40% ಸರ್ಕಾರದ ಕರಿನೆರಳು ನಮ್ಮ ನಗರದ ರಸ್ತೆಗಳ ಮೇಲೆ ಬೀಳುತ್ತಿದೆ : ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ .
ತುಮಕೂರು: ನಗರ ಹಲವೆಡೆ ಸರ್ಕಾರದ ಹಲವು ಯೋಜನೆಗಳಡಿ ಡಾಂಬರೀಕರಣ ನಡೆಯುತ್ತಿದೆ. ಆದರೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಅಸಡ್ಡೆತನದಿಂದ ನಗರದೆಲ್ಲೆಡೆ ಕಳಪೆ ಡಾಂಬರೀಕರಣದ ಆಡಂಬರ ನಡೆಯುತ್ತಿದೆ.
ದುರಸ್ತಿಯಾಗಿರುವ ರಸ್ತೆಗಳಿಗೆ ಡಾಂಬರೀಕರಣ ಮಾಡುವುದು ಬಿಟ್ಟು ಸುಸ್ಥಿತಿಯಲ್ಲಿರುವ ರಸ್ತೆಗಳಿಗೆ ಮೇಕಪ್ ಮಾಡುವ ಕೆಲಸ ಮಾಡಿ ಹಣ ದೋಚುತ್ತಿರುವುದು ನಾಚಿಕೆಗೇಡಿನ ಸಂಗತಿ.
೪೦% ಸರ್ಕಾರದ ಕರಿನೆರಳು ನಮ್ಮ ತುಮಕೂರಿನ ರಸ್ತೆಗಳ ಮೇಲೆ ಬೀಳುತ್ತಿದೆ ಎಂದು ಮಾಜಿ ಶಾಸಕರು ಪ್ರತಿಕ್ರಿಯಿಸಿದ್ದಾರೆ.ನಗರದ ಸೋಮೇಶ್ವರ ಪುರ ಮತ್ತು ಜಯನಗರದಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ ಸುಸ್ಥಿತಿಯಲ್ಲಿರುವ ರಸ್ತೆಗಳ ಮೇಲೆ ಅವೈಜ್ಙಾನಿಕವಾಗಿ ಡಾಂಬರು ಹಾಕುತ್ತಿದ್ದಾರೆ.
ಈ ರಸ್ತೆಗಳು ಕೆಲವೇ ದಿನಗಳಲ್ಲಿ ದುರಸ್ತಿಗೆ ಬರುವುದು ನಿಶ್ಚಿತವಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಬೇಕಾಬಿಟ್ಟಿ ಕಳಪೆ ಕಾಮಗಾರಿಗಳಿಗೆ ಖರ್ಚು ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವ ಮುನ್ನ, ಕಳಪೆ ಕಾಮಗಾರಿ ನಡೆಸುತ್ತಾ ಹಣ ಪೀಕುತ್ತಿರುವ
ಗುತ್ತಿಗೆದಾರರು, ಸಂಬoಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತು ಇನ್ನಾದರೂ ಗುಣಮಟ್ಟದ ರಸ್ತೆಗಳನ್ನು ಮಾಡುವಂತೆ ಡಾ.ರಫೀಕ್ ಅಹ್ಮದ್ ಆಗ್ರಹಿಸಿದ್ದಾರೆ