ಪಿಎಸ್ಐ ಮರುಪರೀಕ್ಷೆ ಸರ್ಕಾರಕ್ಕೆ ಅನಿವಾರ್ಯ ಗೃಹ ಸಚಿವರಾದ ಅರಗ ಜ್ಞಾನೇಂದ್ರ.
ತುಮಕೂರು_ ಯತ್ನಾಳ್ ಹೇಳಿಕೆ ನಿರ್ದಿಷ್ಟವಾಗಿ ಒಂದು ಪಕ್ಷಕ್ಕೆ ಸೀಮಿತವಾದ ಹೇಳಿಕೆಯಾಗಿಲ್ಲ ಹಾಗಾಗಿ ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಗೃಹಸಚಿವ ಅರಗ ಜ್ಞಾನೆಂದ್ರ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇನ್ನು ಯತ್ನಾಳ್ ಹೇಳಿಕೆ ಬಗ್ಗೆ ನಾನು ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಯತ್ನಾಳ್ ರವರು ರಾತ್ರಿಯಿಂದ ಅವರ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದೇವೆ ಆದರೆ ಅವರು ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ ಸಹಜವಾಗಿ ರಾಜಕಾರಣ ಅಂದ ಮೇಲೆ ಇಂಥವೆಲ್ಲ ಇದ್ದೇ ಇರುತ್ತದೆ ಎಂದು ಅವರು ಹೇಳಿರಬಹುದು.
ಅವರ ಹೇಳಿಕೆ ನಿರ್ದಿಷ್ಟವಾಗಿ ಇದೆ ಪಕ್ಷ ಎಂದು ಹೇಳಿರಲ್ಲ ಪಕ್ಷದ ವಿರುದ್ಧವೇ ಅವರು ಹೇಳಿದ್ದರೆ ಖಂಡಿತ ಅದು ಪಕ್ಷಕ್ಕೆ ಮುಜುಗರ ಬರುವ ವಿಚಾರ ಹಾಗೆ ಮಾತನಾಡಿದ್ದರೆ ಸಂಘಟನೆಯ ನೇತಾರರು ಕರೆದು ಅವರೊಂದಿಗೆ ಮಾತನಾಡಲಿದ್ದಾರೆ ಎಂದರು.
ಪಿಎಸ್ಐ ಮರು ಪರೀಕ್ಷೆ ಸರ್ಕಾರಕ್ಕೆ ಅನಿವಾರ್ಯ
ಪಿಎಸ್ಐ ಪರೀಕ್ಷೆ ಅಕ್ರಮ ಎಲ್ಲೇ ನಡೆಯಲಿ ಅದನ್ನ ತಪಾಸಣೆ ಮಾಡುತ್ತಿದ್ದಾರೆ ಅಷ್ಟೋ ಕೇಂದ್ರಗಳ ತಪಾಸಣೆ ನಡೆಯುತ್ತಿದೆ. ಪಿಎಸ್ಐ ಪರೀಕ್ಷೆ ಅಕ್ರಮ ತುಮಕೂರಿನಲ್ಲಿ ನಡೆದಿದೆಯೋ ಇಲ್ಲವೋ ಎನ್ನುವ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ.
ಪ್ರಾಮಾಣಿಕತೆಯಿಂದ ಪರೀಕ್ಷೆ ಬರೆದವರು ಆತ್ಮವಿಶ್ವಾಸದಿಂದ ಇನ್ನೊಮ್ಮೆ ಪರೀಕ್ಷೆ ಬರೆಯಲಿ ಸರ್ಕಾರಕ್ಕೆ ಮರುಪರೀಕ್ಷೆ ಅನಿವಾರ್ಯ ಎಂದು ಪಿಎಸ್ಐ ಪರೀಕ್ಷೆ ಸಂಬಂಧ ಮಾಹಿತಿ ನೀಡಿದ್ದಾರೆ.
ಇನ್ನು ಕಿಮ್ಮನೆ ರತ್ನಾಕರ್ ಅಂತಹ ಸಿಲ್ಲಿ ರಾಜಕಾರಣಿಗೆ ನಾನು ಪ್ರತಿಕ್ರಿಯಿಸಲ್ಲ ಇನ್ನು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ನವರು ಏನು ಬೇಕಾದರೂ ಹೇಳುತ್ತಾರೆ.
ಕಿಮ್ಮನೆ ರತ್ನಾಕರ್ ಅವಧಿಯಲ್ಲಿ ನಾಲ್ಕು ಬಾರಿ ಪಿಯುಸಿ ಪರೀಕ್ಷೆ ಲೀಕ್ ಆಯಿತು ಆ ಸಮಯದಲ್ಲಿ ಏಳು ಜನ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು ಆಗಿನ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಗೆ ನಾಚಿಕೆಯಾಗಬೇಕು. ಮುಂದಿನ ಪಿಎಸ್ಐ ಪರೀಕ್ಷೆಯಲ್ಲಿ ಹಾಜರಾಗುವ ಅಭ್ಯರ್ಥಿಗೆ ,ವಯಸ್ಸಿಗೆ ತೊಂದರೆಯಾಗುವುದಿಲ್ಲ ಹಾಗಾಗಿ ಪಿಎಸ್ಐ ಮರು ಪರೀಕ್ಷೆ ಅನಿವಾರ್ಯವಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ವರದಿ _ಮಾರುತಿ ಪ್ರಸಾದ್ ತುಮಕೂರು