ಸುಳ್ಳು ಆಪಾದನೆ ಮಾಡಿ ವಿದ್ಯಾರ್ಥಿಗಳನ್ನು ಜೈಲಿಗೆ ಹಾಕಲಾಗಿದೆ_ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್.
ತುಮಕೂರು _ನ್ಯಾಯಯುತವಾಗಿ ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಸುಳ್ಳು ಆಪಾದನೆ ಮಾಡಿ ಜೈಲಿನಲ್ಲಿ ಹಾಕಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರಾದ ಡಾಕ್ಟರ್ ಜಿ ಪರಮೇಶ್ವರ್ ಅವರು ಸರ್ಕಾರದ ನಡೆಗೆ ಆಕ್ರೋಶ ಹೊರಹಾಕಿದ್ದಾರೆ.
ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಒಂದು ವಾರದ ಹಿಂದೆ ತಿಪಟೂರಿನಲ್ಲಿ ಸಚಿವ ಬಿ.ಸಿ ಮನೆ ಮುಂದೆ ಪ್ರತಿಭಟನೆ ಮಾಡಿ ಜೈಲುಸೇರಿರುವ NSUI ಕಾರ್ಯಕರ್ತರನ್ನು ತುಮಕೂರಿನ ಕಾರಾಗೃಹಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಧೈರ್ಯ ತುಂಬಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಅವರು ನಮ್ಮ ವಿದ್ಯಾರ್ಥಿಗಳು ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡಿದ್ದು ಪಠ್ಯಪುಸ್ತಕ ವಿವಾದಕ್ಕೆ ಸಂಬಂಧ ಅದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಲು ಹೋಗಿದ್ದರು.
ಬಸವಣ್ಣ ,ಕುವೆಂಪು, ಅಂಬೇಡ್ಕರ್ ಹಾಗೂ ನಾರಾಯಣಗುರು ಬಗ್ಗೆ ಪಠ್ಯಪುಸ್ತಕದಲ್ಲಿ ಪರಿಷ್ಕರಣೆ ಮಾಡಿದ್ದು ಕೆಲವು ಪಠ್ಯಗಳನ್ನು ಕೈ ಬಿಟ್ಟಿದ್ದು ಇದಕ್ಕೆ ಸಂಬಂಧಿಸಿದಂತೆ ಪಠ್ಯಪುಸ್ತಕದಲ್ಲಿ ಕೆಲವು ವಿಚಾರಗಳನ್ನು ತೆಗೆದು ಅದಕ್ಕೆ ಬೇರೆ ಬೇರೆ ರೂಪಗಳನ್ನು ಕೊಡುವ ಮೂಲಕ ಯಾವುದು ಚರಿತ್ರೆಯಲ್ಲಿ ಉಳಿಯಬೇಕು, ಮುಂದಿನ ಪೀಳಿಗೆಗೆ ತಿಳಿಸಬೇಕು ಅಂತಹ ವಿಷಯಗಳನ್ನು ತಿರುಚಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದು ಅದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ ನ್ಯಾಯಯುತವಾಗಿ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡುವುದು ನಮ್ಮ ಹಕ್ಕು ಹಾಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ ಆದರೆ ಸಚಿವರ ಮನೆಗೆ ನುಗ್ಗಿ ಮನೆಗೆ ಬೆಂಕಿ ಬಚ್ಚಲು ಮನೆಗೆ ಬಂದಿದ್ದಾರೆ ಎಂದು ಸುಳ್ಳು ಆಪಾದನೆ ಮಾಡಿ ಸುಮಾರು 24 ವಿದ್ಯಾರ್ಥಿಗಳನ್ನು ಒಂದುವಾರದಿಂದ ಜೈಲಿನಲ್ಲಿ ನ್ಯಾಯಾಲಯದಲ್ಲಿ ಇಡಲಾಗಿದೆ . ಪಕ್ಷದ ವತಿಯಿಂದ ಕಾನೂನು ಹೋರಾಟ ಮಾಡುತ್ತೇವೆ ಆದರೆ ವಿದ್ಯಾರ್ಥಿಗಳನ್ನು ಬೇರೆಬೇರೆ ಸೆಕ್ಷನ್ ಗಳನ್ನು ಹಾಕಿ ವಿದ್ಯಾರ್ಥಿಗಳ ಮೇಲೆ ಆರೋಪ ಮಾಡಿರುವ ಸಂಬಂಧ ನ್ಯಾಯಯುತವಾದ ಹೋರಾಟ ಮಾಡುತ್ತೇವೆ ಎಂದರು.
ಹಾಗಾಗಿ ಇಂತಹ ಸರ್ಕಾರದ ನೀತಿ ಕಾರ್ಯವನ್ನು ನಾವೆಲ್ಲರೂ ಖಂಡಿಸುತ್ತೇವೆ ಎಂದಿರುವ ಪರಮೇಶ್ವರ್ ಅವರು ವಿದ್ಯಾರ್ಥಿಗಳ ಮನಸ್ಸನ್ನುಯಾರು ಕೂಡ ಈ ಮೂಲಕ ಹಾಳು ಮಾಡುವಂತಾಗಬಾರದು.
ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಎಂದು ಇಡೀ ಪ್ರಪಂಚಕ್ಕೆ ಗೊತ್ತಿದೆ ಆದರೆ ಅಂತಹ ವಿಷಯಗಳನ್ನು ತೆಗೆದು ಕೆಲವು ವಿಷಯಗಳನ್ನು ತಿರುಚುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ .
ಹಾಗಾಗಿ ಇಂದು ಜೈಲಿನಲ್ಲಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದೇವೆ . ಶೀಘ್ರದಲ್ಲೇ ವಿದ್ಯಾರ್ಥಿಗಳಿಗೆ ಬೇಲ್ ಸಿಗಲಿದೆ ಎಂದರು.
ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ರಾಮಕೃಷ್ಣಪ್ಪ ಅಲ್ಪಸಂಖ್ಯಾತರ ಘಟಕದ ಅತಿಕ ಹಮದ್, ಇಕ್ಬಾಲ್ ಅಹಮದ್, ಮುರಳಿದರ ಹಾಲಪ್ಪ, ಮರಿ ಚೆನ್ನಮ್ಮ, ಸುಜಾತ ,ರೇವಣ್ಣ, ಚಂದ್ರಶೇಖರ್ ಗೌಡ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ವರದಿ _ಮಾರುತಿ ಪ್ರಸಾದ್ ತುಮಕೂರು