ತುಮಕೂರು ಜಿಲ್ಲಾ ಆಸ್ಪತ್ರೆ ಮತ್ತು ಕಾರಾಗೃಹಕ್ಕೆ ಜಸ್ಟೀಸ್ ಬಿ.ವೀರಪ್ಪ ಅನಿರೀಕ್ಷಿತ ಭೇಟಿ.

ತುಮಕೂರು ಜಿಲ್ಲಾ ಆಸ್ಪತ್ರೆ ಮತ್ತು ಕಾರಾಗೃಹಕ್ಕೆ ಜಸ್ಟೀಸ್ ಬಿ.ವೀರಪ್ಪ ಅನಿರೀಕ್ಷಿತ ಭೇಟಿ.

 

 

ತುಮಕೂರು: ಇಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಜಸ್ಟೀಸ್ ಬಿ.ವೀರಪ್ಪನವರು ತುಮಕೂರು ಜಿಲ್ಲಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಸಾರ್ವಜನಿಕರು ಮತ್ತು ರೋಗಿಗಳ ಅಹವಾಲುಗಳನ್ನು ಆಲಿಸಿದರು,ಹೊರ ರೋಗಿಗಳು ಮತ್ತು ಒಳರೋಗಿಗಳನ್ನು ಭೇಟಿ ಮಾಡಿ ಅವರ ಕಷ್ಟ ಸುಖಗಳನ್ನು ಆಲಿಸಿ,ವೈದ್ಯರು ಸರಿಯಾಗಿ ರೋಗಿಗಳನ್ನು ನೋಡಿಕೊಳ್ಳುತ್ತಿದ್ದಾರೆಯೇ ಎಂದು ಕೇಳಿದರು,ಅಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ವಿಚಾರಿಸಿದರು,ಜಿಲ್ಲಾ ಆಸ್ಪತ್ರೆಯಲ್ಲಿ ಹಾವು ಕಚ್ಚಿದವರು,ಬಾಣಂತಿಯರು,ಸಕ್ಕರೆ ಖಾಯಿಲೆ,ಜಾಂಡಿಸ್ ನಿಂದ ಬಳಲುತ್ತಿರುವ ಚಿಕ್ಕ ಮಕ್ಕಳು,ರಕ್ತ ಇಲ್ಲದವರು,ಹಲವು ಖಾಯಿಲೆಗಳಿಂದ ಬಳಲುತ್ತಿರುವವರು,ಕಣ್ಣಿನ ಚಿಕಿತ್ಸೆ ಪಡೆಯುತ್ತಿರುವವರು ಎಲ್ಲರನ್ನೂ ಭೇಟಿ ಮಾಡಿದರು.

 

 

 

ಜಿಲ್ಲಾ ಆಸ್ಪತ್ರೆಯಲ್ಲಿ ದಾದಿಯರು ಸರಿಯಾಗಿ ಸ್ಪಂದಿಸದಿರುವುದು ಕಂಡು ಬಂದಿತು,ಇದರ ಬಗ್ಗೆ ದೂರು ಕೇಳಿದ ನ್ಯಾಯಾಧೀಶರು ದಾದಿಯರು ಸರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

 

 

ರೋಗಿಗಳಿಗೆ ಕಾಲಕಾಲಕ್ಕೆ ಊಟ,ಹಾಲು,ತಿಂಡಿ,ಔಷಧಿ ವಿತರಿಸುವಂತೆ ಸ್ಥಳದಲ್ಲಿದ್ದ ಜಿಲ್ಲಾ ಶಸ್ತç ಚಿಕಿತ್ಸಕ ಟಿ.ಎ.ವೀರಭದ್ರಯ್ಯನವರಿಗೆ ಸೂಚನೆ ನೀಡಿದರು.ಮತ್ತು ಶೌಚಾಲಯಗಳನ್ನು ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳಬೇಕು,ಯಾರೇ ಬಡವರು ಬಂದರೂ ಸರಿಯಾಗಿ ಸೂಕ್ತ ಸಮಯದಲ್ಲಿ ಉತ್ತಮ ವೈದ್ಯಕೀಯ ಸೇವೆಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿಯೇ ನೀಡಬೇಕೆಂದು ಸೂಚನೆ ನೀಡಿದರು.

 

 

ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ನ್ಯಾಯಾಧೀಶರು ಜೈಲಿನಲ್ಲಿರುವ ಖೈದಿಗಳ ಕಷ್ಟ ಸುಖಗಳನ್ನು ವಿಚಾರಿಸಿದರು,ಯಾವ ಖೈದಿಗೆ ವಕೀಲರ ಸೇವೆಯ ಅವಶ್ಯಕತೆ ಇದೆಯೋ ಅವರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತವಾಗಿ ವಕೀಲರನ್ನು ನೇಮಿಸಿಕೊಡಲಾಗುವುದು ಎಂದು ಹೇಳಿದರು,ಜೈಲಿನಲ್ಲಿರುವ ಶುದ್ಧ ಕುಡಿಯುವ ನೀರು,ಅಡಿಗೆ ಕೋಣೆ,ಗ್ರಂಥಾಲಯ,ಉದ್ಯಾನವನಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

 

ಖೈದಿಗಳು ತಮ್ಮ ಸಮಯ ಹಾಳು ಮಾಡದೆ ಗ್ರಂಥಾಲಯದಲ್ಲಿರುವ ಬುದ್ಧ, ಬಸವೇಶ್ವರ,ಅಂಬೇಡ್ಕರ್,ಭಗತ್ ಸಿಂಗ್,ಸ್ವಾಮಿ ವಿವೇಕಾನಂದ,ರಾಮಕೃಷ್ಣ ಪರಮಹಂಸ,ಹೀಗೆ ಲೋಕ ನಾಯಕರ ಪುಸ್ತಕಗಳನ್ನು ಓದಿ ತಮ್ಮ ಮನಸ್ಸನ್ನು ಪರಿವರ್ತಿಸಿಕೊಂಡು ತಮ್ಮ ಜೀವನವನ್ನು ಹಸನುಮಾಡಿ ಕೊಳ್ಳಬೇಕೆಂದು ಹೇಳಿದರು, ಪ್ರತಿದಿನ ಬೆಳಿಗ್ಗೆ ಯೋಗ,ಸೂರ್ಯನಮಸ್ಕಾರ,ಇಷ್ಟ ದೇವತೆಗಳ ಪ್ರಾರ್ಥನೆಗಳನ್ನುಮಾಡಿ ಇದರಿಂದ ತಮ್ಮ ಮನಸ್ಸು ಹಗುರವಾಗಿ ನೀವು ಪರಿವರ್ತನೆಗೊಳ್ಳುವಿರಿ ಎಂದು ತಿಳಿಸಿದರು.ಯಾವುದೋ ಒಂದು ಸಣ್ಣ ಸಿಟ್ಟಿನಿಂದ ಮಾಡಿದ ತಪ್ಪಿನಿಂದ ನೀವು ಇಂದು ಜೈಲಿನಲ್ಲಿ ಇದ್ದೀರಿ ನೀವು ಮನಸ್ಸು ಪರಿವರ್ತನೆ ಮಾಡಿಕೊಂಡು ಬಿಡುಗಡೆ ಹೊಂದಿ ಉತ್ತಮ ಜೀವನ ನಡೆಸಿ ಎಂದು ಹೇಳಿದರು.

 

 

ಈ ಸಂದರ್ಭದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್.ಶಶಿಧರ್ ಶೆಟ್ಟಿ,ಜೈಲು ಸೂಪರಿಟೆಂಡೆoಟ್ ಶಾಂತಶ್ರೀ, ನ್ಯಾಯಾಧೀಶರುಗಳಾದ ಡಿ.ಟಿ.ಪುಟ್ಟರಂಗಸ್ವಾಮಿ, ಶ್ರೀಮತಿ ಜೈಬುನ್ನಿಸಾ,ಡಿ.ಎಲ್.ಎಸ್.ಎ.ಆಡಳಿತಾಧಿಕಾರಿ ನರಸಿಂಹಪ್ಪ,ಜಿಲ್ಲಾ ಶಸ್ತ್ರ ಚಿಕಿತ್ಸಕ ಟಿ.ಎ.ವೀರಭದ್ರಯ್ಯ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!