ಅಭಿಮಾನಿಯ ಮಗುವಿಗೆ ಸಿದ್ದರಾಮಯ್ಯ ಎಂದು ಹೆಸರಿಟ್ಟ _ಸಿದ್ದು.

ಅಭಿಮಾನಿಯ ಮಗುವಿಗೆ ಸಿದ್ದರಾಮಯ್ಯ ಎಂದು ಹೆಸರಿಟ್ಟ _ಸಿದ್ದು.

 

 

ತುಮಕೂರು_ ಕಳೆದ 20 ವರ್ಷಗಳಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಟ್ಟ ಅಭಿಮಾನಿಯಾಗಿರುವ ಮಧುಗಿರಿ ತಾಲೂಕಿನ ಗಂಗಾಧರ್ ಎಂಬುವವರು ತಮ್ಮ ಮಗುವಿಗೆ ಸಿದ್ದರಾಮಯ್ಯನವರ ಮೂಲಕ ಹೆಸರಿಡುವ ಮೂಲಕ ತಮ್ಮ ಮಾಗುವಿಗೆ ನಾಮಕರಣ ಮಾಡಿದ್ದಾರೆ.

 

 

 

ತುಮಕೂರಿನಲ್ಲಿ ಭಾನುವಾರ ಜನಮನ ಪ್ರತಿಷ್ಠಾನದ ವತಿಯಿಂದ ನಡೆದ ಸಿದ್ದರಾಮಯ್ಯನವರ ಆಡಳಿತ ಅಂತರಂಗ-ಬಹಿರಂಗ ಸಂಕಿರಣ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಗುವಿಗೆ ಹೆಸರಿಟ್ಟರು.

 

 

 

ಇನ್ನು ವೇದಿಕೆ ಕಾರ್ಯಕ್ರಮದಲ್ಲಿ ಮಗುವಿಗೆ ಸಿದ್ದರಾಮಯ್ಯ ಎಂದು ಹೆಸರಿಟ್ಟ ಅವರು ಮಕ್ಕಳನ್ನು ಚೆನ್ನಾಗಿ ಓದಿಸಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

 

 

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಗುವಿನ ತಂದೆ ಗಂಗಾಧರ್ ಅವರು ತಾನು ಕಳೆದ 20 ವರ್ಷದಿಂದ ಸಿದ್ದರಾಮಯ್ಯನವರ ಅಭಿಮಾನಿಯಾಗಿದ್ದು ತನ್ನ ಮಗುವಿಗೆ ಅವರ ಬಳಿಯಿಂದಲೇ ಹೆಸರು ಇಡುವ ಸಂಬಂಧ ಕಳೆದ ಕೆಲ ತಿಂಗಳುಗಳಿಂದ ಸತತವಾಗಿ ಪ್ರಯತ್ನಿಸಿದ್ದು ತನ್ನ ಮಗುವಿಗೆ ಮುಖ್ಯ ಮಾಜಿ ಮುಖ್ಯಮಂತ್ರಿ ಗಳಿಂದಲೇ ಹೆಸರಿಡುವ ಮೂಲಕ ನಾಮಕರಣ ಮಾಡಿರುವುದು ನಮಗೆ ಸಂತೋಷ ತಂದಿದೆ ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.

 

ಇನ್ನು ಕಾರ್ಯಕ್ರಮದಲ್ಲಿ ಮುಖಂಡರಾದ ವೈ ಎಸ್ ವಿ ದತ್ತ, ಮಧುಗಿರಿಯ ಮಾಜಿ ಶಾಸಕ ಕೆ ಎನ್ ರಾಜಣ್ಣ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು

 

 

ವರದಿ- ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!