ಗುಬ್ಬಿಯಲ್ಲಿ ಹತ್ಯೆಯಾದ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಕುರಿ ಮೂರ್ತಿ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ.
ತುಮಕೂರು _ಬುಧವಾರ ಗುಬ್ಬಿ ಪಟ್ಟಣದಲ್ಲಿ ಹತ್ಯೆಯಾದ ಗುಬ್ಬಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ , ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ದಲಿತ ಮುಖಂಡ ನರಸಿಂಹ ಮೂರ್ತಿ (ಕುರಿ ಮೂರ್ತಿ) ಮೃತದೇಹವನ್ನು ಗುರುವಾರ ಮುಂಜಾನೆ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ತುಮಕೂರು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇದ್ದ ಮೃತದೇಹವನ್ನು ಕುಟುಂಬಸ್ಥರು ಗುರುವಾರ ಬೆಳಗ್ಗೆ ಗುಬ್ಬಿ ಪಟ್ಟಣಕ್ಕೆ ರವಾನಿಸಲಾಗಿದ್ದು ಈ ಸಂದರ್ಭದಲ್ಲಿ ಪೊಲೀಸರು ಹೆಚ್ಚಿನ ಬಂದೋಬಸ್ತು ಒದಗಿಸಿ ಪೊಲೀಸರ ಬಂದೋಬಸ್ತ್ ನಲ್ಲಿ ಮೃತದೇಹವನ್ನು ಗುಬ್ಬಿ ಪಟ್ಟಣಕ್ಕೆ ಕೊಂಡೊಯ್ಯಲಾಗಿದೆ.
ಇನ್ನು ಹತ್ಯೆಯಾಗಿರುವ ದಲಿತ ಮುಖಂಡ ಹಾಗೂ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕುರಿ ಮೂರ್ತಿ ಹತ್ಯೆಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ದಲಿತ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಇನ್ನು ಘಟನೆಗೆ ಸಂಬಂಧಿಸಿದಂತೆ ನೆನ್ನೆ ಗೃಹಸಚಿವರು ಸಹ ಶವಾಗಾರಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.
ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ದಲಿತ ಸಂಘಟನೆಗಳ ಮುಖಂಡರು ಗೃಹಸಚಿವ ಅರಗ ಜ್ಞಾನೆಂದ್ರ ರವರ ವಾಹನಕ್ಕೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದರು.
ಇನ್ನು ಹತ್ಯೆಯಾಗಿರುವ ಕುರಿ ಮೂರ್ತಿ ಅಂತ್ಯಸಂಸ್ಕಾರ ಇಂದು ಗುಬ್ಬಿಯಲ್ಲಿ ನೆರವೇರಲಿದ್ದು ಪೊಲೀಸರು ಹೆಚ್ಚಿನ ಬಂದೋಬಸ್ತು ಒದಗಿಸಿದ್ದಾರೆ.
ಇನ್ನು ನೆನ್ನೆ ಕುರಿ ಮೂರ್ತಿ ಹತ್ಯೆಯಾದ ವಿಷಯ ತಿಳಿದ ಕೂಡಲೇ , ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್, ಬಿಜೆಪಿ ಮುಖಂಡ ಬೆಟ್ಟಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೇಮ, ಸೇರಿದಂತೆ ಹಲವು ಮುಖಂಡರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು.
ವರದಿ _ಮಾರುತಿ ಪ್ರಸಾದ್ ತುಮಕೂರು