ವಿದ್ಯುತ್ ಸ್ಪರ್ಶಗೊಂಡು ಜೂನಿಯರ್ ರವಿಚಂದ್ರನ್ ಖ್ಯಾತಿಯ ಕಲಾವಿದ ಸಾವು.
ಕುಣಿಗಲ್_ ಸಂಪ್‌ಗೆ ನೀರು ತುಂಬಿಸಲು ಮೋಟರ್ ಆನ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಸಂಗೀತ ಸಂಜೆ ಕಾರ್ಯಕ್ರಮದ ಕಲಾವಿದನೋರ್ವ ಮೃತಪಟ್ಟಿರುವ ಘಟನೆ ಕುಣಿಗಲ್ ತಾಲೂಕಿನ ಕಸಬಾ ಹೋಬಳಿ ಹೇರೂರು ಗ್ರಾಮದಲ್ಲಿ ಇಂದು ನಡೆದಿದೆ.
ಹೇರೂರು ಗ್ರಾಮದ ಲಕ್ಷ್ಮಿ ನಾರಾಯಣ್ (35) (ಜೂನಿಯರ್ ರವಿಚಂದ್ರನ್) ಮೃತ ದುರ್ದೈವಿ.
ಮೃತ ದುರ್ದೈವಿ ಲಕ್ಷ್ಮೀನಾರಾಯಣ್ ಹಲವು ಕಾರ್ಯಕ್ರಮಗಳಲ್ಲಿ ನಟ ರವಿಚಂದ್ರನ್ ರವರಂತೆ ಪೋಷಾಕು ಧರಿಸಿ ಹಲವು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು.
ಇನ್ನು ರಾಜ್ಯದ್ಯಂತ ಲಕ್ಷ್ಮೀನಾರಾಯಣ ಜೂನಿಯರ್ ರವಿಚಂದ್ರನ್ ಎಂದೇ ಖ್ಯಾತಿ ಪಡೆದಿದ್ದರೂ ಇನ್ನೂ ಅವರ ಸಾವು ಕೆಲ ಅಭಿಮಾನಿಗಳಿಗೂ ಸಹ ದಿಗ್ಭ್ರಮೆ ಮೂಡಿಸಿದೆ.