ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಫೈಜಾಬಾದ್‌ನ ಮುಸ್ಲಿಂ ಸಮುದಾಯ

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಫೈಜಾಬಾದ್‌ನ ಮುಸ್ಲಿಂ ಸಮುದಾಯ

 

 

 

 

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಉತ್ತರ ಪ್ರದೇಶದ ಫೈಜಾಬಾದ್‌ನ ರಾಮಭವನದ ಮುಸ್ಲಿಂ ಸಮುದಾಯದ ಸದಸ್ಯರು ಭಾನುವಾರ ಹಣವನ್ನು ದೇಣಿಗೆ ನೀಡಿದ್ದರು.

 

ದೇಣಿಗೆ ಕುರಿತು ಮಾತನಾಡಿದ ಸದಸ್ಯ ಮುಸ್ಲಿಂ ರಾಷ್ಟ್ರೀಯ ಮಂಚ ಸದಸ್ಯರಾದ ಹಾಜಿ ಸಯೀದ್ ಅಹ್ಮದ್ ಅವರು, “ಭಗವಾನ್ ರಾಮ ಮತ್ತು ರಾಮ ಮಂದಿರ ಎಲ್ಲರಿಗೂ ಸೇರಿದೆ. ನಾವೆಲ್ಲರೂ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯದ ನಿರ್ಮಾಣಕ್ಕೆ ಸಹಕರಿಸುತ್ತೇವೆ” ಎಂದಿದ್ದಾರೆ.

 

ಅಯೋಧ್ಯೆಯಲ್ಲಿ ಬಾಬರ್ ಮತ್ತು ಮೊಘಲರು ಮಾಡಿದ್ದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದರು. ಭಗವಾನ್ ರಾಮ ಮತ್ತು ಅವರ ಬೋಧನೆಗಳು ಮೆಚ್ಚುಗೆಗೆ ಪಾತ್ರವಾಗಿವೆ ಎಂದಿದ್ದಾರೆ.

 

“ಭಗವಾನ್ ರಾಮ ನಮ್ಮ ಹಿಂದೂಸ್ಥಾನಕ್ಕೆ ಸೇರಿದವರು ಮತ್ತು ನಾವೂ ಈ ರಾಷ್ಟ್ರಕ್ಕೆ ಸೇರಿದವರು. ನಾವೆಲ್ಲರೂ ರಾಮನ ವಂಶಕ್ಕೆ ಸೇರಿದವರು. ನಾವು ಇರಾಕ್, ಇರಾನ್ ಅಥವಾ ಟರ್ಕಿಯವರಲ್ಲ. ಹಿಂದೂಗಳು ನಮ್ಮ ಸಹೋದರರು. ರಾಮ ನಮ್ಮ ಪೂರ್ವಜ ಮತ್ತು ನಮಗೆ ಅವನ ಬಗ್ಗೆ ಆಳವಾದ ಗೌರವವಿದೆ. ಅವರು ನಮಗೆ ಪ್ರವಾದಿಯಂತೆಯೇ ಇದ್ದಾರೆ “ಎಂದು ಅವರು ಹೇಳಿದ್ದಾರೆ.

 

ಈ ಸಂದರ್ಭದಲ್ಲಿ ಮಾತನಾಡಿದ ರಾಮ ಭವನ ಅಧ್ಯಕ್ಷ ಶಕ್ತಿ ಸಿಂಗ್, “ಇಂದು ‘ನಿಧಿ ಸಮರ್ಪಣಾ ಅಭಿಯಾನ’ದ ಮೂಲಕ ಫೈಜಾಬಾದ್‌ನ ಮುಸ್ಲಿಂ ಸಹೋದರರು ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ 5,100 ರೂ ದೇಣಿಗೆ ನೀಡಿದ್ದಾರೆ. ಭವಿಷ್ಯದಲ್ಲಿಯೂ ಸಹ ಅವರು ನಮಗೆ ಕೊಡುಗೆ ನೀಡುವುದಾಗಿ ತಿಳಿಸಿದ್ದಾರೆ. ಅವರು ದೇವಾಲಯದ ನಿರ್ಮಾಣದಲ್ಲಿ ಭಾಗವಹಿಸಲಿದ್ದಾರೆ” ಎಂದಿದ್ದಾರೆ.

 

ನಿಧಿ ಸಮರ್ಪಣಾ ಅಭಿಯಾನವು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆಸುತ್ತಿರುವ ನಿಧಿಸಂಗ್ರಹವಾಗಿದೆ

Leave a Reply

Your email address will not be published. Required fields are marked *

You cannot copy content of this page

error: Content is protected !!