ಪ್ರಾಂಶುಪಾಲರ ಮೇಲೆ ಪ್ರಾಧ್ಯಾಪಕರಿಂದ ಹಲ್ಲೆ ತುಮಕೂರಿನ ಕಾಲೇಜಿನಲ್ಲಿ ಘಟನೆ.
ತುಮಕೂರು: ತರಗತಿ ನಡೆಸುವ ವಿಚಾರಕ್ಕೆ ಕಾಲೇಜು ಪ್ರಾಂಶುಪಾಲರ ಮೇಲೆ ಉಪನ್ಯಾಸಕರೋಬ್ಬರು ಹೊಡೆದಾಡಿಕೊಂಡ ಘಟನೆ ತುಮಕೂರು ನಗರದ ವಿದ್ಯೋದಯ ಲಾ ಕಾಲೇಜಿನಲ್ಲಿ ಸೋಮವಾರ ನಡೆದಿದೆ.
ತರಗತಿ ನಡೆಸಲು ಅವಕಾಶ ನೀಡಿಲ್ಲ ಎಂದು ವಿದ್ಯೋದಯ ಲಾ ಕಾಲೇಜಿನ ಪ್ರಾಂಶುಪಾಲರ ಮೇಲೆ ಉಪನ್ಯಾಸಕರೊಬ್ಬರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಇನ್ನು ಘಟನೆ ನಡೆದ ಕೂಡಲೇ ವಿದ್ಯಾರ್ಥಿಗಳು ಸಹ ತರಗತಿಯನ್ನು ಬಹಿಷ್ಕಾರ ಮಾಡಿ ತರಗತಿಯಿಂದ ಹೊರನಡೆದಿದ್ದು ಕೆಲಕಾಲ ಗೊಂದಲ ಉಂಟಾಯಿತು.
ಇನ್ನು ಹಲ್ಲೇ ಸಂಬಂಧ ಕಾಲೇಜು ನಿರ್ದೇಶಕರಿಗೆ ಮಾಹಿತಿ ತಿಳಿದ ಕೂಡಲೇ ಉಪನ್ಯಾಸಕರೊಂದಿಗೆ ತುರ್ತು ಸಭೆ ನಡೆಸಿದ ಅವರು ಮಂಗಳವಾರ ಕಾಲೇಜಿನ ಅಧ್ಯಕ್ಷರಾದ ಕೆಂಪಣ್ಣ ರವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಸಭೆಯಲ್ಲಿ ಹಲ್ಲೆ ಸಂಬಂಧ ಸಮಗ್ರವಾಗಿ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಾಂಶುಪಾಲರ ಮೇಲೆ ಹಲ್ಲೆ ಘಟನೆಯನ್ನು ಕಾಲೇಜಿನ ಪ್ರಾಧ್ಯಾಪಕರು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಸಹ ಖಂಡಿಸಿದ್ದು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಲೇಜು ಆಡಳಿತ ಮಂಡಳಿ ಮುಂದೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಇನ್ನು ಕಾಲೇಜಿನಲ್ಲಿ ಪ್ರಾಂಶುಪಾಲರ ಮೇಲೆಯೇ ಹಲ್ಲೆ ನಡೆದಿರುವುದನ್ನು ವಿದ್ಯಾರ್ಥಿಗಳು ಸಹ ಖಂಡಿಸಿದ್ದು ಪದೇಪದೇ ಕಾಲೇಜಿನಲ್ಲಿ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಗಳು ಹಾಗೂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದರು ಸಹ ಆಡಳಿತ ಮಂಡಳಿ ಕಣ್ಮುಚ್ಚಿ ಕುಳಿತಿದೆ. ಇಂತಹ ಘಟನೆ ತಮ್ಮ ಕಾಲೇಜಿನಲ್ಲಿ ಪದೇ ಪದೇ ಮರುಕಳಿಸುತ್ತಿದ್ದು ಕಡಿವಾಣ ಹಾಕಬೇಕಾಗಿದೆ ಇನ್ನು ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಉತ್ತಮ ವಾತಾವರಣ ಲಭ್ಯವಾದರೆ ಮಾತ್ರ ವಿದ್ಯಾರ್ಥಿಗಳು ನೆಮ್ಮದಿಯಿಂದ ಕಲಿಕೆಯಲ್ಲಿ ಭಾಗವಹಿಸಲು ಸಾಧ್ಯ ಎಂದು ವಿದ್ಯಾರ್ಥಿಗಳು ಸಹ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಹಲ್ಲೇ ಸಂಬಂಧ ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತುಮಕೂರಿನ ತಿಲಕ್ ಪಾರ್ಕ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಳೆ ಸಂಬಂಧ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ.