ಪಕ್ಷ ಯಾವುದೇ ಜವಾಬ್ದಾರಿ ನೀಡಿದರು ನಿಭಾಯಿಸುವೆ_ಬಿ.ವೈ ವಿಜಯೇಂದ್ರ.
ತುಮಕೂರು_ ಇದುವರೆಗೂ ಬಿಜೆಪಿ ಪಕ್ಷ ಯಾವುದೇ ಜವಾಬ್ದಾರಿ ನೀಡಿದ್ದರು ಅದನ್ನ ನಿಭಾಯಿಸಿಕೊಂಡು ಬಂದಿದ್ದು ಮುಂದೆಯೂ ಸಹ ಯಾವುದೇ ತರಹದ ಜವಾಬ್ದಾರಿಯನ್ನು ಪಕ್ಷ ನೀಡಿದರು ನಿಭಾಯಿಸಿಕೊಂಡು ಹೋಗುವುದಾಗಿ ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಬಿ. ವೈ ವಿಜಯೇಂದ್ರ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಚಿವ ಸಂಪುಟದ ಬಗ್ಗೆ ಪ್ರತಿಕ್ರಿಯಿಸಿದ ಅವರು ಇನ್ನು ರಾಜ್ಯ ಸರ್ಕಾರದ ಸಚಿವ ಸಂಪುಟದ ಬಗ್ಗೆ ರಾಜ್ಯ ನಾಯಕರ ಅಪೇಕ್ಷೆ ಏನಿದೆ ಅನ್ನೋದು ಗೊತ್ತಿಲ್ಲ ಸಮಯ ಸಂದರ್ಭ ನೋಡಿಕೊಂಡು ರಾಜ್ಯ ನಾಯಕರು ನಿರ್ಧಾರ ಮಾಡಲಿದ್ದಾರೆ.
ಇದುವರೆಗೂ ಪಕ್ಷ ಯಾವುದೇ ಜವಾಬ್ದಾರಿ ನೀಡಿದರು ನಿಭಾಯಿಸಿಕೊಂಡು ಬಂದಿದ್ದು ಮುಂದೆಯೂ ಸಹ ನಿಭಾಯಿಸುವೆ ಎನ್ನುವ ಮೂಲಕ ತಾನು ಸಹ ಸಚಿವ ಸಂಪುಟದ ರೇಸ್ ನಲ್ಲಿ ಇರುವ ಬಗ್ಗೆ ಸೂಚನೆ ನೀಡಿದ್ದಾರೆ.
ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವ ಮಾನಸಿಕತೆ ಕಾಂಗ್ರೆಸ್ಗೆ ಇಲ್ಲ.
ಪಿಎಸ್ಐ ಅಕ್ರಮ ನೇಮಕಾತಿ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಸುಮಾರು 50ರಿಂದ 60 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವ ಮಾನಸಿಕತೆಯಲ್ಲಿ ಇಲ್ಲ .ಕಾಂಗ್ರೆಸ್ ಪಕ್ಷದ ಮುಖಂಡರು ಮೂರ್ಖರಿದ್ದಾರೆ ಹೀಗಾಗಿ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದರು.
ಇನ್ನು ಚುನಾವಣೆ ಯಾವಾಗ ಬರುತ್ತೆ ಎಂದು ಕಾಯುತ್ತಿರುವ ಕಾಂಗ್ರೆಸ್ ಯಾವಾಗ ಮತ್ತೆ ಅಧಿಕಾರಕ್ಕೆ ಬರುತ್ತಿವೋ ಅಂತ ಆತುರದಲ್ಲೇ ಹಗಲು ಕನಸು ಕಾಣುತ್ತಿದ್ದು ಅವರ ಕನಸು ನನಸಾಗುವುದಿಲ್ಲ ಮುಂದಿನ ಚುನಾವಣೆಯನ್ನು ಸಹ ಬಿಜೆಪಿ ಮತ್ತೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು.
ವರದಿ _ಮಾರುತಿ ಪ್ರಸಾದ್ ತುಮಕೂರು