ತುಮಕೂರು ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಇತಿಹಾಸ ಕೈಬಿಟ್ಟಿರುವುದನ್ನು ಖಂಡಿಸಿ ಪ್ರತಿಭಟನೆ.

ತುಮಕೂರು ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಇತಿಹಾಸ ಕೈಬಿಟ್ಟಿರುವುದನ್ನು ಖಂಡಿಸಿ ಪ್ರತಿಭಟನೆ.

ತುಮಕೂರು_  ತುಮಕೂರಿನ ವಿಶ್ವವಿದ್ಯಾಲಯ ಇಲ್ಲಿಯವರೆಗೆ ಪಠ್ಯಕ್ರಮದಲ್ಲಿ ಅಂಬೇಡ್ಕರ್ ರವರ ಇತಿಹಾಸ ಪಠ್ಯಕ್ರಮವನ್ನು ಅನುಸರಿಸುವ ಮೂಲಕ ವಿದ್ಯಾರ್ಥಿಗಳಿಗೆ ಯಾವುದೇ ಲೋಪವಾಗದಂತೆ ನೆಡೆದುಕೊಂಡು ಬಂದಿದ್ದು ಈ ಬಾರಿಯ ಪಠ್ಯಕ್ರಮದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಇತಿಹಾಸ ಕೈಬಿಟ್ಟಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ವಿಶ್ವವಿದ್ಯಾಲಯದ ಪಠ್ಯಕ್ರಮದ ಮುಖ್ಯಸ್ಥರ ವಿರುದ್ಧ ಅಂಬೇಡ್ಕರ್ ಅನುಯಾಯಿಗಳು ಹಾಗೂ ಪ್ರಗತಿಪರರು ಆಕ್ರೋಶ ವ್ಯಕ್ತಪಡಿಸಿದರು.

 

ಪ್ರಸ್ತುತ ಸಾಲಿನಲ್ಲಿ ಬಿ ಎ .ಬಿ ಕಾಂ.ಮತ್ತು ಬಿಎಸ್ಸಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಡಾ ಅಂಬೇಡ್ಕರ್ ರವರ ಇತಿಹಾಸದ ಪಠ್ಯಕ್ರಮವನ್ನು ತೆಗೆದಿರುವುದು ಸರಿಯಾದ ಕ್ರಮವಲ್ಲ ಪಠ್ಯಕ್ರಮದ ಸಮಿತಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಇಬ್ಬರು ಮುಖ್ಯಸ್ಥರು ಇದ್ದರು ಸಹ ಅವರ ಅನುಮತಿ ಪಡೆಯದೆ ಹಾಗೂ ಅವರ ಗಮನಕ್ಕೆ ಬಾರದೆ ಇಂತಹದೊಂದು ಪ್ರಯತ್ನ ಮಾಡಿರುವುದನ್ನು ಹೋರಾಟಗಾರರು ಖಂಡಿಸಿದರು .

ಪ್ರಸ್ತುತ ಸಾಲಿನಲ್ಲಿ ಬಿ ಎ .ಬಿ ಕಾಂ ಬಿ ಎಸ್ ಸಿ. ಆಂಗ್ಲ ಭಾಷೆಯಲ್ಲಿ ಅಸ್ಪ್ಪುಶ್ಯರು ಎಂಬ ಸಣ್ಣ ವಿಷಯ ಪ್ರಕಟಿಸಿ ಅಂಬೇಡ್ಕರ್ ರವರ ಹೆಸರನ್ನೆ ಅಸ್ಪ್ರಶ್ಯತೆ ನೊವನ್ನೇ ಕಾಣದ ಪ್ರಮೊತ ರಂಜಾನ್ ಠಾಕೊರ್ ಹಾಗು ಎಸ್ ಸಿ ಬ್ಯಾನರ್ಜಿ ರವರು ಅಭಿಪ್ರಾಯವನ್ನು ಪಠ್ಯದಲ್ಲಿ ಸೇರಿಸಿ ವಿಧ್ಯಾರ್ಥಿಗಳನ್ನು ಅಂಬೇಡ್ಕರ್ ರವರ ವಿಚಾರಧಾರೆ ಗಳಿಂದ ದೊರಮಾಡಲು ಮುಂದಾಗಿರುವ ವಿಶ್ವ ವಿದ್ಯಾಲಯದ ನಡೆಯನ್ನು ಖಂಡಿಸಲಾಯಿತು ಹಾಗು ಹಿಂದಿನ ಪಠ್ಯ ಪರಿಷ್ಕರಣಾ ಸಮಿತಿಯ ಅಧ್ಯಕ್ಷರು ಹಾಗು ಸದಸ್ಯರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತುಮಕೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ರವರು ಪಠ್ಯಕ್ರಮದ ಮುಖ್ಯಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲು ಶಿಫಾರಸ್ಸು ಮಾಡುವುದಾಗಿ ಹಾಗು ಕೈಬಿಟ್ಟಿರುವ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪಠ್ಯವನ್ನು ನಮೂದಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವುದಾಗಿ ಲಿಖಿತ ರೂಪದಲ್ಲಿ ಭರವಸೆ ನೀಡಿದರು ಸಮಸ್ಯೆಯ ಶೀಘ್ರ ಇತ್ಯರ್ಥಕ್ಕಾಗಿ 15 ದಿನಗಳ ಕಾಲಾವಕಾಶ ಕೋರಿದ್ದಾರೆ.

 

ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ಬೆಳ್ಳಿ ಲೋಕೇಶ್, ತುಮಕೂರು ಮಹಾನಗರ ಪಾಲಿಕೆಯ ವಿರೋಧಪಕ್ಷದ ನಾಯಕ ಕುಮಾರ್ , ಮಂಜುನಾಥ್ ಹಾಗೂ ಅಂಬೇಡ್ಕರ್ ವಿಚಾರಧಾರೆಯ ಸಮಿತಿ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!