ಡಿ.ಕೆ.ಶಿ ಹುಟ್ಟುಹಬ್ಬದ ಪ್ರಯುಕ್ತ :ಬೃಹತ್ ಆರೋಗ್ಯ ಶಿಬಿರ.
ಕುಣಿಗಲ್: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹುಟ್ಟುಹಬ್ಬದ ಅಂಗವಾಗಿ ಬೃಹತ್ ಆರೋಗ್ಯ ಮೇಳೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.
ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಡಿ. ಕೆ.ಎಸ್. ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೃಹತ್ ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಪ್ರಸಿದ್ಧ ಆಸ್ಪತ್ರೆ ತಜ್ಞ ವೈದ್ಯರಿಂದ ಆರೋಗ್ಯ ಶಿಬಿರ ನಡೆಸುವ ನಡೆಸುವ ಮೂಲಕ ಮಕ್ಕಳ, ಮಹಿಳೆಯರು, ಕೀಲು, ಮೂಳ ತಜ್ಞರು, ಚರ್ಮರೋಗ, ಹೃದಯರೋಗ, ಮದುಮೇಹ, ಸಕ್ಕರೆ ಕಾಯಿಲೆ, ಕಣ್ಣಿನ ಪರೀಕ್ಷೆ ಉಚಿತ ಸೇರಿದಂತೆ ಬೃಹತ್ ಆರೋಗ್ಯ ಮೇಳವನ್ನು ಶಾಸಕ ಡಾ.ಎಚ್.ಡಿ ರಂಗನಾಥ್ ಉದ್ಘಾಟಿಸಿ
ಮಾತನಾಡುತ್ತಾ ಮತನೀಡಿದ ಮತದಾರರಿಗೆ ಋಣ ತೀರಿಸಲು ಕ್ಷೇತ್ರಾದ್ಯಂತ ಈಗಾಗಲೇ 80ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಹಳ್ಳಿಗಾಡಿನ ಜನರ ಜೀವನ ಆರೋಗ್ಯವಂತರಾಗಿರಲು ಶಕ್ತಿಮೀರಿ ಶ್ರಮಿಸಲಾಗುತ್ತಿದೆ ಮನುಷ್ಯರು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಿ ಅವರ ಬದುಕನ್ನು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜೀವನದಲ್ಲಿ ಹಣದಿಂದ ಯಾವುದೇ ಆರೋಗ್ಯ ಪಡೆಯಲು ಸಾಧ್ಯವಿಲ್ಲ ಕಾಲಕಾಲಕ್ಕೆ ಆರೋಗ್ಯ ಪಡೆಯಲು ಸಾಧ್ಯವಿಲ್ಲ ಕಾಲಕಾಲಕ್ಕೆ ಆರೋಗ್ಯ ತಪಾಸಣೆಯಿಂದ ಹೊಂದಿ ನೆಮ್ಮದಿ ಜೀವನ ನಡೆಸಿ, ಜನರು ಶಾಂತಿ, ನೆಮ್ಮದಿಯಿಂದ ಸಾಗಿಸಬೇಕಾಗಿದೆ. ಕೊರನ ಸಂದರ್ಭದಲ್ಲಿ ಮುನ್ನೂರಕ್ಕೂ ಹೆಚ್ಚು ಆಡಿಟರ್ ಜನ ಸಾವನ್ನಪ್ಪಿದ್ದು ಐದು ಸಾವಿರಕ್ಕೂ ಹೆಚ್ಚು ರೋಗಿಗಳ ತಪಾಸಣೆ – ಚಿಕಿತ್ಸೆಯಿಂದ ಗುಣ ಪಡಿಸಲಾಗುವುದು ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು1000ರು ಹೆಚ್ಚಳ ಮಾಡಿ ಪೆಟ್ರೋಲ್, ಡೀಸೆಲ್, ದಿನಸಿ, ಅಡಿಗೆ ಎಣ್ಣೆ ,ನೀರು ವಿದ್ಯುತ್ತು ,ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 10 ಕಜಿ ಉಚಿತ, ಅಕ್ಕಿ, ಉಚಿತ, ನಿವೇಶನ, ರಸ್ತೆ, ವಿದ್ಯುತ್ತು. ವಿದ್ಯಾರ್ಥಿಗಳಿಗೆ ಪುಸ್ತಕ, ಕ್ಷೀರಭಾಗ ಯೋಜನೆಯನ್ನು ಜಾರಿಗಾಗಿ ಪಾದಯಾತ್ರ ಕೈಗೊಂಡು, ದೇವಾಂಬುದಿ ಕೆರೆಗೆ ನೀರು ಪಡಿಸಲಾಗುವುದು ಎಂದರು.
ಹಂಗರಳ್ಳಿ ವಿದ್ಯಾ ಚೌಡೇಶ್ವರಿ ಕ್ಷೇತ್ರದ ಶ್ರೀ ಬಾಲ ಮಂಜುನಾಥ ಸ್ವಾಮೀಜಿ ಮಾತನಾಡುತ್ತಾ ಡಿಕೆ ಶಿವಕುಮಾರ್ ಜನ್ಮದಿನದಂದು ಆರೋಗ್ಯ ಮಳೆ ನಡೆಸಿ ಯಾವುದೇ ಜಾತಿ ಧರ್ಮ ಹಲದೆ ಮಾನವೀಯ ಮೌಲ್ಯಗಳು ಎಲ್ಲರಿಗೂ ಆರೋಗ್ಯ ಭಾಗ್ಯ ಕಲಿಸುವಂತಹ ಇಂತಹ ಶಿಬಿರಗಳು ಹೆಚ್ಚು ಹೆಚ್ಚು ಆಯೋಜಿಸುವ ಶಕ್ತಿ ನೀಡುವಂತಾಗಲಿ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಎಲ್ಲರೂ ಶಾಂತಿಯಿಂದ ಬದುಕಬೇಕೆಂದರೆ… ಆರೇಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ ಮಾತನಾಡಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳು ನಡೆದಿದ್ದು, ವೈದ್ಯಕೀಯ ಕ್ಷೇತ್ರ ದುಬಾರಿ ಆಗುತ್ತಿರುವುದರಿಂದ ಇಂತಹ ಆರೋಗ್ಯ ಮುಕ್ತಿ ಮೇಳಗಳು ಹೆಚ್ಚು ನಡೆಯುವಂತಾಗಲಿ ಎಂದರು.ರಕ್ತ ದಾನ ಶಿಬಿರದಲ್ಲಿ ಸ್ವತಃ ಶಾಸಕರು ರಕ್ತ ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವಿ.ಜಿ.ವಿಶ್ವನಾಥ್, ವೆಂಕಟರಾಮು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ, ವೈದ್ಯ ಘಟಕದ ಸಂಘಟಕರಾದ ಡಾ.ಲೋಹಿತ್ , ಡಾ.ಮಹಾಂತೇಶ್,ಕಂಪೇಹಿರೇಗೌಡ, ಹಾಲುವಾಗಿಲು ಸ್ವಾಮಿ, ಬೇಗೂರು ನಾರಾಯಣ ಚಿಕ್ಕಣ್ಣ, ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜು ವೈದ್ಯರು ಹಾಗೂ ಮೈತ್ರಿ ನರ್ಸಿಂಗ್ ಕಾಲೇಜಿನ ಶುಶ್ರೂಷಕರು ಸೇರಿದಂತೆ ಹಲವರು ಆರೋಗ್ಯ ಶಿಬಿರದಲ್ಲಿ ಹಾಜರಿದ್ದರು .
ವರದಿ _ಮಾರುತಿ ಪ್ರಸಾದ್ ತುಮಕೂರು