುದ್ದೀನ್ ಶರೀಫ್, ಮುಖಂಡರಾದ ಬೆಳ್ಳಿ ಲೋಕೇಶ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಹಾಜರಿದ್ದರು.
ವರದಿ _ಮಾರುತಿ ಪ್ರಸಾದ್ ತುಮಕೂರು