ಸಮಾಜ ಕಲ್ಯಾಣ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ದಲಿತ ಸಂಘನೆಗಳಿಂದ ಅರೆ ಬೆತ್ತಲೆ ಮೆರವಣಿಗೆ

ಸಮಾಜ ಕಲ್ಯಾಣ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ದಲಿತ ಸಂಘನೆಗಳಿಂದ ಅರೆ ಬೆತ್ತಲೆ ಮೆರವಣಿಗೆ ಜಂಟಿ ನಿರ್ದೇಶಕರ ವಿರುದ್ಧ ದೌರ್ಜನ್ಯ ಕಾಯ್ದೆ ಅಡಿ ದೂರು ದಾಖಲಿಸಲು ಆಗ್ರಹ.

 

ತುಮಕೂರು : ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ನಿರ್ಮಿತಿ ಕೇಂದ್ರ ಮುಖ್ಯಸ್ಥರು ವ್ಯಾಪಕ ಭ್ರಷ್ಟಚಾರ ನಡೆಸಿದ್ದಾರೆ.ಇವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಹಾಗೂ ಪರಿಶಿಷ್ಟ ಜಾತಿ,ಪಂಗಡ ದೌರ್ಜನ್ಯ ಕಾಯ್ದೆ ಅಡಿ ದೂರು ದಾಖಲಿಸಬೇಕೆಂದು ಒತ್ತಾಯಿಸಿ ತುಮಕೂರು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟವು ಆರೆ ಬೆತ್ತಲೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್ ಗಳಲ್ಲಿ ‌ಸುಮಾರು ವರ್ಷಗಳಿಂದ

ಅಲ್ಲದ ಮರದಂತೆ ಬೇರುಬಿಟ್ಟಿರುವ ನಿಲಯಪಾಲಕರನ್ನು ಸಾಮೂಹಿಕ ವಾಗಿ ಬೇರಡೆ ವರ್ಗಾವಣೆ ಮಾಡಬೇಕು,

ಎಸ್ ಸಿ,ಎಸ್ ಟಿ ಜನರ ಸ್ಮಶಾನಗಳಿಗೆ ಬಿಡುಗಡೆಯಾದ ಹಣವನ್ನು ದುರುಪಯೋಗ ಮಾಡಿಕೊಂಡು ಸಾರ್ವಜನಿಕ ಸ್ಮಶಾನಗಳನ್ನು ನಿರ್ಮಿಸಿರುವ ಬಗ್ಗೆ ತನಿಖೆಯಾಗಬೇಕು.ಬಾಬುಜಗಜೀವನ್ ರಾಮ್ ಭವನ ನಿರ್ಮಾಣಕ್ಕೆಂದು ಬಿಡುಗಡೆಯಾದ ಹಣವನ್ನು ದುರುಪಯೋಗ ಮಾಡಿಕೊಂಡಿರುವವರ ವಿರುದ್ಧ ಕ್ರಮ ಜರುಗಿಸಬೇಕು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಮಾಡುತ್ತಿರುವ ಸಿಬ್ಬಂದಿಗಳಾದ ವ್ಯವಸ್ಥಾಪಕರಾದ ವೀಣಾ, ಮಂಜನಾಥ್ ಮತ್ತಿತರರು ಸಮಾಜ ಕಲ್ಯಾಣಾಧಿಕಾರಿಗಳನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮೊರಾರ್ಜಿ ದೇಸಾಯಿ,ಕಿತ್ತೂರ ರಾಣಿ ಚಿನ್ನಮ್ಮ, ಅಂಬೇಡ್ಕರ್ ವಸತಿ ಶಾಲೆಗಳ ಮೂಲ ಸೌಕರ್ಯ ನೆಪದಲ್ಲಿ ಬೇಕಾಬಿಟ್ಟಿ ಹಣ ಡ್ರಾ ಮಾಡುತ್ತಿದ್ದಾರೆ,ಪ್ರತಿ ವರ್ಷ ‌ಟೆಂಡರ್ ಕರೆಯದೆ‌ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತಿದು ,ಟೆಂಡರ್ ನೆಪ ಮಾತ್ರಕ್ಕೆ ಕರೆದು ವಾರ್ಡನ್ ಗಳು ಬೇರೆಕಡೆ‌ ಆಹಾರ ಪದಾರ್ಥಗಳನ್ನು ‌ಕೊಂಡು ಟೆಂಡರ್ ದಾರರಿಂದ ಬಿಲ್ ಪಡೆದು ಸರ್ಕಾರವನ್ನು ವಂಚಿಸುತ್ತಿದು ಇದ್ದರ ಬಗ್ಗೆ ‌ಕ್ರಮ ಜರುಗಿಸಬೇಕೆಂದು ದಸಸಂ ಮುಖಂಡರು ಆಗ್ರಹಿಸಿದ್ದಾರೆ.

 

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡ ರಾಮಯ್ಯ ಮಾತನಾಡಿ ವಸತಿ ಶಾಲೆಗಳಲ್ಲಿ ಮೂಲ ಸೌಕರ್ಯ ಗಳಿಗೆಂದು ಪ್ರತಿ ವರ್ಷ ಹಣ ಬಿಡುಗಡೆಯಾಗುತ್ತಿದೆ.ಈ ವರ್ಷ ಮತ್ತೆ 5 ಕೋಟಿ ಬಿಡುಗಡೆ ಯಾಗಿದೆ ಈ ಹಿಂದೆ ವರ್ಷ, ವರ್ಷ ಬಿಡುಗಡೆಯಾದ ಹಣದಲ್ಲಿ ಮೂಲ ಸೌಕರ್ಯಗಳನ್ನು ಅಧಿಕಾರಿಗಳು ಕಲ್ಪಿಸಲು ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.ನಗರದ ಎಂ ಜಿ ರಸ್ತೆಯಲ್ಲಿ ರುವ ವಿಜ್ಞಾನ ಕಾಲೇಜು ವಿದ್ಯಾರ್ಥಿ ನಿಲಯ ನವೀಕರಣಕ್ಕೆ 1ಕೋಟಿ 35ಲಕ್ಷ ಹಣವನ್ನು ನಿರ್ಮಿತಿ ಕೇಂದ್ರ ಕ್ಕೆ ನೀಡಿದು ,ನಿರ್ಮಿತಿ ಕೇಂದ್ರದವರು ಕಳಪೆ ಕಾಮಗಾರಿ ನಡೆಸಿದ್ದಾರೆ ಈ ಬಗ್ಗೆ ‌ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

 

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೇಬಲ್ ರಘು ಮಾತನಾಡಿ ಬಾಬು ಜಗಜೀವನ್ ರಾಮ್ ಭವನ ನಿರ್ಮಾಣ ಕ್ಕೆ 2 ಕೋಟಿ ಬಿಡುಗಡೆಯಾಗಿದು ,ನಿವೇಶನ ಸ್ವಚ್ಛ ಕ್ಕೆ ಮತ್ತು ಕಾಂಪೌಂಡ್ ನಿರ್ಮಾಣಕೆಂದು 35 ಲಕ್ಷ ಹಣ ಬಿಡುಗಡೆ ಮಾಡಿಕೊಂಡು ಕೆಲಸ ಮಾಡಿಸದೆ ಹಣ ನುಂಗಿಹಾಕಿದ್ದಾರೆ,

ಸ್ಮಶಾನಗಳ ನಿರ್ಮಾಣ ದ ಹೆಸರಲ್ಲಿ ಮೂರು ,ನಾಲ್ಕುಗುಂಟೆ ಜಮೀನಿನಲ್ಲಿ ಪೆನ್ಸಿಂಗ್ ,ಮತ್ತು ಮಂಟಪ ನಿರ್ಮಿಸಲು ಸಮಾರು ಎರಡು ಕೋಟಿ ಖರ್ಚು ಮಾಡಿದ್ದು ಈ ಹಣವನ್ನು ಎಸ್ ಸಿ ಎಸ್ ಟಿಗಳಿಗೆ ಖರ್ಚು ಮಾಡಬೇಕು ಅದರೆ ಅಧಿಕಾರಿಗಳು ಬೇರೆ‌ಸಮುದಾಯಗಳಿಗೆ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.

 

ದಲಿತ ಪರ ಹೋರಾಟಗಾರ ಬಂಡೆ ಕುಮಾರ್ ಮಾತನಾಡಿ ಜಿಲ್ಲಾಧಿಕಾರಿಗಳು ಜಂಟಿ ನಿರ್ದೇಶಕ ರನ್ನು ರಕ್ಷಣೆ ಮಾಡುತ್ತಿದ್ದಾರೆ, ನಿರ್ಮಿತಿ ಕೇಂದ್ರದವರು,ಸಮಾಜಕಲ್ಯಾಣ ಇಲಾಖೆಯವರು ಮಾಡಿರುವ ಜಂಟಿ ಭ್ರಷ್ಟಾಚಾರವನ್ನು ಏಕೆ ತನಿಖೆಗೆ‌ಒಳಪಡಿಸಿ‌ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

 

ಪ್ರತಿಭಟನಾ ಮೇರವಣಿಗೆಯಲ್ಲಿ ದಲಿತ ಮುಖಂಡರಾದ ನರಸಿಂಹರಾಜು ಹಾಲನೂರು, ರಾಮಮೂರ್ತಿ ಹೆಚ್ ಆರ್, ರಾಜಣ್ಣಕೋರಾ,ಪೂಜಾಹನುಮಯ್ಯ, ಕರವೇ ಆನಂದ,ಊರ್ಡಿಗೆರೆ ಹರೀಶ್ ಗೋಪಾಲ,ಅಮರ್,ಮಾರುತಿ,ಸಂತೋಷ್ ಕುಮಾರ್,ರಂಗಸ್ವಾಮಿ ,ಗೋಪಾಲ ಮಸರಪಡಿ ,ಮತಿತ್ತರರು ಹಾಜರಿದ್ದರು.

 

 

ವರದಿ_ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!