ತುಮಕೂರಿನಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಬಲೆಗೆ ಬಿದ್ದ ಭ್ರಷ್ಟ ನೌಕರ  

ತುಮಕೂರಿನಲ್ಲಿ ಎಸಿಬಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ ತುಮಕೂರು ತಾಲ್ಲೂಕು ಅರಕೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀಧರ್ ಎ ಸಿ ಬಿ ಬಲೆಗೆ ಬಿದ್ದಿದ್ದಾರೆ. 

 

 

ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಯಾವುದೇ ಕೆಲಸ ಪಡೆಯಬೇಕಿದ್ದರೆ ಅಧಿಕಾರಿಗಳಿಗೆ ಲಂಚ ನೀಡಲೇಬೇಕು ಇಂಥ ಸಮಯದಲ್ಲಿ ಎಸಿಬಿ ಅಧಿಕಾರಿಗಳು ಹಾಗೂ ಸಾಮಾಜಿಕ  ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ಇವರುಗಳ ಹೋರಾಟದಿಂದ ಬಡ ರೈತರು ಮತ್ತು ಮಧ್ಯಮ ವರ್ಗದ ಸಾರ್ವಜನಿಕರು ಅಲ್ಪಪ್ರಮಾಣದ ನಿಟ್ಟುಸಿರು ಬಿಟ್ಟಂತೆ ಇದೆ ತಿಂಗಳಲ್ಲಿ ಒಬ್ಬ ಭ್ರಷ್ಟ ಅಧಿಕಾರಿಗಳು ಸಿಕ್ಕಿ ಜೈಲು ಪಾಲುದಾರ ಭ್ರಷ್ಟಾರ ಬಿಡದೆ ಅಧಿಕಾರಿಗಳು. ಸರಣಿ ಭ್ರಷ್ಟಾರ ಮುಂದುವರೆಸಿದ್ದಾರೆ ತುಮಕೂರು ತಾಲ್ಲೂಕು ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಲಿ ನಿವೇಶನದ ಈ ಸ್ವತ್ತು ಮಾಡಿಸಿ ಕೊಳ್ಳಲು ಅರುಣ್ ಕುಮಾರ್ ಅರ್ಜಿ ನೀಡಿದ್ದು ಪಂಚಾಯಿತಿ ಕಾರ್ಯದರ್ಶಿ ಶ್ರೀಧರ್ 7500 ಲಂಚಕ್ಕೆ ಬೇಡಿಕೆ ಇಟ್ಟು 3000 ಹಣ ಮುಂಗಡವಾಗಿ ಪಡೆದು ಉಳಿದ 4500 ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ ಸಾರ್ವಜನಿಕ ವಲಯದಲ್ಲಿ ಸಾಮಾಜಿಕ ಕಾರ್ಯಕರ್ತ ಜೆಟ್ಟಿ ಅಗ್ರಹಾರ ನಾಗರಾಜು ಅವರ ಹೋರಾಟಕ್ಕೆ ಎಸಿಬಿ ಅಧಿಕಾರಿಗಳ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

ಜಿಲ್ಲಾ ಪಂಚಾಯತ್ CEO ವಿದ್ಯಾಕುಮಾರಿ ನಿರ್ಲಕ್ಷ್ಯತಾಲ್ಲೂಕು ಪಂಚಾಯಿತ್ ಕಾರ್ಯನಿರ್ವಾಹಕ ಅಧಿಕಾರಿ ಜೈಪಾಲ್ ಕುಮ್ಮಕ್ಕು ನಿಂದ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಏಳೋರು ಇಲ್ಲ ಕೇಳೋರು ಇಲ್ಲವಂತ ಆಗಿದೆ NREG ವರ್ಕ್ ಕಳಪೆ ಗುಣಮಟ್ಟದ ಕಾಮಗಾರಿ ಕೆಲವು ಕೆಲಸ ಮಾಡದೆ ಬಿಲ್ ಮಾಡಿಕೊಳ್ಳುತ್ತಾರೆ ಸ್ಟ್ರೀಟ್ ಲೈಟ್ ಬಲ್ಬ್ ಹಗರಣ ಮೋಟಾರ್ ಪಂಪ್ ಸೆಟ್ ಕೊಳ್ಳುವುದರಲ್ಲಿ ಕಳಪೆ ಹಗರಣ NREG ಹಣ ಬಿಡುಗಡೆ ಮಾಡಲು ಇಂಜಿನಿಯರ್ pdo 30% ಕಮಿಷನ್ ದಂಧೆ ಒಟ್ಟಾಗಿ ಹೇಳುವುದಾದರೆ ಗ್ರಾಮಪಂಚಾಯತ್ ಗಳಲ್ಲಿ ಸಾಲು ಸಾಲು ಹಗರಣ ಸರಮಾಲೆಯೇ ಸರಿ ಕ್ರಮಕೈಗೊಳ್ಳಬೇಕಾದ ಜಿಲ್ಲಾಪಂಚಾಯತ್ CEO ಮೌನ ಸಾರ್ವಜನಿಕರು ಎಷ್ಟೇ ದೂರುಗಳು ನೀಡಿದರು ಒಂದಕ್ಕೂ ಕ್ರಮಕೈಗೊಳ್ಳುವುದಿಲ್ಲ ಮೊದಲು ಜಿಲ್ಲಾ ಪಂಚಾಯತ್CEO ವರ್ಗವಾಣೆ ಆಗಿ ಉತ್ತಮ ಜನಸ್ನೇಹಿCEO ಬಂದರೆ ಮಾತ್ರ ಇದಕ್ಕೆಲ್ಲ ಪರಿಹಾರ ಎಂದು ಸಾಮಾಜಿಕ ಹೋರಾಟಗಾರ ಪತ್ರಕರ್ತ ಜೆಟ್ಟಿ ಅಗ್ರಹಾರ ನಾಗರಾಜು ಬೆಸರ ವ್ಯಕ್ತಪಡಿಸಿದರು

 

ಕಾರ್ಯಾಚರಣೆ ವೇಳೆ ಡಿವೈಎಸ್ಪಿ ಮಲ್ಲಿಕಾರ್ಜುನ್ ಚುಕ್ಕಿ ಇನ್ಸ್ಪೆಕ್ಟರ್ ವಿರೇಂದ್ರ ವಿಜಯಲಕ್ಷ್ಮಿ ನರಸಿಂಹರಾಜು ಚಂದ್ರು ಶಿವಣ್ಣ ನವೀನ್ ಕುಮಾರ್ ಸುರೇಶ್ ಇನ್ನಿತರರಿದ್ದರು.

 

ವರದಿ _ಮಾರುತಿ ಪ್ರಸಾದ್ ತುಮಕೂರು

One thought on “ತುಮಕೂರಿನಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಬಲೆಗೆ ಬಿದ್ದ ಭ್ರಷ್ಟ ನೌಕರ  

  1. Yella gramapanchythiyallu ede karma entha brasta adikarigalige janare buddi kalasabeku

Leave a Reply

Your email address will not be published. Required fields are marked *

You cannot copy content of this page

error: Content is protected !!